ETV Bharat / state

ಯತ್ನಾಳ್ ಏನೋ ಆಗ್ಬೇಕು ಅಂತ ಕಷ್ಟಪಟ್ಟು ಏನೇನೋ ಮಾತಾಡ್ತಾರೆ: ಸಚಿವ ಆರ್​.ಬಿ.ತಿಮ್ಮಾಪೂರ

ಬಾಗಲಕೋಟೆಯಲ್ಲಿ ಬಿಜೆಪಿ ನಾಯಕರ ವಿರುದ್ದ ಸಚಿವ ಆರ್​.ಬಿ.ತಿಮ್ಮಾಪೂರ ಹರಿಹಾಯ್ದರು.

ಸಚಿವ ಆರ್​.ಬಿ ತಿಮ್ಮಾಪೂರ
ಸಚಿವ ಆರ್​.ಬಿ ತಿಮ್ಮಾಪೂರ
author img

By

Published : Aug 15, 2023, 10:59 PM IST

ಬಾಗಲಕೋಟೆ : ಪಾಪ ಯತ್ನಾಳ್ ಏನೋ ಆಗಬೇಕು ಅಂತಾನೆ ಕಷ್ಟಪಟ್ಟು ಏನೇನೊ‌ ಮಾತಾಡುತ್ತಾರೆ. ಅವರನ್ನು ವಿರೋಧ ಪಕ್ಷದ‌ ನಾಯಕಕನ್ನಾದರೂ ಮಾಡಿದರೆ, ಇನ್ನಷ್ಟು ಮಾತಾಡೋಕೆ ಅನುಕೂಲ ಆಗುತ್ತದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಲೇವಡಿ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿಂದು ಧ್ವಜಾರೋಹಣ ನೆರವೇರಿಸಿದ ಬಳಿಕ‌ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಪಕ್ಷದವರಿಗೆ ಆರೋಪ ಮಾಡುವಂತಹ ವಿಷಯಗಳಿಲ್ಲ. ಅದಕ್ಕೆ ಈ ರೀತಿಯಾಗಿ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಶಾಸಕರು ಯಾರೂ ಸಂತೋಷದಿಂದ ಇಲ್ಲ ಎಂಬ ಬಿಜೆಪಿಗರ ಆರೋಪಕ್ಕೆ ಅವರು ತಿರುಗೇಟು ನೀಡಿದರು. ಬಿಜೆಪಿಯಲ್ಲಿ ಶಾಸಕರು ಗಲಾಟೆ ಮಾಡಿದ್ದರಲ್ಲ, ಅದನ್ನು ಹೇಳುತ್ತಿರಬಹುದು. ನಮ್ಮ ಶಾಸಕರ ಬಗ್ಗೆ ಅಲ್ಲ. ಪ್ರಜಾಪ್ರಭುತ್ವದಲ್ಲಿ ಇನ್ನರ್ ಪ್ರಜಾಪ್ರಭುತ್ವ ಇದೆ. ಪ್ರಜಾಪ್ರಭುತ್ವ ಒಳಗಡೆ ಇರಬಾರದಾ? ಶಾಸಕರು ಮಾತಾಡಬಾರದಾ? ಕೇಳ್ತಾರೆ, ಹೇಳ್ತಾರೆ ಮನವಿ ಮಾಡ್ತಾರೆ. ಈ ಬಗ್ಗೆ ಚರ್ಚೆ ಮಾಡಿ ಸರಿ ಮಾಡುತ್ತೇವೆ ಎಂದರು.

