ದೇವನಹಳ್ಳಿ: ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕರನ್ನು ತಡೆದ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು 2 ಕೋಟಿ ರೂ. ಮೌಲ್ಯದ 3,311 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.
-
#IndianCustomsAtWork Between 25-29th Dec'23, Bengaluru Air Customs intercepted 5 male&11 female pax arriving from Kuala Lumpur,Jeddah,Sharjah &Bangkok leading to seizure of 3311g of gold worth >Rs.2 cr. concealed in socks,garments,trousers pockets,undergarments & handkerchiefs. pic.twitter.com/W40ziQbCNL
— Bengaluru Customs (@blrcustoms) December 31, 2023 " class="align-text-top noRightClick twitterSection" data="
">#IndianCustomsAtWork Between 25-29th Dec'23, Bengaluru Air Customs intercepted 5 male&11 female pax arriving from Kuala Lumpur,Jeddah,Sharjah &Bangkok leading to seizure of 3311g of gold worth >Rs.2 cr. concealed in socks,garments,trousers pockets,undergarments & handkerchiefs. pic.twitter.com/W40ziQbCNL
— Bengaluru Customs (@blrcustoms) December 31, 2023#IndianCustomsAtWork Between 25-29th Dec'23, Bengaluru Air Customs intercepted 5 male&11 female pax arriving from Kuala Lumpur,Jeddah,Sharjah &Bangkok leading to seizure of 3311g of gold worth >Rs.2 cr. concealed in socks,garments,trousers pockets,undergarments & handkerchiefs. pic.twitter.com/W40ziQbCNL
— Bengaluru Customs (@blrcustoms) December 31, 2023
ಇತ್ತೀಚೆಗೆ ಡಿಸೆಂಬರ್ 23, 25, 29ರಂದು ಕೌಲಾಲಂಪುರ, ಜೆಡ್ಡಾ, ಶಾರ್ಜಾ ಮತ್ತು ಬ್ಯಾಂಕಾಕ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ವಿಮಾನಗಳಲ್ಲಿ ಬಂದಿಳಿದಿದ್ದ ಐವರು ಪುರುಷರು ಮತ್ತು 11 ಮಂದಿ ಮಹಿಳೆಯರನ್ನು ತಡೆದು ತಪಾಸಣೆ ನಡೆಸಿದಾಗ ಕಳ್ಳಸಾಗಣೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸೊಂಟದ ಬೆಲ್ಟ್ ಪೌಚ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ: ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕರು
ಪ್ರಯಾಣಿಕರು ಶೂ ಸಾಕ್ಸ್, ಉಡುಪುಗಳು, ಪ್ಯಾಂಟ್ ಪಾಕೆಟ್‌ಗಳು, ಒಳ ಉಡುಪುಗಳು ಮತ್ತು ಕರವಸ್ತ್ರಗಳಲ್ಲಿ ಮರೆಮಾಚಿ ಬಂಗಾರ ಸಾಗಿಸುತ್ತಿದ್ದರು. ಕೂಡಲೇ ಪ್ರಯಾಣಿಕರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನ ವಶ