ETV Bharat / state

ಪ್ಯಾಕ್‌ನಲ್ಲಿರುವ ಕಲಬೆರಕೆಗಿಂತ ಗಾಣದ ಎಣ್ಣೆ ತಿಂದ್ರೇ ಗಟ್ಟಿ ಆಗ್ತೀರಿ.. ಹೆಂಗ್ ಅಂತೀರಾ, ಇಲ್ನೋಡಿ..

author img

By

Published : Feb 17, 2021, 5:09 PM IST

ಒಂದು ಕೆಜಿ ಶೇಂಗಾ ಎಣ್ಣೆ ತಯಾರಿಸಬೇಕಾದರೆ ಮೂರು ಕೆಜಿ ಒಣ‌ ಕಡಲೇ‌ ಬೀಜ ಹಾಕಬೇಕು. ಒಂದು ಕೆಜಿ ಕಡಲೆ ಬೆಲೆಗೆ 100 ರೂಪಾಯಿಯಂತೆ ಮೂರು ಕೆಜೆಗೆ 300 ರೂಪಾಯಿ ದರ ಆಗುತ್ತದೆ. ಅಷ್ಟೇ ದರದಲ್ಲಿ ಅಂದರೆ 300 ರೂಪಾಯಿಯಂತೆ ಒಂದು ಕೆಜಿ ಶೇಂಗಾ ಎಣ್ಣೆ ಮಾರಾಟ ಮಾಡುತ್ತಾರೆ..

pure-food-oil-industry-in-bagalakote-news
ಶುದ್ದ ಎಣ್ಣೆ ನೀಡುವ ಬಾಗಲಕೋಟೆ ಚನ್ನಬಸಪ್ಪ

ಬಾಗಲಕೋಟೆ : ಹಿಂದಿನ ಕಾಲದಲ್ಲಿ ಶುದ್ದ ಆಹಾರದ ಎಣ್ಣೆ ತಯಾರಿಸಬೇಕಾದರೆ ಎತ್ತುಗಳಿಂದ ಗಾಣ ತಿರುಗಿಸಿ ಅದರಿಂದ ಎಣ್ಣೆ ತೆಗೆಯಲಾಗುವ ಪದ್ದತಿ ಇತ್ತು. ಆದರೆ, ಇಂದಿನ ಕಾಲದಲ್ಲಿ ಕಲಬೆರಕೆ ದಿನಸಿ ಎಣ್ಣೆ ಉತ್ಪಾದನೆ ಆಗುತ್ತಿದೆ. ನೈಸರ್ಗಿತವಾಗಿ ತೆಗೆಯುವ ಎಣ್ಣೆಗೆ ಈಗಲೂ ಡಿಮ್ಯಾಂಡ್ ಇದೆ.

ಓದಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ₹20 ಲಕ್ಷ ಕೋಟಿ ಲೂಟಿ : ಸುರ್ಜೇವಾಲ ಆರೋಪ

ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದಲ್ಲಿ ಚನ್ನಬಸಪ್ಪ ಯಂಕಂಚಿ ಎಂಬುವರು ಸಂಪ್ರದಾಯ ಪದ್ದತಿಗೆ ಒಂದಿಷ್ಟು ಆಧುನಿಕ ಟಚ್ ಕೊಟ್ಟು ಶುದ್ಧವಾದ ಎಣ್ಣೆ ತಯಾರಿಸಿ, ಮಾರಾಟ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಮುರನಾಳ ಗ್ರಾಮದಲ್ಲಿ ಶಿವಾನಿ ವುಡ್ ಪ್ರೆಸ್ಡ್ ಆಯಿಲ್ ಇಂಡಸ್ಟ್ರಿ ಮಾಡಿಕೊಂಡು, ಶುದ್ದ ಎಣ್ಣೆ ತಯಾರಿಸುತ್ತಿದ್ದಾರೆ. ಶೇಂಗಾ ಎಣ್ಣೆ, ಕುಸುಬಿ ಎಣ್ಣೆ, ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಹೀಗೆ ವಿವಿಧ ಬಗೆಯ ಎಣ್ಣೆಯನ್ನು ಯಾವುದೇ ಕಲಬೆರಕೆ ಇಲ್ಲದೆ ಶುದ್ಧವಾಗಿ ತಯಾರಿಸಿ ಕೂಡುತ್ತಾರೆ. ಹಿಂದಿನ ಕಾಲದ ಪದ್ದತಿಯಂತೆ ಕಟ್ಟಿಗೆ ಗಾಣದ ಮಾದರಿ ಯಂತ್ರದ ಮೂಲಕ ಶುದ್ದ ಎಣ್ಣೆ ತಯಾರಿಸುತ್ತಾರೆ.

