ETV Bharat / state

1₹ ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚರಂತಿಮಠ ಚಾಲನೆ.. - ನಗರಸಭೆ ಅಧಿಕಾರಿಗಳು

ಬಾಗಲಕೋಟೆ ಜಿಲ್ಲಾ ನಗರಸಭೆ ವ್ಯಾಪ್ತಿಯ ವಾರ್ಡ್​​ಗಳಲ್ಲಿ ಒಂದು ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿದರು.

opening-for-various-working
author img

By

Published : Oct 26, 2019, 10:14 PM IST

ಬಾಗಲಕೋಟೆ: ಜಿಲ್ಲಾ ನಗರಸಭೆ ವ್ಯಾಪ್ತಿಯ ವಾರ್ಡ್​​ಗಳಲ್ಲಿ ಒಂದು ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಅವರು ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಒಟ್ಟು 10 ವಾರ್ಡ್​ಗಳಲ್ಲಿ ನಡೆಯಲಿರುವ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು. 2019-20ರ ಎಸ್​ಎಫ್​​ಸಿ ಹಾಗೂ 14ನೇ ಹಣಕಾಸು ಆಯೋಗದಲ್ಲಿ ಈ ಕಾಮಗಾರಿಗಳಿಗೆ ಅನುದಾನ ಮಂಜೂರು ಆಗಲಿದೆ. ಈ ಬಗ್ಗೆ ಮಾತನಾಡಿದ ಶಾಸಕರು, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಬಾರದು. ಗುಣಮಟ್ಟದಿಂದ ಕೂಡಿರಬೇಕು, ಕಳಪೆ ಕಂಡು ಬಂದಲ್ಲಿ ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಚ್ಚರಿಸಿದರು.

ಅಭಿವೃದ್ಧಿ ಕಾರ್ಯವನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ವಾಂಬೆ ಹಾಗೂ ಆಶ್ರಯ, ವಾಜಪೇಯಿ, ರಾಜೀವ್​​​ಗಾಂಧಿ ಕಾಲೋನಿಯಲ್ಲಿ ಸ್ವಚ್ಛತೆಗೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು. ನಗರಸಭೆ ಸಿಬ್ಬಂದಿಗೆ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವಿದ್ಯಾಗಿರಿ ಹಾಗೂ ನವನಗರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಬಾಗಲಕೋಟೆ ಹಳೇ ಭಾಗದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

Intro:AnchorBody:1ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚರಂತಿಮಠ ಚಾಲನೆ
ಬಾಗಲಕೋಟೆ--ನವನಗರ ವಿದ್ಯಾಗಿರಿ,ಸೇರಿದಂತೆ ಬಾಗಲಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡಗಳಲ್ಲಿ 2019-20 ನೇ ಸಾಲಿನ ಎಸ್ ಎಫ್ ಸಿ ಹಾಗೂ 14 ನೇ ಹಣಕಾಸು ಆಯೋಗದಲ್ಲಿ ತಗೆದುಕೊಂಡ ಒಂದು ಕೋಟಿ ರೂ.ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನವನಗರದ ವಾರ್ಡ ನಂ 21 ರ ರಾಜೀವಗಾಂಧಿ ಆಶ್ರಯ ಕಾಲೋನಿ,ವಾರ್ಡ ನಂ 22 ರ ವಾಂಬೆ ಕಾಲೋನಿ, ವಾರ್ಡ ನಂ 25, 26,29,31,19,32,33,34 ವಾರ್ಡಗಳಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಕಾಮಗಾರಿಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಕಳಪೆ ಕಾಮಗಾರಿಗಳನ್ನು ಮಾಡಬಾರದು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ಕಳಪೆ ಕಾಮಗಾರಿಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ಪರವಾಣಿಗೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.
ಕಾಲಮೀತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ,ಕಾಮಗಾರಿಗಳನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಬೇಕೆಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾಂಬೆ ಹಾಗೂ ಆಶ್ರಯ, ವಾಜಪೇಯಿ, ರಾಜೀವಗಾಂಧಿ ಕಾಲೋನಿಯಲ್ಲಿ ಸ್ವಚ್ಚತೆಗೆ ಹೆಚ್ಚು ಗಮನಹರಿಸಬೇಕು ಸಾರ್ವಜನಿಕರು ನಗರಸಭೆ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಸಧ್ಯ ವಿದ್ಯಾಗಿರಿ ಹಾಗೂ ನವನಗರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಬಾಗಲಕೋಟೆ ಹಳೇ ಭಾಗದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ, ಖಾಜಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ ನಗರಸಭೆ ಸದಸ್ಯರಾದ ಯಲ್ಲಪ್ಪ ನಾರಾಯಣಿ, ಪಾರ್ವತಿ ಅಕ್ಕಿಮರಡಿ, ಶೋಭಾ ರಾವ, ಭುವನೇಶ್ವರಿ ಕುಪ್ಪಸ್ತ,ವೀರಪ್ಪ ಸಿರಗನ್ನವರ್,ಸವಿತಾ ಲೆಂಕನ್ನವರ್, ಸೀಮಾ ಕೌಸರ ನಧಾಫ,ಬಸವರಾಜ ಅವರಾದಿ, ರವಿ ದಾಮಜಿ,ಪ್ರಕಾಶ ತಪಶೆಟ್ಟಿ, ಜಿ ಎನ್ ಪಾಟೀಲ, ಶೈಲು ಅಂಗಡಿ ರಾಜು ರೇವಣಕರ, ರಾಜು ಗೌಳಿ ಸೇರಿದಂತೆ ಉಮೇಶ ಹಂಚನಾಳ, ಸಂಗಪ್ಪ ಹಿತ್ತಲಮನಿ, ಸೇರಿದಂತೆ ಇನ್ನೀತರರು ಇದ್ದರು.
-----------------

Conclusion:Etv-Bharat-Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.