ಬಾಗಲಕೋಟೆ: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಬಳಿ ಸಂಭವಿಸಿದೆ.
ಟಂ ಟಂ ವಾಹನದಲ್ಲಿ ಹೋಗುವ ವೇಳೆ ಬಂಡಿಗಣಿ ಸಮೀಪ ಆಸಂಗಿ ಗ್ರಾಮದ ಎಂಬಾತ ಗಣಪತಿ ಶಿವಪ್ಪ ನಾವಿ (50) ಎಂಬಾತ ವಾಹನದಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಬಂಡಿಗಣಿ ಬಳಿ ಎರಡು ಬೈಕ್ಗಳ ಮಧ್ಯೆ ನಡೆದ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಹಿಡಕಲ ಗ್ರಾಮದ ಭೀಮಪ್ಪ ಮಾಳಗೆನ್ನವರ (29), ಶಾಂತವ್ವ ಹಾಲಪ್ಪ ಕುಳ್ಳೋಳ್ಳಿ (45) ಎಂಬುವರು ಸಾವನ್ನಪ್ಪಿದ್ದಾರೆ. ಅಲ್ಲದೆ ಹಿಡಕಲ್ನ ನವೀನ ಹಾಲಪ್ಪ ಎಂಬಾತನಿಗೆ ಕುಳ್ಳೋಳಿ (15) ಸಣ್ಣಪುಟ್ಟ ಗಾಯ ಹಾಗೂ ಸಾವಳಗಿಯ ಆನಂದ ಸಬಕಾಳೆ (28) ಎಂಬುವನು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ರಬಕವಿ-ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.