ಕಾಂಗ್ರೆಸ್​ನ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಬಿಜೆಪಿಗರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜನ ಅವರನ್ನು ನೀವು ಬೇಡ ಅಂತ ಕೆಳಗಿಳಿಸಿದ್ದಾರೆ. ಆದರೂ ಇನ್ನೂ ಅಧಿಕಾರದ ಹಪಹಪಿ ಅಡ್ಡದಾರಿ ಹಿಡಿದೇನು, ಉದ್ದ ದಾರಿ ಹಿಡಿದೇನು. ಅಲ್ಲಿ ದುಡ್ಡು ತರೋಣ, ಇವರನ್ನು ಖರೀದಿ ಮಾಡೋಣ ಅಂತ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದಾರೆ. ಆದರೆ ಈ ಸಾರಿ ಅದು‌ ನಡೆಯೋದಿಲ್ಲ ಎಂದರು.

ಸರಿಯಾಗಿ ಕೆಲಸ ಮಾಡಿದವರಿಗೆ ಬಿಲ್​ : ಗುತ್ತಿಗೆ ಬಾಣ ಕಾಂಗ್ರೆಸ್​ಗೆ ತಿರುಗುಬಾಣವಾಯಿತಾ ಎಂಬ ಪ್ರಶ್ನೆಗೆ, ‌ಗುತ್ತಿಗೆದಾರಿಗೆ ಹಣ ಕೊಟ್ಟಿಲ್ಲ. 10-20 ಸಾವಿರ ಅಲ್ಲ, ಕೋಟಿಗಟ್ಟಲೆ ಹಣವನ್ನು ಬಿಜೆಪಿಯವರು ಪೆಂಡಿಂಗ್ ಇಟ್ಟು ಹೋಗಿದ್ದಾರೆ. ಅದನ್ನು ಸರಿ ಮಾಡುವ ಕೆಲಸ ನಾವು ಮಾಡುತ್ತೇವೆ. 5 ವರ್ಷ ಕೊಡದ ಬಿಲ್ ಅನ್ನು ಈಗಾಗಲೇ ಕೊಡೋಕಾಗಲ್ಲ. ಯಾರು ಸರಿಯಾಗಿ ಕೆಲಸ ಮಾಡಿದ್ದಾರೋ ಅವರಿಗೆ ಸರಿಯಾಗಿ ಹಣ ಸಿಗುತ್ತದೆ. ಯಾರು ಕಳಪೆ ಕೆಲಸ ಮಾಡಿದ್ದಾರೋ ಅಂತವರಿಗೆ ಹಣ ಸಿಗೋದಿಲ್ಲ. ಕೆಲವು ಗುತ್ತಿಗೆದಾರರು ದ್ವಂದ್ವದಲ್ಲಿದ್ದು ಕೆಲ ಗುತ್ತಿಗೆದಾರರಿಗೆ ಆತಂಕ ಶುರುವಾಗಿದೆ ಎಂದರು.

ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಬೆಂಕಿಯಿಂದ ಬಾಣಲೆಗೆ ಬಿದ್ದಿದ್ದೇವೆ ಎಂಬ ಹೇಳಿಕೆಗೆ, ಅದು ಅವರ ವೈಯಕ್ತಿಕ ವಿಚಾರ, ನಾವೇನು ಮಾಡೋಕಾಗಲ್ಲ. ಕೆಂಪಣ್ಣ ಹೇಳಿದಾನೆ ಅಂತ ನಾನು ಆವಾಗ್ಲೂ ಹೇಳಿದ್ದೆ, ಇವಾಗ್ಲೂ ಹೇಳುತ್ತೇನೆ. ಆದರೆ ಇಂದು ಏಕೆ ಈ ರೀತಿ ಹೇಳುತ್ತಿದ್ದಾನೆ ಎಂದು ಕೇಳ್ಕೊಂಡು ಬಂದು ನಿಮಗೆ ಹೇಳುವೆ ಎಂದರು.

ಇದನ್ನೂ ಓದಿ : ರಾಜ್ಯಾದ್ಯಂತ ವಿದ್ಯುತ್ ಲೋಡ್ ಶೆಡ್ಡಿಂಗ್​; ಸಚಿವ ಕೆ ಜೆ ಜಾರ್ಜ್ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.