ETV Bharat / state

ಜನ ಸ್ಪಂದನ, ಮೋದಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ದುಡ್ಡು ವಸೂಲಿ: ನಿಸರ್ಗ ನಾರಾಯಣ ಸ್ವಾಮಿ ಆರೋಪ

author img

By

Published : Nov 17, 2022, 11:39 AM IST

ಅವರು ನಾವು ಹಣ ತಗೊಂಡಿಲ್ಲ ಎಂದು ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಲಿ ಎಂದು ಶಾಸಕ ನಿಸರ್ಗ ನಾರಾಯಣ ಸ್ವಾಮಿ ಬಿಜೆಪಿ ವಿರುದ್ಧ ಸವಾಲು ಹಾಕಿದ್ದಾರೆ.

MLA Nisarga Narayan Swamy
ಶಾಸಕ ನಿಸರ್ಗ ನಾರಾಯಣ ಸ್ವಾಮಿ

ದೇವನಹಳ್ಳಿ: ಜನ ಸ್ಪಂದನ ಕಾರ್ಯಕ್ರಮ ಮತ್ತು ಮೋದಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ದುಡ್ಡು ವಸೂಲಿ ಮಾಡಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಶಾಸಕ ನಿಸರ್ಗ ನಾರಾಯಣ ಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ನೇರ ಆರೋಪ ಮಾಡಿದ್ದಾರೆ. ದೇವನಹಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ನಿಸರ್ಗ ನಾರಾಯಣ ಸ್ವಾಮಿ

ಜನ ಸ್ಪಂದನ ಕಾರ್ಯಕ್ರಮ ಮತ್ತು ಮೋದಿ ಕಾರ್ಯಕ್ರಮಕ್ಕೆ ಪಿಡಿಒ ಹಾಗೂ ಅಧಿಕಾರಿಗಳಿಂದ ಬಿಜೆಪಿ ಸರ್ಕಾರ ಹಣ ವಸೂಲಿ ಮಾಡಿದೆ. ಸಮಾವೇಶಕ್ಕೆ ಅಧಿಕಾರಿಗಳಿಂದ ಸಿಪ್ಪೆ ಸುಲಿದ ರೀತಿ ಹಣ ಸುಲಿದಿದ್ದಾರೆ. ಒಬ್ಬೊಬ್ಬ ಪಿಡಿಒನಿಂದ ಐವತ್ತು ಸಾವಿರ ರೂ. ಸುಲಿಗೆ ಮಾಡಿದ್ದಾರೆ. ಪಿಡಿಒಗಳ ಸಂಬಳ ಐವತ್ತು ಸಾವಿರ ಇರುವುದಿಲ್ಲ ಎಂಬುದು ಗೊತ್ತು. ಆದರೂ ಕೇಳಿದ್ದಾರೆ ಎಂದರೆ ಭ್ರಷ್ಟಾಚಾರ ಮಾಡಿ ನಮಗೆ ಕೊಡಿ ಎನ್ನುವುದು ಇದರ ಅರ್ಥ ಎಂದರು.

ಅಧಿಕಾರಿಗಳಿಂದ ಮೋದಿ ಸಮಾವೇಶಕ್ಕೆ 25 ಸಾವಿರ ಪಡೆದುಕೊಂಡಿದ್ದಾರೆ. ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಅವರು ನಾವು ಹಣ ತೆಗೆದುಕೊಂಡಿಲ್ಲ ಎಂದು ಹೇಳಲಿ ಎಂದು ನಿಸರ್ಗ ನಾರಾಯಣಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ಸವಾಲು ಹಾಕಿದರು.

ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮದ ಯಶಸ್ಸು ನೋಡಿ ಕಾಂಗ್ರೆಸ್​ ವಿಚಲಿತ: ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.