ETV Bharat / state

ನಾನೆಂದೂ ಸಿಎಂ ಕನಸು ಕಂಡವನಲ್ಲ, ಪಂಚಮಸಾಲಿ 3ನೇ ಪೀಠ ಆದ್ರೆ ಅನುಕೂಲ: ಸಚಿವ ನಿರಾಣಿ - ಪಂಚಮಸಾಲಿ ಸಮುದಾಯದ ಮೂರನೇಯ ಗುರು ಪೀಠ

ಪಂಚಮಸಾಲಿ ಸಮುದಾಯದ ಮೂರನೇಯ ಗುರು ಪೀಠದ ಬಗ್ಗೆ ನನಗೆ ಗೊತ್ತಿಲ್ಲ. ಪೇಪರ್​ನಲ್ಲಿ ನೋಡಿ ತಿಳಿದಿದ್ದೇನೆ. ಅವರು 3ನೇ ಪೀಠ ಮಾಡಿದ್ರೆ ತಪ್ಪೇನು ಇಲ್ಲ. ಅವರಿಗೆ ಬೆಂಬಲ ಕೊಡೋದು ನಮ್ಮ ಕರ್ತವ್ಯವಾಗಿದೆ ಎಂದು ಸಚಿವ ಮುರುಗೇಶ್​ ನಿರಾಣಿ ಸ್ಪಷ್ಟಪಡಿಸಿದ್ದಾರೆ.

minister murugesh nirani
ಸಚಿವ ಮುರಗೇಶ್​ ನಿರಾಣಿ
author img

By

Published : Jan 22, 2022, 5:24 PM IST

Updated : Jan 22, 2022, 5:41 PM IST

ಬಾಗಲಕೋಟೆ: ಪಂಚಮಸಾಲಿ ಸಮುದಾಯದ ಮೂರನೇಯ ಗುರು ಪೀಠ ಮಾಡಿದರೆ ತಪ್ಪೇನು ಇಲ್ಲ. ದೊಡ್ಡ ಸಮಾಜ ಇರುವುದರಿಂದ ಇನ್ನೊಂದು ಪೀಠ ಆದಲ್ಲಿ ಸಮಾಜದ ಬಂಧುಗಳಿಗೆ ಅನುಕೂಲವಾಗಲಿದೆ ಎಂದು ಸಚಿವ ಮುರಗೇಶ್​ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೇ ಪೀಠದಿಂದ ಸ್ವಾಮೀಜಿಗಳಿಗೆ ಬೇರೆ ಬೇರೆ ಕಡೆ ಹೋಗಲು ಸಾಧ್ಯವಿಲ್ಲ. ಹೀಗಾಗಿ 3ನೇ ಪೀಠ ಆಗ್ತಿರೋದರಲ್ಲಿ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು.

ಸಿಎಂ ಕನಸು ಕಂಡವನಲ್ಲ: ಸಿಎಂ ಆಗಬೇಕೆನ್ನುವ ವಿಚಾರಕ್ಕೆ ನಿರಾಣಿ 3ನೇ ಪೀಠ ಮಾಡ್ತಿದ್ದಾರೆನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನೆಂದು ಸಿಎಂ ಕನಸು ಕಂಡವನಲ್ಲ. ಯಾರೇ ಸ್ವಾಮೀಜಿ ಕರೆದರೂ ಅಲ್ಲಿಗೆ ಹೋಗುತ್ತೇನೆ. ಜೊತೆಗೆ ನಾನು ಸಾಮಾನ್ಯ ರೈತನ ಮಗ. ನನಗೆ ಹೆಚ್ಚಿನ ದುರಾಸೆ ಇಲ್ಲ. ನಾನು ಬೇರೆಯವರ ಬಗ್ಗೆ ಮಾತನಾಡೋದಿಲ್ಲ ಎಂದರು.

ಸಚಿವ ಮುರುಗೇಶ್​ ನಿರಾಣಿ ಪ್ರತಿಕ್ರಿಯೆ

ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಹಳ ದೊಡ್ಡ ಸ್ವಾಮೀಜಿ ಇದ್ದಾರೆ. ಅವರು ನನ್ನನ್ನು ಕರೆದು ಮಾತನಾಡಬೇಕಿತ್ತು. ಅವರ ಬಳಿ ನಾನೇ ಹೋಗುತ್ತಿದ್ದೆ. ಸ್ವಾಮೀಜಿ ನನ್ನ ಬಗ್ಗೆ ತಪ್ಪು ತಿಳಿದಕೊಂಡಿರಬಹುದು, ನಾನು ಮಾತನಾಡಲು ರೆಡಿ ಇದ್ದೇನೆ. 3ನೇ ಪೀಠಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಾರೇ ಸಹಾಯ ಕೇಳಿದ್ರೂ ನೀಡುತ್ತೇನೆ. ಈ ಗ್ರಹಣ ತಾತ್ಕಾಲಿಕವಾಗಿರುತ್ತದೆ. ಆದಷ್ಟು ಬೇಗ ಗ್ರಹಣ ಬಿಡುತ್ತೆ ಅನ್ನೋ ವಿಶ್ವಾಸ ಇದೆ. ಸ್ವಾಮೀಜಿ ಜೊತೆ ಯಾವುದೇ ಅಸಮಾಧಾನ ಇಲ್ಲವೆಂದು ಸಚಿವ ನಿರಾಣಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ : ಕಾರ್ಯಕರ್ತರ ಜೊತೆ ಡಿಕೆಶಿ ಜೂಮ್ ಮೀಟಿಂಗ್

ಪಂಚಮಸಾಲಿ ಸಮಾಜಕ್ಕೆ ನಿರಾಣಿ ಕುಟುಂಬ ಏನು ಮಾಡಿದೆ ಅಂತ ಗೊತ್ತಿದೆ. 3ನೇ ಪೀಠದ ಬಗ್ಗೆ ನನಗೆ ಗೊತ್ತಿಲ್ಲ. ಪೇಪರ್​ನಲ್ಲಿ ನೋಡಿ ತಿಳಿದಿದ್ದೇನೆ. ಅವರು 3ನೇ ಪೀಠ ಮಾಡಿದ್ರೆ ತಪ್ಪೇನು ಇಲ್ಲ. ಅವರಿಗೆ ಬೆಂಬಲ ಕೊಡೋದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ರು.

ನನಗೆ ಕೊಟ್ಟ ಸಚಿವ ಸ್ಥಾನ ದೊಡ್ಡದು. ಸಮಾಜ ಒಡೆಯಲು ನನಗೆ ಸಮಯವಿಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಂದವನು. ಬೇರೆ ಚಿಕ್ಕ ಸಮಾಜಕ್ಕೂ ಮೀಸಲಾತಿ ಸಿಗಲಿ ಅನ್ನೋದು ನನ್ನ ಆಶಯ. ನಾನು ಸಹ ಬಾಗಲಕೋಟೆ, ವಿಜಯಪುರ ನೀರು ಗಾಳಿ ಕುಡಿದು ಬಂದವನು. ಯಾರ ಬಗ್ಗೆಯೂ ಆಪಾದನೆ ಮಾಡೋದಿಲ್ಲ. ಇಡೀ ಸಮಾಜ, ಆರೂವರೆ ಕೋಟಿ ಜನರ ಸೇವೆ ಮಾಡಲು ಬದ್ಧ. ಯಾರೂ ಅಸಮಾಧಾನ ಮಾಡಿಕೊಳ್ಳಬೇಡಿ ಎಂದು ಸಚಿವ ನಿರಾಣಿ ಮನವಿ ಮಾಡಿದರು.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 22, 2022, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.