ETV Bharat / state

ಬೆಂಗಳೂರು, ಸ್ಯಾನ್ ಫ್ರಾನ್ಸಿಸ್ಕೊ ನೇರ ವಿಮಾನಯಾನಕ್ಕೆ ಆರಂಭದಲ್ಲೇ ವಿಘ್ನ - Bangalore and San Francisco flight

ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವಿನ ವಿಮಾನಯಾನ ಹೊಸ ಭರವಸೆಯನ್ನು ಮೂಡಿಸಿತ್ತು. ಆದರೆ, ಕೋವಿಡ್ ಎರಡನೇ ಅಲೆ ಮತ್ತು ಯುಎಸ್​ನಲ್ಲಿ ಲ್ಯಾಂಡಿಂಗ್​ ಸಮಸ್ಯೆ ಮತ್ತು ಪ್ರಯಾಣಿಕರ ಕೊರತೆ ತಡೆರಹಿತ ವಿಮಾನಯಾನಕ್ಕೆ ತೊಂದರೆಯಾಗಿದೆ.

ವಿಮಾನ
ವಿಮಾನ
author img

By

Published : Aug 26, 2022, 3:53 PM IST

ದೇವನಹಳ್ಳಿ: ಎರಡು ಟೆಕ್ ಹಬ್​ಗಳಾದ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವೆ ಪ್ರಾರಂಭವಾದ ತಡೆರಹಿತ ವಿಮಾನ ಪ್ರಾರಂಭವಾದ ವೇಗದಲ್ಲೇ ನಿಂತು ಹೋಗಿದೆ. ಕೋವಿಡ್ ಮತ್ತು ಪ್ರಯಾಣಿಕರ ಕೊರತೆ ಇದಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತವನ್ನು ಯುಎಸ್​ನೊಂದಿಗೆ ಸಂಪರ್ಕಿಸುವ ಮೊದಲ ವಿಮಾನ ಮಾರ್ಗ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ, ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಯುಎಸ್ ಸಿಲಿಕಾನ್ ಸಿಟಿ ಸ್ಯಾನ್ ಫ್ರಾನ್ಸಿಸ್ಕೊ ನಡುವೆ ತಡೆರಹಿತ ನೇರ ವಿಮಾನಯಾನ ವ್ಯವಸ್ಥೆಯನ್ನು ಏರ್ ಇಂಡಿಯಾ ಪ್ರಾರಂಭಿಸಿ ಹೊಸ ದಾಖಲೆ ಸೃಷ್ಟಿಸಿತ್ತು.

2021ರ ಜನವರಿ 10 ರಂದು ಸ್ಯಾನ್ ಫ್ರಾನ್ಸಿಸ್ಕೊದಿಂದ ಹಾರಿದ AI 176 ವಿಮಾನ ಜನವರಿ 11ರ ಮುಂಜಾನೆ 3 ಗಂಟೆ ಸಮಯದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. 13,993 ಕಿ. ಮೀ ದೂರವನ್ನು 16 ತಾಸುಗಳಲ್ಲಿ ಕ್ರಮಿಸಿದ ವಿಮಾನ ವಿಶೇಷ ಸಾಧನೆ ಮಾಡಿತ್ತು. ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿದ್ದ ಏರ್ ಇಂಡಿಯಾ ವಿಮಾನದಲ್ಲಿ 4 ಮಹಿಳಾ ಪೈಲಟ್​ಗಳು, 12 ಕ್ಯಾಬಿನ್ ಸಿಬ್ಬಂದಿಯೂ ಸಹ ಮಹಿಳೆಯರೇ ಆಗಿದ್ದು, 238 ಪ್ರಯಾಣಿಕರು ಮೊದಲ ವಿಮಾನಯಾನ ಸೇವೆ ಪಡೆದಿದ್ದರು.

ಹೀಗಾಗಿ, ಉಭಯ ನಗರಗಳ ನಡುವಿನ ವಿಮಾನಯಾನ ಹೊಸ ಭರವಸೆಯನ್ನು ಮಾಡಿಸಿತ್ತು. ಆದರೆ, ಭಾರತದಲ್ಲಿ ಅಪ್ಪಳಿಸಿದ ಕೋವಿಡ್ ಎರಡನೇ ಅಲೆ ಮತ್ತು ಯುಎಸ್​ನಲ್ಲಿ ಲ್ಯಾಂಡಿಂಗ್​ ಸಮಸ್ಯೆ ಮತ್ತು ಪ್ರಯಾಣಿಕರ ಕೊರತೆ ಸಹ ತಡೆರಹಿತ ವಿಮಾನಯಾನಕ್ಕೆ ತಡೆಯಾಗಿದೆ.

ಮಾರ್ಚ್ 26 ರಂದು AI 176 ಬೆಂಗಳೂರಿನ ಕೆಐಎಎಲ್​ನಲ್ಲಿ ಲ್ಯಾಂಡ್ ಆದ ವಿಮಾನ ಮತ್ತು ಮಾರ್ಚ್ 28 ರಂದು AI175 ವಿಮಾನ ಕೆಐಎಎಲ್ ನಿಂದ ಟೆಕ್ ಆಫ್ ಆದ ವಿಮಾನವೇ ಬೆಂಗಳೂರು ಮತ್ಥು ಸ್ಯಾನ್ ಫ್ರಾನ್ಸಿಸ್ಕೊ ನಡುವಿನ ಕೊನೆಯ ವಿಮಾನ ಹಾರಾಟವಾಗಿದೆ. ಕೆಐಎಎಲ್ ನ ಮಾಹಿತಿ ಪ್ರಕಾರ, ಅಕ್ಟೋಬರ್ ನಲ್ಲಿ ಮತ್ತೆ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವೆ ತಡೆರಹಿತ ವಿಮಾನಯಾನ ಆರಂಭವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಅ.12ರೊಳಗೆ ಬೆಂಗಳೂರು ಸೇರಿ 13 ನಗರಗಳಲ್ಲಿ 5ಜಿ ಸೇವೆ ಆರಂಭಿಸಲಿರುವ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.