ETV Bharat / state

ಬಾಗಲಕೋಟೆಯಲ್ಲಿ ಇಬ್ಬರು ಬಾಲಕರು ನೀರುಪಾಲು

ಎರಡು ಪ್ರತೇಕ ಘಟನೆಗಳಲ್ಲಿ ನೀರಿನಲ್ಲಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಬಾಗಲಕೋಟೆಯ ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದಲ್ಲಿ ಹಾಗೂ ಕಲಾದಗಿ ಗ್ರಾಮದಲ್ಲಿ ಪ್ರತ್ಯೇಕ ಘಟನೆ ನಡೆದಿವೆ.

ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
author img

By

Published : Oct 12, 2019, 9:15 PM IST

ಬಾಗಲಕೋಟೆ: ಎರಡು ಪ್ರತೇಕ ಘಟನೆಗಳಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳಗಿ ಸಾವಿಗೀಡಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದ ಶಾಲೆಯ ಕಟ್ಟಡ ನಿರ್ಮಾಣ ಹಿನ್ನೆಲೆ ಶಾಲಾ ಆವರಣದಲ್ಲಿ ಬೃಹತ್ ಆಕಾರದ ತಗ್ಗು ನಿರ್ಮಾಣವಾಗಿತ್ತು. ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಇದರಲ್ಲಿ ನೀರು ಸಂಗ್ರಹವಾಗಿತ್ತು. ಶಾಲಾ ಆವರಣದಲ್ಲಿ ಅಷ್ಟೊಂದು ಆಳ ಇರವುದಿಲ್ಲ ಎಂದು ನೀರಿಗೆ ಇಳಿದಾಗ ಬಾಲಕ ಮೃತಪಟ್ಟಿದ್ದಾನೆ. 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗಣೇಶ ನಡಕಟ್ಟಿ(8) ಮೃತಪಟ್ಟ ಬಾಲಕ ಎನ್ನಲಾಗಿದೆ.

ಶಾಲಾ ಆವರಣದಲ್ಲಿ ಇಷ್ಟೊಂದು ದೊಡ್ಡ ತಗ್ಗು ತೆಗೆದಿರುವ ಬಗ್ಗೆ ಸ್ಥಳೀಯರು, ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪ್ರಭಾರಿ ತಹಶೀಲ್ದಾರ ಆನಂದ ಕೋಲಾರ, ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ.

ಇನ್ನು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿ ಇರುವ ಶೆಲ್ಲಿಕೇರಿ ಕ್ರಾಸ್ ಬಳಿ ಪಂಪ್​​ ಹೌಸ್​ ನೀರಿನಲ್ಲಿ ಈಜಾಡಲು ಹೋದ ಬಾಲಕನೋರ್ವ ಸಾವನ್ನಪ್ಪಿದ್ದಾನೆ. ಯಾಸೀನ್ ಮಕಾನದಾರ(13) ಈಜಲು ಹೋದ ಸಮಯದಲ್ಲಿ ನೀರುಪಾಲಾಗಿದ್ದಾನೆ. ಈಜುಗಾರರ ಸಹಾಯದಿಂದ ಪೊಲೀಸರು ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:AnchorBody:ಬಾಗಲಕೋಟೆ-- ಎರಡು ಪ್ರತೇಕ ಘಟನೆಯಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳಗಿ ಮೃತ ಪಟ್ಟಿರುವ ಘಟನೆ ಜರುಗಿದೆ.
ಹುನಗುಂದ ತಾಲೂಕಿನ ಶೂಲಿಭಾವಿ ಗ್ರಾಮದಲ್ಲಿ ಶಾಲೆಯ ಕಟ್ಟಡ ಹಿನ್ನಲೆ, ಶಾಲಾ ಆವರಣದಲ್ಲಿ ಬೃಹತ್ ಆಕಾರದ ತಗ್ಗು ನಿರ್ಮಾಣ ವಾಗಿದೆ.ಇದರಲ್ಲಿ ಕೆಳದ ಎರಡು ದಿನಗಳಿಂದ ಮಳೆ ಆದ ನೀರು ಸಂಗ್ರಹ ವಾಗಿದೆ.ಶಾಲಾ ಆವರಣ ದಲ್ಲಿ ಇಷ್ಟೊಂದು ಆಳ ಇರವುದಿಲ್ಲ ಎಂದು ನೀರಿಗೆ ಇಳಿದಾಗ ಚಿಕ್ಕ ಬಾಲಕ ಮೃತ ಪಟ್ಟಿದ್ದಾನೆ.ಗಣೇಶ ನಡಕಟ್ಟಿ (8) ವರ್ಷದ ಬಾಲಕ ಇದೇ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ,ಶಾಲಾ ಆವರಣ ಮುಂದೆ ಇಷ್ಟೊಂದು ತಗ್ಗು ತೆಗೆದಿರುವ ಬಗ್ಗೆ ಸ್ಥಳೀಯರು, ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇ ಬಗ್ಗೆ ಸಂಬಂಧ ಪಟ್ಟ ಗುತ್ತಿಗೆದಾರ ಮೇಲೆ ಹಾಗೂ ಇತರ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಸ್ಥಳಕ್ಕೆ ಪ್ರಭಾರಿ ತಹಶಿಲ್ದಾರ ಆನಂದ ಕೋಲಾರ,ಪೊಲೀಸ್ ಸಿಬ್ಬಂದಿ ಆಗಮಿಸಿ,ತನಿಖೆ ನಡೆಸಿದ್ದಾರೆ.
ಇನ್ನೂ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿ ಇರುವ ಶೆಲ್ಲಿಕೇರಿ ಕ್ರಾಸ್ ಬಳಿಯ ಜಾಕವೆಲ್ಲ್‌ ಪಂಪ ಹೌಸ ದ ನೀರಿನಲ್ಲಿ ಬಾಲಕನೊರ್ವ ಈಜಾಡಲು ಹೋಗಿ ಮೃತ ಪಟ್ಟಿದ್ದಾನೆ.ಯಾಸೀನ್ ಮಕಾನದಾರ (13) ಬಾಲಕ ಈಜಲು ಹೋದ ಸಮಯದಲ್ಲಿ ನೀರು ಪಾಲಾಗಿದ್ದಾನೆ.ಇದರಿಂದ ಈಜುಗಾರರು ಸಹಾಯ ದಿಂದ ಪೊಲೀಸ್ ಸಿಬ್ವಂದಿಯವರು ಮೃತ ಬಾಲಕ ದೇಹಕ್ಕೆ ಶೋಧನೆ ನಡೆಸಿದ್ದಾರೆ. ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ತನಿಖೆ ನಡೆಸಲಾಗಿದೆ.
ಇದರಿಂದ ಜಿಲ್ಲೆಯಲ್ಲಿ ಏಕ ಕಾಲಕ್ಕೆ ನೀರನಲ್ಲಿ ಬಿದ್ದು,ಮೃತ ಪಟ್ಟಿರುವ ಘಟನೆಗಳು ಪ್ರತೇಕ ನಡೆದರೂ,ಆತಂಕ ಮೂಡಿಸಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.