ಬಾಗಲಕೋಟೆ: ಜಲಸಂಪನ್ಮೂಲ ಸಚಿವರಾಗಲು ಅಯೋಗ್ಯ ಎಂದ ಮಾಜಿ ಸಚಿವ ಎಂ.ಬಿ.ಪಾಟೀಲ್ಗೆ ಸಚಿವ ಗೋವಿಂದ ಕಾರಜೋಳ ವಾರ್ನಿಂಗ್ ಕೊಟ್ಟಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ. ನಾಲಿಗೆ ಮೇಲೆ ಹಿಡಿತ ಇರಲಿ. ಎಂ.ಬಿ.ಪಾಟೀಲ್ಗೆ ಕಾರಜೋಳ ಜಲಸಂಪನ್ಮೂಲ ಸಚಿವರಾಗಿದ್ದೇ ಹೊಟ್ಟೆ ಉರಿ ಆಗಿದೆ ಎಂದ ಅವರು, ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ವಿಧಾನಸೌಧದ ಮೆಟ್ಟಿಲೇರಿದವನು.
ನಿಮಗೆ ನಾವು ಹೋಲಿಕೆ ಮಾಡಿಕೊಂಡಿಲ್ಲ. ನಾನು ಸಾಮಾನ್ಯರಲ್ಲಿ ಸಾಮಾನ್ಯ. ನೀವು ಅಪಾರ ಪಾಂಡಿತ್ಯ ಜ್ಞಾನ ಇರತಕ್ಕಂತವರು, ವಿಶ್ವ ಮಾನವರು, ಬ್ರಹ್ಮಾಂಡ ಜ್ಞಾನ ಸಂಪಾದನೆ ಮಾಡಿದಂತವರು ನೀವು. ನಿಮಗೆ ನನ್ನನ್ನು ಹೋಲಿಕೆ ಮಾಡೋದಿಲ್ಲ ಎಂದು ವ್ಯಂಗ್ಯವಾಡಿದರು.
ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಬಂದ ನಂತರ ಇವರೊಬ್ಬರೇ ಜಲಸಂಪನ್ಮೂಲ ಸಚಿವರಾಗಿದ್ದಾರಾ? ಎಂದು ಪ್ರಶ್ನೆ ಮಾಡಿದ ಅವರು, ಈಗ ಕಾರಜೋಳನಂತಹ ಸಾಮಾನ್ಯ ಮನುಷ್ಯ ಜಲಸಂಪನ್ಮೂಲ ಸಚಿವನಾಗಿರುವುದು ಹೊಟ್ಟೆ ಉರಿ ತಂದಿದೆ ಅನಿಸುತ್ತೇ ಎಂದು ತಿರುಗೇಟು ನೀಡಿದರು.
ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಎಫ್ಐಆರ್ ದಾಖಲು
ಇದೇ ಸಮಯದಲ್ಲಿ ಕಾಂಗ್ರೆಸ್ ಆಡಳಿತ ಅವಧಿಯಲ್ಲಿನ ದಾಖಲೆ ಬಿಡುಗಡೆ ಮಾಡಿ, ಮೇಕುದಾಟು ಪಾದಯಾತ್ರೆಗೆ ಕಾರಜೋಳ ಟಾಂಗ್ ನೀಡಿದರು. ಮೇಕೆದಾಟು ಗಿಮಿಕ್ ಮಾಡ್ತಿದ್ದೀರಿ, ಮೇಕೆದಾಟು ಬಗ್ಗೆ ಬೆಂಗಳೂರಿನಲ್ಲಿ ದಾಖಲೆ ಬಿಡುಗಡೆ ಮಾಡಿದ್ದೇನೆ. ಇವತ್ತೂ ಕೂಡ ಒಂದು ವಿಷಯ ಹೇಳ್ತೀನಿ, ಅವರು ಏನೇನು ಮಾಡ್ತಾರೋ ಮಾಡಲಿ, 2014 ರಲ್ಲೇ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕಾನೂನು ಸಲಹೆ ಪಡೆದು ಮುಖ್ಯಮಂತ್ರಿಗಳು ಅನುಮೋದನೆ ಮಾಡಿದ್ದಾರೆ. ದಾಖಲೆ ಓದಿ ಹೇಳುತ್ತೇನೆ ಎಂದು ಓದಿ ಹೇಳಿದರು.
