ETV Bharat / state

ಬಾಗಲಕೋಟೆ : ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಮೂವರ ಬಂಧನ - bagalkot theft news

ಮುಸುಕು ಧರಿಸಿ ಕತ್ತಲಲ್ಲಿ ಸುಲಿಗೆ ಮಾಡಿದ್ದರಿಂದ ಈವರೆಗೂ ಆರೋಪಿತರು ಯಾರೆಂದು ಪತ್ತೆಯಾಗಿರಲಿಲ್ಲ. ಒಂದು ವರ್ಷ ನಾಲ್ಕು ತಿಂಗಳ ನಿರಂತರ ಪ್ರಯತ್ನದಿಂದಾಗಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ..

Three accussed arrest in bagalkot
ಬಾಗಲಕೋಟೆ: ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಬಂಧನ
author img

By

Published : Jun 8, 2020, 8:20 PM IST

ಬಾಗಲಕೋಟೆ : ಕಳೆದ ಒಂದು ವರ್ಷ ನಾಲ್ಕು ತಿಂಗಳ ಹಿಂದೆ ಸುಲಿಗೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಬನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂಗಪ್ಪ ಮಾದೇವ ಕೂಡಲಗಿ, ಸಂಗಮೇಶ ಗುರುಪಾದಪ್ಪ ನಾವಿ, ವಿಜಯ ಅರ್ಜುನ್ ಕಡಕೋಳ ಬಂಧಿತ ಆರೋಪಿಗಳು. ಇವರೆಲ್ಲರೂ ಹಿಪ್ಪರಗಿ ಗ್ರಾಮದವರಾಗಿದ್ದು,ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತರಿಂದ 2 ಬೈಕ್​ ಹಾಗೂ 98,000 ರೂ. ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ: ಕಳೆದ 2019 ಫೆಬ್ರುವರಿ11ರಂದು ಹಿಪ್ಪರಗಿಯ ಯುವರಾಜ್ ವೈನ್ ಶಾಪ್ ಮಾಲೀಕ ಹನುಮಂತ ಅವರು, ಅಂದಿನ ವ್ಯಾಪಾರದ ಹಣವನ್ನ ತೆಗೆದುಕೊಂಡು ರಾತ್ರಿ 10.30ರ ಸುಮಾರಿಗೆ ಮನೆಗೆ ಹೊರಟಿದ್ದರು. ಈ ವೇಳೆ ಕುಲಹಳ್ಳಿ ಸಮೀಪದ ಸವಳ ಹಳ್ಳದ ಹತ್ತಿರ ನಿರ್ಜನ ರಸ್ತೆಯಲ್ಲಿ ಹೋಗುತ್ತಿದ್ದಾಗ ಎರಡು ಬೈಕ್​ಗಳಲ್ಲಿ ಬಂದ ನಾಲ್ಕು ಜನ ಮುಸುಕುಧಾರಿಗಳು, ಹನುಮಂತನನ್ನು ಅಡ್ಡಗಟ್ಟಿ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ, ಅವರ ಹತ್ತಿರವಿದ್ದ 1,60,000 ರೂ. ದೋಚಿ ಪರಾರಿಯಾಗಿದ್ದರು.

ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 392 ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಅಶೋಕ್​ ಸದಲಗಿ ತನಿಖೆ ನಡೆಸಿದ್ದರು. ಮುಸುಕು ಧರಿಸಿ ಕತ್ತಲಲ್ಲಿ ಸುಲಿಗೆ ಮಾಡಿದ್ದರಿಂದ ಈವರೆಗೂ ಆರೋಪಿತರು ಯಾರೆಂದು ಪತ್ತೆಯಾಗಿರಲಿಲ್ಲ. ಒಂದು ವರ್ಷ ನಾಲ್ಕು ತಿಂಗಳ ನಿರಂತರ ಪ್ರಯತ್ನದಿಂದ ಎಸ್​ಪಿ ಲೋಕೇಶ್​ ಜಗಲಾಸರ ಮಾರ್ಗದರ್ಶನದಲ್ಲಿ ಬನಹಟ್ಟಿ ಪೊಲೀಸರ ತಂಡ ಇಂದು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.