ಬಾಗಲಕೋಟೆ: ಹಿಂದೆ ಅತಿಥಿ ಉಪನ್ಯಾಸಕ ಆಗಿದ್ದೆ, ಈಗ ಪ್ರಾಚಾರ್ಯರಾಗಿ ಕೆಲಸ ಮಾಡುವ ಮೂಲಕ ವಿಧಾನ ಪರಿಷತ್ ಅನ್ನು ಮಾದರಿಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ವಿಧಾನ ಪರಿಷತ್ ನೂತನ ಸಭಾಪತಿ ಬಸವರಾಜ್ ಹೂರಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾರಾಯಣಸಾ ಭಾಂಡೆಗೆ ಅವರ ಮನೆಗೆ ಔಪಚಾರಿಕವಾಗಿ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಈ ಹಿಂದೆ 7 ತಿಂಗಳ ಕಾಲ ಕೆಲಸ ಮಾಡಿರುವುದು ಗೆಸ್ಟ್ ಲೆಕ್ಚರ್ ತರ ಇತ್ತು. ಈಗ ಪ್ರಿನ್ಸಿಪಾಲ್ ಆಗಿದ್ದೇನೆ. ದೇಶದಲ್ಲೇ ಮಾದರಿ ವಿಧಾನಪರಿಷತ್ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಪರಿಷತ್‌ನ ಘನತೆ, ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವೆ. ಈ ಹಿಂದಿನ ಕಹಿ ಘಟನೆಗಳು ಮರುಕಳಿಸದಂತೆ ಸದಸನದ ಗೌರವ ಹೆಚ್ಚಿಸುವ ಗುರಿ ಹೊಂದಿದ್ದೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಇದನ್ನೂ ಓದಿ: IPL ಮಾದರಿಯ ಬಾಗಲಕೋಟೆ ಪ್ರೀಮಿಯರ್ ಲೀಗ್‌ಗೆ ಮಾಜಿ ಶಾಸಕ ಪೂಜಾರ ಚಾಲನೆ