ದೇವನಹಳ್ಳಿ: ಮತ್ತೆ ಕೊರೊನಾ ಹಿನ್ನೆಲೆ ದೇಶದಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲೂ ಕೋವಿಡ್ ಹಾಟ್ಸ್ಪಾಟ್ಗಳಾದ ವಿಮಾನ ನಿಲ್ದಾಣದಲ್ಲಂತೂ ಅತಿಯಾದ ಎಚ್ಚರಿಕೆ ವಹಿಸಬೇಕಾಗಿದೆ.
ಅದರಂತೆ ವಿದೇಶದಿಂದ ಭಾರತಕ್ಕೆ ಬರುತ್ತಿರುವ ಪ್ರಯಾಣಿಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಇದೀಗ ಪ್ರಯಾಣಿಕರ ವರದಿ ನೆಗೆಟಿವ್ ಬಂದಿದೆ. ಅಂದಹಾಗೆ ನಿನ್ನೆ ವಿದೇಶಗಳಿಂದ ಬೆಂಗಳೂರಿಗೆ ಐದು ಸಾವಿರಕ್ಕೂ ಅಧಿಕ ಜನ ಬಂದಿದ್ದಾರೆ. ವಿವಿಧ ದೇಶಗಳಿಂದ ಬಂದ ಪ್ರಯಾಣಿಕರಲ್ಲಿ ಶೇ2ರಷ್ಟು ಪ್ರಯಾಣಿಕರಿಗೆ ಟೆಸ್ಟಿಂಗ್ ಮಾಡಲಾಗಿತ್ತು. 120 ಜನರ ಸ್ಯಾಂಪಲ್ ಪಡೆದು ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಟೆಸ್ಟಿಂಗ್ ಮಾಡಲಾಗಿತ್ತು.
ಈ ಟೆಸ್ಟಿಂಗ್ ನಲ್ಲಿ ಎಲ್ಲರ ವರದಿ ನೆಗಟಿವ್ ಬಂದಿದೆ. ಜೊತೆಗೆ ನಿನ್ನೆ ಮೂವರಿಗೆ ಸೋಂಕು ದೃಡವಾಗಿತ್ತು. ಆದರೆ, ಇಂದು ಬಂದ ವರದಿಯಲ್ಲಿ ಪ್ರಯಾಣಿಕರ ವರದಿಗಳು ನೆಗೆಟಿವ್ ಹಿನ್ನೆಲೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇಂದು ಸಹ ವಿದೇಶಗಳಿಂದ ರಾಜ್ಯಕ್ಕೆ ಸಾವಿರಾರು ಜನ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಅವರಿಗೂ ಟೆಸ್ಟಿಂಗ್ ಮಾಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಸಜ್ಜಾಗಿದ್ದು, ಪರೀಕ್ಷೆ ನಡೆಸಲು ಒಟ್ಟು 8 ಜನ ಹೆಲ್ತ್ ಇನ್ಸ್ಪೆಕ್ಟರ್ ಗಳನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಟಿಹೆಚ್ಒ ವಿಜಯೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ:ಚಾರ್ ಧಾಮ್ ಯಾತ್ರೆ ಅರ್ಜಿ ಸಲ್ಲಿಕೆ ಜನವರಿ 31ರ ವರೆಗೆ ವಿಸ್ತರಣೆ