12/11/2014 ರಂದು ಅನುಮೋದನೆ ನೀಡಿದರೂ ಕೂಡ ಯೋಜನೆ ಯಾಕೆ ಪ್ರಾರಂಭ ಮಾಡಲಿಲ್ಲ. ಡಿಪಿಆರ್ ಮಾಡಲಿಕ್ಕೆ ನಾಲ್ಕು ವರ್ಷ ತೆಗೆದುಕೊಂಡಿದ್ದೀರಿ. ಆಡಳಿತ ಮಾಡುವವರಿಗೆ ಕನಿಷ್ಠ ಜ್ಞಾನ ಇರಬೇಕಾಗುತ್ತದೆ. ಪಿಎಫ್ಆರ್ ಮೊದಲು ಕಳಿಸಬೇಕೋ?, ಡಿಪಿಆರ್ ಮೊದಲು ಕಳಿಸಬೇಕೋ? ಅನ್ನೋ ಜ್ಞಾನ ಇರಬೇಕು. ಇವರು ಡಿಪಿಆರ್ ಕಳುಹಿಸಿಕೊಡ್ತಾರೆ. ಕೇಂದ್ರದವರು ಡಿಪಿಆರ್ ಅನ್ನು ವಾಪಸ್ ಕಳುಹಿಸುತ್ತಾರೆ. ನೀವು ಕಳಿಸಬೇಕಿರುವುದು ಡಿಪಿಆರ್ ಅಲ್ಲ, ಪಿಎಫ್ ಆರ್ ಎಂದು ಕೇಂದ್ರ ಸರ್ಕಾರ ಹೇಳುತ್ತದೆ.
ಓದಿ: ಕೋವಿಡ್ ನಿಯಮ ಉಲ್ಲಂಘನೆ: ಎಷ್ಟೇ ದೊಡ್ಡ ನಾಯಕರಿರಲಿ ಕ್ರಮ ಖಚಿತ - ಸಿಎಂ ಬೊಮ್ಮಾಯಿ
ಪೂರ್ವ ಸಿದ್ಧತಾ ವರದಿ ಸಲ್ಲಿಸಬೇಕು. ಯಾವುದೇ ಪ್ರಾಜೆಕ್ಟ್ ತೆಗೆದುಕೊಳ್ಳಬೇಕಾದರೆ ಇದು ಯೋಗ್ಯ ಇದೆ ಅಂತ ಪರಿಶೀಲನೆ ಆಗಬೇಕಾಗುತ್ತದೆ. ಅದಕ್ಕೆ ಒಂದು ವರದಿ ಕೊಡಬೇಕು. ಆದರೆ, ಇವರು ಅದನ್ನೇ ಕೊಡದೆ ಡ್ರಾಮಾ ಮಾಡಿ ಡಿಪಿಆರ್ ಕಳಿಸಿದ್ರೆ ಏನು ಹೇಳಬೇಕು ಎಂದರು.
ಮೇಕೆದಾಟು ಮಾದರಿಯಲ್ಲೇ 2013ರಲ್ಲಿ ಪಾದಯಾತ್ರೆ ಮಾಡಿದ್ರಿ. ಪಾದಯಾತ್ರೆ ಮಾಡಿ 5 ವಷ೯ ಅಧಿಕಾರಕ್ಕೆ ಬಂದ್ರು ಸಹ ಏನೂ ಮಾಡಲಿಲ್ಲ. ಅನುದಾನ ಕೊಡಲಿಲ್ಲ. ಹೀಗಾಗಿ, 2018ರಲ್ಲಿ ಜನ ನಿಮಗೆ ಬುದ್ದಿ ಕಲಿಸಿದ್ದಾರೆ. ಅಂದಿನ ನಿಮ್ಮ ಸಕಾ೯ರಕ್ಕೆ ನಾಚಿಕೆ ಆಗಬೇಕು ಎಂದು ತಿರುಗೇಟು ನೀಡಿದರು.
ಓದಿ: ದೊಡ್ಡಾಲಹಳ್ಳಿಯಲ್ಲಿ ಡಿಕೆಶಿ ಬೆಳಗಿನ ಚಟುವಟಿಕೆ ಹೇಗಿತ್ತು ಗೊತ್ತಾ?!