ಬಾಗಲಕೋಟೆ: ಈ ಭಾಗದಲ್ಲಿ ಕಬ್ಬನ್ನು ಹೇರುವುದರಲ್ಲಿ ದಾಖಲೆ ಮಾಡುವುದು ಸರ್ವೆ ಸಾಮಾನ್ಯವಾಗಿದ್ದು, ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ 21 ವರ್ಷದ ಯುವಕ ಭೀರಪ್ಪ ನಿಂಗಪ್ಪ ಚಮಕೇರಿ ಸತತ 16.30 ಗಂಟೆಗಳಲ್ಲಿ 74 ಟನ್ ಕಬ್ಬನ್ನು ಟ್ರಾಕ್ಟರ್ಗೆ ಹೇರುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕಳೆದ ರವಿವಾರ ಸಾಯಂಕಾಲ 6.30ಕ್ಕೆ ಕಬ್ಬನ್ನು ಹೇರಲು ಪ್ರಾರಂಭಿಸಿದ 21 ವರ್ಷದ ಭೀರಪ್ಪ ಸತತವಾಗಿ 16.30 ಗಂಟೆಗಳಲ್ಲಿ ಅಂದರೆ ಮರುದಿನ ಮುಂಜಾನೆವರೆಗೆ ಕಬ್ಬನ್ನು ಟ್ರಾಕ್ಟರ್‌ಗಳಲ್ಲಿ ತುಂಬಿಸಿ ಸಾಧನೆ ಮಾಡಿದ್ದಾನೆ.
ಈತನ ಸಾಧನೆಗೆ ಮಹಾದೇವ ಬಸರಗಿ, ಲಕ್ಕಪ್ಪ ಕರಿಗಾರ, ವಿಠ್ಠಲ ಕರಿಗಾರ, ಸಿದ್ದಪ್ಪ ಕರಿಗಾರ, ಬಾಬು ಕರಿಗಾರ, ಕರೆಪ್ಪ ಕರಿಗಾರ, ಸದಾಶಿವ ಹನಗಂಡಿ, ಸದಾಶಿವ ಜಿಡ್ಡಿಮನಿ, ಭೀರಪ್ಪ ಕರಿಗಾರ, ಶಬ್ಬೀರ ಪೆಂಡಾರಿ, ಮಹೇಶ ಬುಜಿಂಗ, ಗೋಸೀರ ಜಂಬಗಿ, ಸಂಗಪ್ಪ ಬುಸಿ, ಬಸು ಹೊಸೂರ, ಹನಮಂತ ಜರಾಳಿ, ಈಶ್ವರ ಪಾಟೀಲ ಸೇರಿದಂತೆ ಅನೇಕರು ಸಹಾಯ ಮಾಡಿದ್ದಾರೆ.