ETV Bharat / state

ಬ್ಲಾಕ್ ಚೈನ್ ತಂತ್ರಜ್ಞಾನ ಮೂಲಕ SSLC ಅಂಕಪಟ್ಟಿಗಳ ಮಾಹಿತಿ ಸಂಗ್ರಹಣೆ - blockchain technology to save sslc markscard

ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು,ಪ್ರಸ್ತುತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019- 2020 ನೇ ಸಾಲಿನ ಪ್ರಮಾಣಪತ್ರಗಳನ್ನು ಸರ್ಟಿಫಿಕೇಟ್ ಚೈನ್‌ನಲ್ಲಿ ದಾಖಲಿಸಲಾಗುತ್ತಿದೆ ಮತ್ತು ಕ್ರಮೇಣ ಹಿಂದಿನ ವರ್ಷಗಳ ಪ್ರಮಾಣಪತ್ರಗಳ ಮಾಹಿತಿಯನ್ನು ಅಳವಡಿಸಲಾಗುತ್ತದೆ.

blockchain technology to  save sslc markscard documents
ಬ್ಲಾಕ್ ಚೈನ್ ತಂತ್ರಜ್ಞಾನ
author img

By

Published : Sep 12, 2020, 12:17 AM IST

ಬೆಂಗಳೂರು: ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಪ್ರಥಮವಾಗಿ ಮುಂಚೂಣಿಯಲ್ಲಿದೆ.

ಈ ನವೀನ ತಂತ್ರಜ್ಞಾನವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎನ್.ಐ.ಸಿ(ನ್ಯಾಷನಲ್ ಎನ್ ಫಾರ್ ಮೆಟ್ರಿಕ್ಸ್ ಸೆಂಟರ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.ಮಂಡಳಿಯ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬ್ಲಾಕ್ ಚೈನ್ ತಂತ್ರಜ್ಞಾನ ವನ್ನು ಬಳಸಿ ಸರಪಳಿಯಂತೆ ಜೋಡಿಸುವ ಮೂಲಕ ಪ್ರಮಾಣ ಪತ್ರ ಸರಪಳಿಯನ್ನು(ಸರ್ಟಿಫಿಕೇಟ್ ಚೈನ್) ರೂಪಿಸಲಾಗಿದೆ.

ಸರ್ಟಿಫಿಕೇಟ್ ಚೈನ್ ತಂತ್ರಾಂಶದಲ್ಲಿ ಪ್ರಮಾಣಪತ್ರಗಳನ್ನು ವಿವಿಧ ಸ್ಥಳಗಳಲ್ಲಿನ ಸರ್ವರ್ ಗಳ ಪಾಲುದಾರರೊಂದಿಗೆ ದಾಖಲಿಸಲಾಗುತ್ತದೆ. ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣದ ಪ್ರವೇಶ ಪ್ರಕ್ರಿಯೆಯಲ್ಲಿ ಎದುರಾಗಿರುವ ಒಂದು ಸವಾಲಿನ ಕೆಲಸವಾದರೆ ಅಭ್ಯರ್ಥಿಗಳ ಆಯ್ಕೆ ಮತ್ತು ಅಭ್ಯರ್ಥಿಗಳು ನೀಡಿದ ಪ್ರಮಾಣಪತ್ರಗಳ ಪರಿಶೀಲನೆ. ಈ ಪರಿಶೀಲನಾ ಕಾರ್ಯಕ್ಕೆ ಸಂಬಂಧಪಟ್ಟ ಮಂಡಳಿಗಳು/ವಿಶ್ವವಿದ್ಯಾಲಯಗಳು ಅತಿ ಹೆಚ್ಚು ಸಮಯ ಮತ್ತು ಸಂಸ್ಕರಣೆ ಸಮಯವನ್ನು ತೆಗೆದುಕೊಳ್ಳುತ್ತದೆ.

ಸರ್ಟಿಫಿಕೇಟ್ ಚೈನ್ ತಂತ್ರಜ್ಞಾನವನ್ನು ನ್ಯಾಷನಲ್ ಇನ್ಸಾರ್‌ಮೆಟಿಕ್ಸ್ ಸೆಂಟರ್‌ನ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಬ್ಲಾಕ್ ಜೈನ್ ರವರು, ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಿದ್ದಾರೆ. ಪ್ರಸ್ತುತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019- 2020 ನೇ ಸಾಲಿನ ಪ್ರಮಾಣಪತ್ರಗಳನ್ನು ಸರ್ಟಿಫಿಕೇಟ್ ಚೈನ್‌ನಲ್ಲಿ ದಾಖಲಿಸಲಾಗುತ್ತಿದೆ ಮತ್ತು ಕ್ರಮೇಣ ಹಿಂದಿನ ವರ್ಷಗಳ ಪ್ರಮಾಣಪತ್ರಗಳ ಮಾಹಿತಿಯನ್ನು ಅಳವಡಿಸಲಾಗುತ್ತದೆ.

