ETV Bharat / state

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.. ಸೋಂಕಿಗೊಳಗಾದ ಶಾಸಕ ದೊಡ್ಡನಗೌಡ ಪಾಟೀಲ ಮನವಿ - mla dhoddanagowda patila latest news

ನಾನು ಆರೋಗ್ಯವಾಗಿದ್ದೇನೆ. ಕ್ಷೇತ್ರದ ಜನತೆ ಆತಂಕ ಪಡಬಾರದು. ಸರ್ಕಾರ ಎಲ್ಲರಿಗೂ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜನತೆ ಮಾಸ್ಕ್​​ ಹಾಕಿಕೊಳ್ಳಿ, ಅನಾವಶ್ಯಕವಾಗಿ ಹೂರಗಡೆ ಸಂಚಾರ ಮಾಡಬೇಡಿ..

mla dhoddanagowda patila
ಶಾಸಕ ದೊಡ್ಡನಗೌಡ ಪಾಟೀಲಶಾಸಕ ದೊಡ್ಡನಗೌಡ ಪಾಟೀಲ
author img

By

Published : Apr 21, 2021, 7:44 PM IST

ಬಾಗಲಕೋಟೆ : ಹುನಗುಂದ ಮತಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ‌ಪಕ್ಷದ ಮುಖಂಡರಾದ ದೊಡ್ಡನಗೌಡ ಪಾಟೀಲ ಅವರಿಗೆ ಸೋಂಕು ತಗುಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದಾರೆ.

ಶಾಸಕ ದೊಡ್ಡನಗೌಡ ಪಾಟೀಲರಿಗೆ ಸೋಂಕು, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ..

ಕಳೆದ ಒಂದು ವಾರದ ಹಿಂದೆ ಕೊರೊನಾ ಸೋಂಕು ತಗುಲಿರುವ ಪರಿಣಾಮ ಚಿಕಿತ್ಸೆ ‌ಪಡೆಯುವುದಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದಲೇ ಮೊಬೈಲ್​​ ವಿಡಿಯೋ ಮಾಡಿ ಕ್ಷೇತ್ರದ ಜನತೆಗೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಉಸ್ತುವಾರಿ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಕೊರೊನಾ ನಿಯಂತ್ರಣಕ್ಕೆ ಕ್ರಮವಹಿಸಿ : ಸಚಿವರಿಗೆ ಪತ್ರ ಬರೆದ ಸಿಎಂ

ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದು, ನಾನು ಆರೋಗ್ಯವಾಗಿದ್ದೇನೆ. ಕ್ಷೇತ್ರದ ಜನತೆ ಆತಂಕ ಪಡಬಾರದು ಎಂದಿದ್ದಾರೆ. ಸರ್ಕಾರ ಎಲ್ಲರಿಗೂ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜನತೆ ಮಾಸ್ಕ್​​ ಹಾಕಿಕೊಳ್ಳಿ, ಅನಾವಶ್ಯಕವಾಗಿ ಹೂರಗಡೆ ಸಂಚಾರ ಮಾಡಬೇಡಿ.

ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಂದೇಶ ರವಾನಿಸಿದ್ದಾರೆ. ಕೋವಿಡ್ ಎರಡನೇ ಅಲೆ ನಿರ್ಲಕ್ಷ್ಯ ಮಾಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.