ಶುದ್ದ ಎಣ್ಣೆ ನೀಡುವ ಬಾಗಲಕೋಟೆ ಚನ್ನಬಸಪ್ಪ

ಹೇಗೆ ತಯಾರಿಸುತ್ತಾರೆ?: ಒಂದು ಕೆಜಿ ಶೇಂಗಾ ಎಣ್ಣೆ ತಯಾರಿಸಬೇಕಾದರೆ ಮೂರು ಕೆಜಿ ಒಣ‌ ಕಡಲೇ‌ ಬೀಜ ಹಾಕಬೇಕು. ಒಂದು ಕೆಜಿ ಕಡಲೆ ಬೆಲೆಗೆ 100 ರೂಪಾಯಿಯಂತೆ ಮೂರು ಕೆಜೆಗೆ 300 ರೂಪಾಯಿ ದರ ಆಗುತ್ತದೆ. ಅಷ್ಟೇ ದರದಲ್ಲಿ ಅಂದರೆ 300 ರೂಪಾಯಿಯಂತೆ ಒಂದು ಕೆಜಿ ಶೇಂಗಾ ಎಣ್ಣೆ ಮಾರಾಟ ಮಾಡುತ್ತಾರೆ.

ಒಂದು ತಿಂಗಳಿನಿಂದ ಯಂತ್ರದ ಮೂಲಕ ಉದ್ಯೋಗ ಅವಲಂಬಿಸಿರುವ ಹಿನ್ನೆಲೆ, ಯಾವುದೇ ಲಾಭಾಂಶ ಇಲ್ಲದೆ ಚನ್ನಬಸಪ್ಪ ಯಂಕಂಚಿ ಮಾರಾಟ ಮಾಡುತ್ತಿದ್ದಾರೆ. ಅದೇ ರೀತಿ ಒಂದು ಕೆಜಿ ಕುಸಬಿ ಎಣ್ಣೆಗೆ, ಐದು ಕೆಜಿ ಕುಸಬಿ‌ ಬೀಜ ಹಾಕಬೇಕಾಗುತ್ತದೆ. ಹಾಗೆ ಕೊಬ್ಬರಿ ಎಣ್ಣೆಗೆ, ಮೂರು ಕೆಜಿ ಕೊಬ್ಬರಿ ಹಾಕಿದರೆ, ಒಂದು ಕೆಜಿ ಕೊಬ್ಬರಿ ಎಣ್ಣೆ ಉತ್ಪಾದನೆ ಆಗುತ್ತದೆ.

ಕುಸಬಿ ಎಣ್ಣೆಯನ್ನು ಕೆಜಿಗೆ 350 ರೂಪಾಯಿದಂತೆ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಶೇಂಗಾ ಎಣ್ಣೆಗೆ 180 ರಿಂದ‌ 200 ರೂಪಾಯಿಗಳವರೆಗೆ ಇದೆ. ಆದರೆ, ಶುದ್ದ ಶೇಂಗಾ ಎಣ್ಣೆ ತಯಾರಿಸಲು 300 ರೂಪಾಯಿಗಳ ವೆಚ್ಚ ಆಗುತ್ತದೆ. ಮಾರುಕಟ್ಟೆ 200 ರೂಪಾಯಿಗಳವರೆಗೆ ಮಾರಾಟ ಮಾಡಲು ಹೇಗೆ ಸಾಧ್ಯ?. ಕಲಬೆರಕೆ ಆಗಿರುವುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆ ಇವರು ಗ್ರಾಹಕರ ಮುಂದೆ ತಯಾರಿಸಿ, ಶುದ್ಧ ಆಹಾರಕ್ಕೆ ಬಳಸುವ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಾರೆ.

ಈಗಾಗಲೇ ವಿವಿಧ ಗ್ರಾಹಕರು, ಇವರ ಕೇಂದ್ರಕ್ಕೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಶುದ್ದ ಎಣ್ಣೆ ಆಹಾರ ಸೇವನೆ ಮಾಡುವುದರಿಂದ, ಹೃದಯ ಸಂಬಂಧಿ, ಕ್ಯಾನ್ಸರ್ ಸೇರಿ ಇತರ ಕಾಯಿಲೆ ಬರುವುದಿಲ್ಲ. ಮತ್ತೆ ಚರ್ಮಕ್ಕೆ ಅನುಕೂಲಕರವಾಗಿ ದೇಹದಲ್ಲಿ ಬೊಜ್ಜು ಸಹ ಬರುವುದಿಲ್ಲ ಎಂದು ಚನ್ನಬಸಪ್ಪ ಯಂಕಂಚಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.