ಬಾಗಲಕೋಟೆ/ ರಾಯಚೂರು: ಕೊರೊನಾ ಭೀತಿ ಇಡೀ ರಾಜ್ಯವನ್ನುಕಾಡುತ್ತಿದೆಯಾದರೂ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ರಾಯಚೂರು, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಇಳಿಕೆ ಆದಂತೆ ಕಾಣುತ್ತಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ 111 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 76 ಹೊಸ ಪ್ರಕರಣಗಳು ಪತ್ತೆ ಆಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 12,233 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಒಟ್ಟು 11,248 ಜನ ಗುಣಮುಖರಾಗಿದ್ದಾರೆ. ಹೊಸದಾಗಿ ದೃಡಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 25, ಬಾದಾಮಿ 10, ಬೀಳಗಿ 5, ಜಮಖಂಡಿ 3, ಮುಧೋಳ 12, ಹುನಗುಂದ 21 ಜನ ಇದ್ದಾರೆ. ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಕೋವಿಡ್ ಲ್ಯಾಬ್‍ನಲ್ಲಿ ಪರಿಕ್ಷಿಸಲಾಗುತ್ತಿದ್ದ 1281 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 1,33,909 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 1,19,884 ನೆಗಟಿವ್ ಪ್ರಕರಣ 124 ಮೃತ ಪ್ರಕರಣ ವರದಿಯಾವೆ. ಇನ್ನು 861 ಮಾತ್ರ ಸಕ್ರಿಯ ಪ್ರಕರಣಗಳಿವೆ. ಇಲ್ಲಿವರೆಗೆ ಒಟ್ಟು 413 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ್ ಮಾಡಲಾಗಿದೆ. 438 ಕಂಟೈನ್ಮೆಂಟ್ ಝೋನ್ ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರು:
![Today Corona statistics for Bagalkot Raichur Koppal and Haveri districts](https://etvbharatimages.akamaized.net/etvbharat/prod-images/kn-rcr-04-corona-report-script-7202440_16102020190954_1610f_1602855594_134.jpg)
ರಾಯಚೂರು ಜಿಲ್ಲೆಯಲ್ಲಿ ಶುಕ್ರವಾರ 38 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,777ಕ್ಕೆ ತಲುಪಿದೆ. ರಾಯಚೂರು ತಾಲೂಕಿನ 18, ಮಾನವಿ 7, ಲಿಂಗಸೂಗೂರು 3, ಸಿಂಧನೂರು 2, ದೇವದುರ್ಗ 8 ಪ್ರಕರಣಗಳು ವರದಿಯಾಗಿವೆ. ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 11,936 ರೋಗದಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. ಉಳಿದ 698 ಪ್ರಕರಣಗಳು ಸಕ್ರಿಯವಾಗಿವೆ. ಈ ದಿನದವರೆಗೆ 144 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕೊಪ್ಪಳ:
![Today Corona statistics for Bagalkot Raichur Koppal and Haveri districts](https://etvbharatimages.akamaized.net/etvbharat/prod-images/kn-kpl-04-16-positive-cases-photo-7202284_16102020192229_1610f_1602856349_957.jpg)
ಕೊಪ್ಪಳದಲ್ಲಿ ಇಂದು 49 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 12,763ಕ್ಕೆ ಏರಿಕೆಯಾಗಿದೆ. ಗಂಗಾವತಿ 14, ಕೊಪ್ಪಳ 11, ಕುಷ್ಟಗಿ 18 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 06 ಪ್ರಕರಣ ಸೇರಿವೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಒಟ್ಟು 270 ಜನ ಮೃತಪಟ್ಟಿದ್ದಾರೆ. ಇಂದು 133 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 11,728 ಜನರು ಗುಣಮುಖರಾಗಿದ್ದು, 664 ಜನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಹಾವೇರಿ:
ಹಾವೇರಿ ಜಿಲ್ಲೆಯಲ್ಲಿ ಶುಕ್ರವಾರ 30 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 9,958ಕ್ಕೆ ಏರಿಕೆಯಾಗಿದೆ. ಬ್ಯಾಡಗಿ 05, ಹಾವೇರಿ 12, ಹಿರೇಕೆರೂರು 03, ರಾಣೆಬೆನ್ನೂರು 08, ಶಿಗ್ಗಾವಿ ತಾಲೂಕಿನಲ್ಲಿ ಇಬ್ಬರಿಗೆ ಕೊರೊನಾ ತಗುಲಿದೆ. ಇದೇ ವೇಳೆ 38 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.