ETV Bharat / state

ಬಿರುಗಾಳಿ ಸಹಿತ ಭಾರಿ ಮಳೆ.. ಅಮಿತ್​ ಶಾ ಅವರ ರೋಡ್ ಶೋ ರದ್ದು - ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ

ದೇವನಹಳ್ಳಿ ವಿಧನಾಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಅವರ ಪರ ರೋಡ್ ಶೋ ನಡೆಸಲು ಅಮಿತ್ ಶಾ ಅವರು ಆಗಮಿಸಿದ್ದರು. ಆದರೆ, ನಿಗದಿತ ಅವಧಿಗೆ ಅರ್ಧ ಗಂಟೆ ಮುಂಚಿತವಾಗಿಯೇ ಮಳೆ ಸುರಿದಿದ್ದರಿಂದ ರೋಡ್​ ಶೋ ರದ್ದಾಗಿದೆ.

ಭಾರಿ ಮಳೆಯಿಂದ ಅಮಿತ್ ಶಾ ರೋಡ್​ ಶೋ ರದ್ದು
ಭಾರಿ ಮಳೆಯಿಂದ ಅಮಿತ್ ಶಾ ರೋಡ್​ ಶೋ ರದ್ದು
author img

By

Published : Apr 21, 2023, 6:54 PM IST

Updated : Apr 21, 2023, 8:32 PM IST

ಧಾರಾಕಾರ ಮಳೆ ಹಿನ್ನೆಲೆ ಅಮಿತ್ ಶಾ ರೋಡ್​ ಶೋ ರದ್ದು

ದೇವನಹಳ್ಳಿ : ಧಾರಾಕಾರ ಮಳೆಯಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ರದ್ದಾಗಿದೆ. ಅಮಿತ್ ಶಾ ಅವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಅವರ‌ ಪರ ರೋಡ್ ಶೋ ನಡೆಸಲು ಬಂದಿದ್ದರು.

ಇಂದು ಸಂಜೆ 4.30ಕ್ಕೆ ರೋಡ್ ಶೋ ನಿಗದಿಯಾಗಿತ್ತು. ಆದರೆ, ನಿಗದಿತ ಅವಧಿಗೆ ಅರ್ಧ ಗಂಟೆ ಮುಂಚೆಯೇ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಮಳೆ ಕಡಿಮೆಯಾದ ಬಳಿಕ ರೋಡ್ ಶೋ ನಡೆಸಲು ಉದ್ದೇಶಿಸಿದ್ದರೂ ಮಳೆ ನಿಲ್ಲಲಿಲ್ಲ. ಜೊತೆಗೆ ರೋಡ್ ಶೋ ನಡೆಯಬೇಕಿದ್ದ ರಸ್ತೆಯಲ್ಲಿ ನೀರು ನಿಂತು ಕೆಸರಿನಂತಾಗಿತ್ತು.

ಇದನ್ನೂ ಓದಿ : ಲಿಂಗಾಯತ ಮತಗಳನ್ನು ಸೆಳೆಯಲು ಶೆಟ್ಟರ್​ಗೆ ಟಾಸ್ಕ್ ಕೊಟ್ಟ 'ಕೈ': ಶೆಟ್ಟರ್ ಹಣಿಯಲು ಆರ್​ಎಸ್​ಎಸ್​ ರಣತಂತ್ರ..

ಈ ಹಿನ್ನೆಲೆಯಲ್ಲಿ ರೋಡ್ ಶೋ ರದ್ದುಪಡಿಸಲು ಬಿಜೆಪಿ ನಾಯಕರು ತೀರ್ಮಾನಿಸಿದರು. ಮಳೆಯ ಕಾರಣದಿಂದ ಅಮಿತ್ ಶಾ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಬೆಂಗಳೂರಿಗೆ ತೆರಳಿದರು. ಮಳೆಯ ಕಾರಣ ಕಾರ್ಯಕರ್ತರು ಆಗಮಿಸಲು ತಡವಾಯ್ತು. ಇದರಿಂದ ರೋಡ್ ಷೋ ಮುಂದೂಡಿದ್ದೇವೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ. ಮಳೆ ಶುಭಸೂಚನೆ ನೀಡಿದ್ದು, ಜಿಲ್ಲೆಯ ನಾಲ್ಕು ಸ್ಥಾನಗಳನ್ನ ಗೆಲ್ಲುತ್ತೇವೆ. ಬಂದಿರುವ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಹೀಗಾಗಿ ವಿಜಯಪುರ ಪಟ್ಟಣಕ್ಕೆ ಭೇಟಿ ನೀಡಿದ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರು ಇಂದಿನ ಭದ್ರತೆ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದರು. ಇನ್ನು ಇಂದಿನ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಇದನ್ನೂ ಓದಿ : ಸಿಕ್ಕಾಪಟ್ಟೆ ಲೀಡರ್​ಗಳಾಗಿದ್ದಾರೆ, ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ: ಬಿ ಎಲ್ ಸಂತೋಷ್

ಎರಡು ಗಂಟೆಗಳ ಕಾಲ ರೋಡ್ ಶೋ ಆಯೋಜನೆಯಾಗಿತ್ತು: ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಗೆಲುವಿಗೆ ಅಮಿತ್ ಶಾ ಅವರ ರೋಡ್ ಶೋ ನೆರವಾಗಲಿದೆ. ಅಮಿತ್ ಶಾ ಅವರು ಸುಮಾರು ಎರಡು ಗಂಟೆಗಳ ಕಾಲ ರೋಡ್ ಶೋದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ‌ ಮೂಲಗಳು ತಿಳಿಸಿದ್ದವು.

ರೋಡ್​ ಶೋ ವೇಳೆ ಭಾಷಣ ಮಾಡಲಿದ್ದರು ಅಮಿತ್ ಶಾ: ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಿಳ್ಳಮುನಿಶಾಮಪ್ಪ ಅವರು, ಅಮಿತ್​ ಶಾ ಅವರು ಜಿಲ್ಲೆಗೆ ಎರಡನೇ ಬಾರಿ ಬರುತ್ತಿರುವುದು ಸಂತಸದ ವಿಚಾರವಾಗಿದೆ. ಇಂದು 3.25 ಕ್ಕೆ ಸರಿಯಾಗಿ ರೋಡ್​ ಶೋ ಪ್ರಾರಂಭವಾಗಲಿದ್ದು, ಎಲ್ಲ ಸಿದ್ಧತೆಯನ್ನು ನಡೆಸಿದ್ದೇವೆ ಎಂದು ಹೇಳಿದ್ದರು. ರೋಡ್ ಶೋ ಮಧ್ಯೆ ವಿಜಯಪುರ ಬಸ್ ನಿಲ್ದಾಣ ಬಳಿ 10 ನಿಮಿಷ ಅಮಿತ್ ಶಾ ಭಾಷಣ ಮಾಡಲಿದ್ದರು ಎಂಬುದು ತಿಳಿದು ಬಂದಿತ್ತು.

ಇದನ್ನೂ ಓದಿ : ಇಂದು ರಾಜ್ಯಕ್ಕೆ ಅಮಿತ್ ಶಾ ಆಗಮನ: ದೇವನಹಳ್ಳಿಯಲ್ಲಿ ರೋಡ್ ಶೋ

Last Updated : Apr 21, 2023, 8:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.