ETV Bharat / state

ಬಾಗಲಕೋಟೆ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ವೀರಣ್ಣ ಚರಂತಿಮಠ - ಬಾಗಲಕೋಟೆ ಲೆಟೆಸ್ಟ್ ನ್ಯೂಸ್

ಬಾಗಲಕೋಟೆಯ ಅಭಿವೃದ್ಧಿ ಪ್ರಾಧಿಕಾರ ನೂತನ ಸಭಾಂಗಣದಲ್ಲಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ ಸಮಾರಂಭ ನಡೆಯಿತು.

Veeranna Charanthimath issued Letter of claim to Bagalkot victims
ಬಾಗಲಕೋಟೆ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ವೀರಣ್ಣ ಚರಂತಿಮಠ
author img

By

Published : Oct 16, 2020, 8:49 PM IST

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳಗಡೆ ಆಗಿರುವ ಸಂತ್ರಸ್ತರಿಗೆ ಸರ್ಕಾರಿ ನೌಕರಿ ಹಾಗೂ ಶಿಕ್ಷಣದಲ್ಲಿ ಪ್ರತಿಶತ 5 ರಷ್ಟು ಮೀಸಲಾತಿ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಶಾಸಕ ಹಾಗೂ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

ನಗರದ ಅಭಿವೃದ್ಧಿ ಪ್ರಾಧಿಕಾರ ನೂತನ ಸಭಾಂಗಣದಲ್ಲಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ಸಂತ್ರಸ್ತರಿಗೆ ಶಿಕ್ಷಣದಲ್ಲಿ ಹಾಗೂ ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿ ನೀಡಲಾಗಿತ್ತು. ಹತ್ತು ವರ್ಷದ ಬಳಿಕ ಮೀಸಲಾತಿಯನ್ನು ಸರ್ಕಾರ ಹಿಂದಕ್ಕೆ ಪಡೆದುಕೊಂಡಿತ್ತು. ಇದೀಗ ಮತ್ತೆ ಅದನ್ನು ಹತ್ತು ವರ್ಷ ಮುಂದುವರೆಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ವೀರಣ್ಣ ಚರಂತಿಮಠ

ಈಗಾಗಲೇ ‌ನವನಗರದಲ್ಲಿ 282 ವಾಣಿಜ್ಯ ಮಳಿಗೆಗಳು ಹಾಳಾಗುತ್ತಿದ್ದು, ಕೆಲವರು ಬಾಡಿಗೆ ಹಣ ತುಂಬಿಲ್ಲ. ಹೀಗಾಗಿ ಇಂತಹ ವಾಣಿಜ್ಯ ಮಳಿಗೆಗಳು ಹರಾಜು ಮಾಡಿ ಮಾರಾಟ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಗಾಗಿ ಪ್ರಾಧಿಕಾರದಲ್ಲಿ 8.92 ಕೋಟಿ ಹಣ ಜಿಲ್ಲಾ ಸರ್ಜನ್ ಅವರ ಹೆಸರಿ‌ನಲ್ಲಿ ಇತ್ತು. ಇದೀಗ ಅದನ್ನು‌ ಜಿಲ್ಲಾಧಿಕಾರಿ ಹಾಗೂ ಸರ್ಜನ್ ಅವರ ಜಂಟಿ‌ ಖಾತೆಯ ಮೂಲಕ‌ ಜಿಲ್ಲಾಧಿಕಾರಿಗೆ ಹಸ್ತಾಂತರ ಮಾಡಲಾಯಿತು. ಕಳೆದ‌ ಮೂರು ತಿಂಗಳ‌ನಿಂದ‌ ಯುನಿಟ್ ಎರಡರಲ್ಲಿ 448 ಸಂತ್ರಸ್ತರ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ ಎಂದು ವೀರಣ್ಣ ಚರಂತಿಮಠ ಮಾಹಿತಿ ನೀಡಿದರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.