ಈ ವಿಧಾನದಿಂದ ದತ್ತಾಂಶವನ್ನು ಸುರಕ್ಷಿತವಾಗಿ ಸಂರಕ್ಷಿಸಬಹುದು:
ಬ್ಲಾಕ್ ಚೈನ್ ತಂತ್ರಜ್ಞಾನದಲ್ಲಿ ಮಾಹಿತಿಯನ್ನು ಅಪ್‌ಡೇಟ್ ಮಾಡುವಾಗ ಹಳೆಯ ಮಾಹಿತಿಯನ್ನು ಅಳಿಸಲಾಗುವುದಿಲ್ಲ. ಹಳೆಯ ಮಾಹಿತಿಯ ಜೊತೆಗೆ ಹೊಸ ಮಾಹಿತಿಯು ಡೇಟಾ ಬ್ಲಾಕ್‌ಗಳ ಮೂಲಕ ಹಳೆಯ ಮಾಹಿತಿಯೊಡನೆ ಶೇಖರಣೆಯಾಗುತ್ತದೆ. ಹೊಸ ಮಾಹಿತಿಯನ್ನು ಅಳವಡಿಸುವ ಹಾಗೂ ದತ್ತಾಂಶವನ್ನು ಮಾರ್ಪಡಿಸುವಾಗ ದತ್ತಾಂಶದ ಅಧಿಕೃತ ಅಧಿಕಾರಿಯ ಡಿಜಿಟಲ್ ಸಹಿ ನೀಡಿ ಅಪ್‌ಡೇಟ್ ಮಾಡಬೇಕಾಗುತ್ತದೆ, ಈ ವಿಧಾನದಿಂದ ದತ್ತಾಂಶವನ್ನು ಸುರಕ್ಷಿತವಾಗಿ ಸಂರಕ್ಷಿಸಬಹುದಾಗಿರುತ್ತದೆ.

ಇದರ ಪ್ರಯೋಜನಗಳೇನು:

  • ಸರ್ಟಿಫಿಕೇಟ್ ಚೈನ್‌ನನ್ನು ವಿವಿಧ ಶಿಕ್ಷಣ ಸಂಸ್ಥೆಗಳು ಉನ್ನತ ವ್ಯಾಸಂಗ ಪ್ರವೇಶಕ್ಕಾಗಿ ಹಾಗೂ ವಿವಿಧ ಕಂಪನಿಗಳು ಉದ್ಯೋಗ ನೀಡುವ ಸಂದರ್ಭದಲ್ಲಿ ಉದ್ಯೋಗಿಗಳ ಅಂಕಪಟ್ಟಿಗಳನ್ನು ನೇರವಾಗಿ ಪರಿಶೀಲಿಸಲು ಬಳಸಬಹುದು.
  • ಈ ತಂತ್ರಜ್ಞಾನವು ಪಾರದರ್ಶಕತೆ, ಟ್ಯಾಂಪರ್ ಫ್ರೂಫ್, ಸುರಕ್ಷತೆ, ಸಂಪೂರ್ಣ ವಿಶ್ವಾಸಾರ್ಹತೆಯಿಂದ ಕೂಡಿರಲಿದೆ..‌
  • ದತ್ತಾಂಶಗಳನ್ನು ಬದಲಿಸಲಾಗದ ತಂತ್ರಜ್ಞಾನ, ಸಂಪೂರ್ಣ ಸ್ವಯಂಚಾಲಿತ-ಮಾನವ ಹಸ್ತಕ್ಷೇಪ ರಹಿತ, ದತ್ತಾಂಶದ ಸಂಪೂರ್ಣ ಮಾಹಿತಿ ಮತ್ತು ಪ್ರಮಾಣಪತ್ರ ಕಾಗದರಹಿತ ಬಳಕೆಗೆ ಕಾರಣವಾಗುತ್ತದೆ.
  • ಪ್ರಮಾಣ ಪತ್ರಗಳ ಪರಿಶೀಲನೆಗೆ ಮೂರನೇ ವ್ಯಕ್ತಿಯ ಅವಲಂಬನೆಯನ್ನು ನಿವಾರಿಸುತ್ತದೆ ಹಾಗೂ ಪರಿಶೀಲನಾ ಕಾರ್ಯದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿ ಕಾಗದರಹಿತ ಆಡಳಿತವನ್ನು ಉತ್ತೇಜಿಸುತ್ತದೆ.
  • ಮಂಡಳಿಯು ಉಚಿತವಾಗಿ ಡಿಜಿಲಾಕರ್ ಮೂಲಕ ನೀಡುತ್ತಿರುವ ಸೇವೆಯು ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ಎನ್.ಐ.ಸಿ ಸರ್ವ‌ರ್ ಶೇಖರಿಸಲಾದ ದತ್ತಾಂಶಗಳನ್ನು ಬಳಸುವುದರಿಂದ ಉನ್ನತ ಮಟ್ಟದ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಈ ತಂತ್ರಾಂಶದ ಹೆಗ್ಗಳಿಕೆ ಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.