ETV Bharat / state

ನಮಗೂ ಕಾನೂನು ಹೋರಾಟ ಗೊತ್ತು: ವಿಜಯಾನಂದ ಕಾಶಪ್ಪನವರ್​ ಕಿಡಿ

ಕೂಡಲಸಂಗಮದಲ್ಲಿ ಸ್ಥಾಪನೆ ಮಾಡಿರುವುದೇ ನಿಜವಾದ ಪೀಠ ಹಾಗೂ ಪ್ರಥಮ ಪೀಠವಾಗಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​​ ಗುಡುಗಿದ್ದಾರೆ.

author img

By

Published : Feb 28, 2022, 3:20 PM IST

vijayananda-kashappanavar
ವಿಜಯಾನಂದ ಕಾಶಪ್ಪನವರ್

ಬಾಗಲಕೋಟೆ: ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠದ ಸ್ವಾಮೀಜಿಗಳು ಕಾನೂನು ಕ್ರಮ ಜರುಗಿಸಿದ್ದಾರೆ. ನಾವು ಸಹ ಸಿದ್ದರಾಗಿದ್ದೇವೆ. ನಮಗೂ ಕಾನೂನು ಹೋರಾಟ ಗೊತ್ತು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​​ ಗುಡುಗಿದ್ದಾರೆ.

ಅವರು ಇಳಕಲ್​​ ಪಟ್ಟಣದಲ್ಲಿ ಮಾತನಾಡುತ್ತಾ, ಮೂರನೇಯ ಪೀಠ ಆಗಿರುವುದು ಸಚಿವ ನಿರಾಣಿಯವರ ವೈಯಕ್ತಿಕ ಪೀಠವಾಗಿದೆ. ಸಮಾಜದ ಅಭಿವೃದ್ಧಿಗಾಗಿ ಮಾಡಿರುವ ಪೀಠವಲ್ಲ. ನಿರಾಣಿಯವರ ರಾಜಕೀಯ ಹಿತಾಸಕ್ತಿಗಾಗಿ ಪೀಠ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿ, ನಿರಾಣಿ ಸಹೋದರರು ಖಾಲಿ ಕುಳಿತುಕೊಳ್ಳಲಾರದೇ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಕಸಬರಗಿ ಕೊಟ್ಟೆದ್ದೇವೆ. ಪಂಚಮಸಾಲಿ ಪೀಠ ಮಾಡಿದ್ದೇವೆ ಎಂದು ಹೇಳುತ್ತಾರೆ.

ವಿಜಯಾನಂದ ಕಾಶಪ್ಪನವರ್ ಮಾತನಾಡಿದರು

ಸಮಾಜದಕ್ಕೆ ಏನು ಮಾಡಿದ್ದಾರೆ. ಈಗಾಗಲೇ 2 ಎ ಮೀಸಲಾತಿಗಾಗಿ ಪಾದಯಾತ್ರೆ ಹೋರಾಟ ಮಾಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ಸಚಿವರು ಮೀಸಲಾತಿ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಇದರ ಶ್ರೇಯಸ್ಸು ಕಾಶಪ್ಪನವರಿಗೆ, ಯತ್ನಾಳ ಹಾಗೂ ಪಂಚಮಸಾಲಿ ಪೀಠ ಸ್ವಾಮೀಜಿಗಳಿಗೆ ಹೋಗುತ್ತದೆ ಎಂದು ಸಚಿವ ಮುರಗೇಶ ನಿರಾಣಿ ತಮ್ಮ ಸ್ವಾರ್ಥ ಕ್ಕಾಗಿ ಮೂರನೇಯ ಪೀಠ ಸ್ಥಾಪಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು.

ಆದರೆ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸಿದ್ದರು?. ಎಷ್ಟು ಜನ ಭಾಗವಹಿಸಿದ್ದರು ಎಂಬುದು ಮಾಧ್ಯಮ ಮೂಲಕ ತಿಳಿದು ಬಂದಿದೆ. ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರನ್ನು ಕರೆಸಲು. ವಚನಾನಂದ ಸ್ವಾಮೀಜಿಗಳು ಯಾವ ರೀತಿ ಒತ್ತಡ ಹಾಕಿದ್ದಾರೆ ಎಂದು ಗೊತ್ತಿದೆ.

ಕೂಡಲಸಂಗಮದಲ್ಲಿ ಸ್ಥಾಪನೆ ಮಾಡಿರುವುದೇ ನಿಜವಾದ ಪೀಠ ಹಾಗೂ ಪ್ರಥಮ ಪೀಠವಾಗಿದೆ. ಎಲ್ಲಾ ಸಮಾಜದ ಜನರು, ಮುಖಂಡರು ಸೇರಿಕೊಂಡು ಕೂಡಲಸಂಗಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ ಕಾಶಪ್ಪನವರ್​ ಕೂಡಲಸಂಗಮ ಪೀಠ ಒಂದೇ ನಮ್ಮ ಸಮಾಜದ್ದು, ಮೃತ್ಯುಂಜಯ ಸ್ವಾಮೀಜಿಗಳು ನಮ್ಮ ಸಮಾಜದ ಸ್ವಾಮೀಜಿಗಳು ಎಂದು ಕಾಶಪ್ಪನವರ್​ ಹೇಳಿದ್ದಾರೆ.

ನಿರಾಣಿ ಸಹೋದರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಕ್ಕೆ ಮೂರನೇಯ ಪೀಠದ ಬಗ್ಗೆ ನಿರಾಣಿ ಪೀಠ ಎಂದು ಹೇಳಿದ್ದೇವೆ. ಆದರೆ, ಮೂರನೇಯ ಪೀಠದ ಸ್ವಾಮೀಜಿಗಳು, ಏನಾದರೂ ಮಾತನಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಮಗೂ ಗೊತ್ತಿದೆ. ನಾವು ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದು ತಿರುಗೇಟು ನೀಡಿದರು.

ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಮೂವರು ಬಲಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.