ETV Bharat / state

ಬಾಗಲಕೋಟೆ ತಾಪಂ ಸಾಮಾನ್ಯ ಸಭೆಯಿಂದ ಅರ್ಧಕ್ಕೇ ಹೊರಹೋದ ಅಧ್ಯಕ್ಷರು

ಸವಿತಾ ಕಲ್ಯಾಣಿ ಅವರು ಸರ್ವಾಧಿಕಾರಿಯಾಗಿ ಈ ನೇಮಕಾತಿ ಮಾಡಿದ ಪರಿಣಾಮ ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಸದಸ್ಯರಾದ ಧರೆಪ್ಪ ಗುಗ್ಗರಿ, ಬಸವರಾಜ ಕಡಪಟ್ಟಿ, ಗೋವಿಂದ ಗಸ್ತಿ, ಬಸವರಾಜ ಮಾಳಿ ನೇಮಕಾತಿ ರದ್ದುಗೊಳಿಸಿ ಅವರ ವೇತನವನ್ನು ತಡೆಹಿಡಿಯಬೇಕೆಂದು ತಾಪಂ ಇಒ ಅಬೀದ ಗದ್ಯಾಳ ಅವರಿಗೆ ಆಗ್ರಹಿಸಿದರು..

Bagalkote
Bagalkote
author img

By

Published : Sep 20, 2020, 3:50 PM IST

ಬಾಗಲಕೋಟೆ : ಹೊರಗುತ್ತಿಗೆ ಆಧಾರದ ಮೇಲೆ ಡಿ ದರ್ಜೆ ನೌಕರರ ನೇಮಕಾತಿಯಲ್ಲಿ ಯಾವ ಸದಸ್ಯರ ಗಮನಕ್ಕೆ ತರದ ಹಿನ್ನೆಲೆ ರದ್ದುಗೊಳಿಸುವಂತೆ ಒತ್ತಾಯಿಸಿ ಉಪಾಧ್ಯಕ್ಷೆ ಹಾಗೂ ಸದಸ್ಯರು ಅಧ್ಯಕ್ಷರ ವಿರುದ್ಧ ಹರಿ ಹಾಯುತ್ತಿದ್ದಂತೆ ಅಧ್ಯಕ್ಷೆ ಸವಿತಾ ಕಲ್ಯಾಣಿ ಸಭೆಯಲ್ಲಿ ಕ್ಷಮೆಯಾಚಿಸಿ ಸಭೆಯಿಂದ ನಿರ್ಗಮಿಸಿದ ಘಟನೆ ನಡೆಯಿತು.

ಜಮಖಂಡಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸದಸ್ಯರು ಮಾತನಾಡುತ್ತಾ, ಕಳೆದ ಎರಡು ತಿಂಗಳ ಹಿಂದೆ ಇಬ್ಬರು ಡಿ ದರ್ಜೆ ಸಿಬ್ಬಂದಿಯನ್ನು ಸಭೆಯಲ್ಲಿ ಚರ್ಚಿಸದೆ ಸದಸ್ಯರ ಗಮನಕ್ಕೆ ತರದೆ ಅಧ್ಯಕ್ಷೆ ಸವಿತಾ ಕಲ್ಯಾಣಿ ಅವರು ಸರ್ವಾಧಿಕಾರಿಯಾಗಿ ಈ ನೇಮಕಾತಿ ಮಾಡಿದ ಪರಿಣಾಮ ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಸದಸ್ಯರಾದ ಧರೆಪ್ಪ ಗುಗ್ಗರಿ, ಬಸವರಾಜ ಕಡಪಟ್ಟಿ, ಗೋವಿಂದ ಗಸ್ತಿ, ಬಸವರಾಜ ಮಾಳಿ ನೇಮಕಾತಿ ರದ್ದುಗೊಳಿಸಿ ಅವರ ವೇತನವನ್ನು ತಡೆಹಿಡಿಯಬೇಕೆಂದು ತಾಪಂ ಇಒ ಅಬೀದ ಗದ್ಯಾಳ ಅವರಿಗೆ ಆಗ್ರಹಿಸಿದರು.

ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳ ಸ್ಥಾಪಿಸಲು ಹಣ ಬಿಡುಗಡೆಯಾಗಿದೆ. ಯಾವ ಶಾಲೆಗೆ ಎಷ್ಟು ಹಣ ಬಂದಿದೆ. ಅದರ ಮಾಹಿತಿ ನೀಡಬೇಕು ಎಂದು ಸದಸ್ಯ ಧರೆಪ್ಪ ಗುಗ್ಗರಿ ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಕಳಪೆಮಟ್ಟದ ಆಹಾರ ಧಾನ್ಯಗಳು ಪೂರೈಕೆಯಾಗುತ್ತಿವೆ. ಇಂತಹ ಆಹಾರ ಪೂರೈಸುವವರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕು. ಬಿಲ್ ತಡೆಹಿಡಿಯಬೇಕೆಂದು ಪ್ರತಿ ಸಭೆಯಲ್ಲಿ ಚರ್ಚೆಯಾಗುತ್ತಿದೆ. ಅಂಗನವಾಡಿ ಆಹಾರ ವಿತರಣೆಯ ಬಗ್ಗೆ ಮನೆಗಳಿಗೆ ಭೇಟಿ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ತಾಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಅವುಗಳ ದುರಸ್ಥಿ ಕಾರ್ಯ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಸದಸ್ಯರಾದ ಸದಾಶಿವ ಮಾಂಗ, ಶೋಭಾ ಹೊಸೂರ, ಧರೆಪ್ಪ ಗುಗ್ಗರಿ, ಬಸವರಾಜ ಮಾಳಿ ಲೋಕೋಪಯೋಗಿ ಇಲಾಖೆಯ ಎಇಇ ಪಿ ಹೆಚ್ ಗಾಯಕವಾಡ ಅವರಿಗೆ ಒತ್ತಾಯಿಸಿದರು. ಕೂಡಲೇ ರಸ್ತೆಗಳ ದುರಸ್ಥಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಬಳಿಕ ಟಿಹೆಚ್‌ಒ ಜಿ ಎಸ್‌ ಗಲಗಲಿ ಮಾತನಾಡಿ, ಈವರೆಗೆ ತಾಲೂಕಿನಲ್ಲಿ 9,484 ಕೋವಿಡ್-19 ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊರೊನಾ ಮಹಾಮಾರಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ದೇಶದಲ್ಲಿ ಶೇ.10ರಷ್ಟು ಕೊರೊನಾ ಸೋಂಕು ದೃಢಪಟ್ಟಿದೆ. ಶೇ. 3ರಷ್ಟು ಸಾವಿನ ಪ್ರಮಾಣವಿದೆ ಎಂದು ತಿಳಿಸಿದರು.

ನಂತರ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ ಮಾತನಾಡಿ, ತಾಲೂಕಿನಾದ್ಯಂತ 67 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾಗಮ ಶಿಕ್ಷಣ ನೀಡಲಾಗುತ್ತಿದೆ. ಅ.9 ರಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಾವಳಗಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ, ಪಶುಸಂಗೋಪನಾ, ಅಕ್ಷರದಾಸೋಹ, ಹೆಸ್ಕಾಮ್, ಹಿಂದುಳಿದ ಕಲ್ಯಾಣ, ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.