ದೊಡ್ಡಬಳ್ಳಾಪುರ: ಮನೆ ಕಟ್ಟುವ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರ ಕೈ ಬೆರಳನ್ನೇ ಕತ್ತರಿಸಿ ಕ್ರೂರತ್ವ ಮೆರೆದ ಘಟನೆ ತಾಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮರಳೇನಹಳ್ಳಿ ಅಂಬರೀಷ್ ಮಾರಣಾಂತಿಕವಾಗಿ ಹಲ್ಲೆಗೊಳಗಾದ ವ್ಯಕ್ತಿ. ಅದೇ ಗ್ರಾಮದ ತಿಮ್ಮರಾಜು ಮತ್ತು ಕುಟುಂಬದವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಗಾಯಾಳು ಅಂಬರೀಷ್ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ತಿಮ್ಮರಾಜು, ಶಶಿಕಲಾ, ರಘು, ಮುನಿರಾಮಯ್ಯ, ಅರವಿಂದ ಹರ್ಷವರ್ಧನ್, ಸಿಂಧು ಎಂಬುವರ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಅರವಿಂದ, ರಘು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಐವರು ನಾಪತ್ತೆಯಾಗಿದ್ದಾರೆ. ಉಳಿದವರನ್ನು ಬಂಧಿಸಲು ಶೋಧ ಕಾರ್ಯ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಸೇವನೆಗೆ ಸಾಲ ನೀಡಿಲ್ಲ ಎಂದು ಕಿರಿಕ್, ಚೂರಿ ಇರಿತ: ಆಗಸ್ಟ್ 28 ರ ರಾತ್ರಿ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಿಯೂರು ಬಳಿ ಇರುವ ಎಂಬಿಆರ್ ಬಾರ್ನಲ್ಲಿ ಈ ಘಟನೆ ನಡೆದಿತ್ತು. ಅಂದು ಎಂದಿನಂತೆ ಗಾಯಾಳು ಬಾರ್ ಕ್ಯಾಶಿಯರ್ ಸ್ವಾಗತ್ ಗೌಡ ಬಾರ್ ಕ್ಲೋಸ್ ಮಾಡುತ್ತಿದ್ದ. ಈ ವೇಳೆ, ಆರೋಪಿಗಳಾದ ಪುನೀತ್ ಮತ್ತು ಆತನ ಸಹಚರರು ಬಾರ್ ತೆಗೆದು ಮದ್ಯ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಸ್ವಾಗತ್ ನಿರಾಕರಿಸಿದ್ದಾನೆ. ಈ ವೇಳೆ, ಗಾಂಜಾ ನಶೆಯಲ್ಲಿದ್ದ ಆರೋಪಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಕ್ಯಾಶಿಯರ್ ಹೊಟ್ಟೆಗೆ ಇರಿದಿದ್ದರು. ಇದರಿಂದ ಸ್ವಾಗತ್ ರಕ್ತಸಿಕ್ತವಾಗಿ ಕುಸಿದು ಬೀಳುತ್ತಾರೆ, ಇದನ್ನು ಕಂಡ ಆರೋಪಿಗಳು ಪರಾರಿಯಾಗಿದ್ದರು.
ಯುವಕನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ: ಬೆಳಗಾವಿಯ ಶಿವಬಸವ ನಗರದಲ್ಲಿ ಮೂವರು ಹಂತಕರು ಬೈಕ್ ಮೇಲೆ ಹಿಂದಿನಿಂದ ಬಂದು ಯುವಕನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ರಾಮನಗರದ ವಡ್ಡರವಾಡಿಯ ನಿವಾಸಿ ನಾಗರಾಜ ಗಾಡಿವಡ್ಡರ(26) ಕೊಲೆಯಾದ ಯುವಕನಾಗಿದ್ದು ಈತ ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಫೋನಿನಲ್ಲಿ ಮಾತನಾಡಿಕೊಂಡು ಬರುತ್ತಿದ್ದ. ಈ ವೇಳೆ, ಈತನಿಗಿಂತ ಮುಂಚೆ ಬೈಕಿನಲ್ಲಿ ಮೂವರು ಬಂದು ಅದರಲ್ಲಿ ಒಬ್ಬ ಆರೋಪಿಯು ಬೈಕಿನಿಂದ ಇಳಿದಿದ್ದ. ಬಳಿಕ ನಡೆದುಕೊಂಡು ಬರುತ್ತಿದ್ದ ನಾಗರಾಜ ಬೈಕಿನ ಮುಂದೆ ಪಾಸ್ ಆದ ಕೂಡಲೇ ಹಿಂದಿನಿಂದ ಆತನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದರು.
ಇದನ್ನೂ ಓದಿ: ಸಚಿವರ ಮನೆಯಲ್ಲಿ ಗುಂಡಿನ ಸದ್ದು.. ಸೆಂಟ್ರಲ್ ಮಿನಿಸ್ಟರ್ ಪುತ್ರನ ಸ್ನೇಹಿತ ಸಾವು, ಮೂವರು ಪೊಲೀಸರ ವಶಕ್ಕೆ!