ETV Bharat / state

ಕೂಡಲಸಂಗಮಕ್ಕೆ ಎಂ.ಬಿ. ಪಾಟೀಲ್ ಭೇಟಿ: ಮೋದಿ - ಶಾ ವಿರುದ್ಧ ವಾಗ್ದಾಳಿ

author img

By

Published : May 3, 2022, 5:39 PM IST

ಅಮಿತ್ ಶಾ ಹಾಗೂ ಮೋದಿ ಅವರು ನಾ ಖಾವುಂಗಾ.. ನಾ ಖಾನೆದೂಂಗಾ ಎಂದು ಹೇಳುತ್ತಾರೆ. ಪ್ರಾಮಾಣಿಕತೆ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ, ಕರ್ನಾಟಕದಲ್ಲಿ ಶೇ 40ರಷ್ಟು ಭ್ರಷ್ಟಾಚಾರ ನಡೆದಿದೆ. ಸ್ವಲ್ಪ ತಿನ್ನುತ್ತಿಲ್ಲ, ಜೀರ್ಣ ಆಗದಷ್ಟು ತಿನ್ತುದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಎಂ.ಬಿ. ಪಾಟೀಲ್​ ಹೇಳಿದರು.

M.B. Patil speak aganist Modi-Sha
ಕೂಡಲಸಂಗಮಕ್ಕೆ ಎಂ.ಬಿ. ಪಾಟೀಲ್ ಭೇಟಿ

ಬಾಗಲಕೋಟೆ: ಬಸವ ಜಯಂತಿ‌‌ ಹಿನ್ನೆಲೆ ಬಸವಣ್ಣನವರ ಐಕ್ಯಸ್ಥಳವಾಗಿರುವ ಕೂಡಲಸಂಗಮಕ್ಕೆ ಮಂಗಳವಾರ ಮಾಜಿ ಸಚಿವ ಹಾಗೂ ‌ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟೀಲ್ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ದಾರೆ. ಇಲ್ಲಿ ಅವರದೇ ಸರ್ಕಾರ ಇದೆ, ಇಲ್ಲಿಯ ಗೃಹ ಇಲಾಖೆಯಲ್ಲಿ ಏನೇನೋ ಆಗುತ್ತಿದೆ. ಗುತ್ತಿಗೆದಾರರ ಅಸೋಸಿಯೇಷನ್ ಕೆಲ ಸಚಿವರ ಮೇಲೆ ಶೇ 40ರಷ್ಟು ಕಮಿಷನ್​ ಆರೋಪ ಮಾಡಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಅಮಿತ್ ಶಾ ಹಾಗೂ ಮೋದಿ ಅವ್ರು, ನಾ ಖಾವುಂಗಾ.. ನಾ ಖಾನೆದೂಂಗಾ ಎಂದು ಹೇಳುತ್ತಾರೆ. ಪ್ರಾಮಾಣಿಕತೆ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಶೇ 40ರಷ್ಟು ಭ್ರಷ್ಟಾಚಾರ ನಡೆದಿದೆ. ಸ್ವಲ್ಪ ತಿನ್ನುತ್ತಿಲ್ಲ, ಜೀರ್ಣ ಆಗದಷ್ಟು ತಿನ್ನುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಈ ವಿಷಯವಾಗಿ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿಗಳು ಸುಮ್ಮನಿದ್ದಾರೆ. ಇದರ ಅರ್ಥ ಮೌನಂ ಸಮ್ಮತಿ ಲಕ್ಷಣಂ ಎಂದು ವ್ಯಂಗ್ಯವಾಡಿದರು.

ಕೂಡಲಸಂಗಮಕ್ಕೆ ಎಂ.ಬಿ. ಪಾಟೀಲ್ ಭೇಟಿ

ಬೇರೆ ಕಡೆಗೆ ಅಕ್ರಮ ಆದ್ರೆ, ಸಿಬಿಐ, ಇಡಿ, ಐಟಿ ತನಿಖೆ ಮಾಡಿಸುತ್ತಾರೆ. ಇವರ ಮೇಲೆ ಏಕೆ ಸಿಬಿಐ, ಇಡಿ, ಐಟಿ ದಾಳಿ ಆಗಿಲ್ಲ. ಪಿಎಸ್​ಐ ಅಕ್ರಮವನ್ನೂ ಸಿಬಿಐಗೆ ವಹಿಸಲಿ. ಈ ವಿಷಯವಾಗಿ ತನಿಖೆಯಾಗಲಿ, ಯಾರೇ ತಪ್ಪು ಮಾಡಿರಲಿ, ಯಾವುದೇ ಪಕ್ಷದವರಾಗಿರಲಿ, ಅವ್ರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಬದಲಾವಣೆ ಬಿಜೆಪಿಯ ಆಂತರಿಕ ವಿಚಾರ, ನಮಗ್ಯಾಕೆ ಬೇಕು? : ಡಿಕೆಶಿ

ಇದೇ ಸಮಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ಮಾತನಾಡಿದ ಅವರು,ಇದು ನಮ್ಮ ಅಸ್ಮಿತೆ. ಇದನ್ನ ರಾಜಕೀಯವಾಗಿ ಚರ್ಚೆ ಮಾಡಲು ಹೋಗಲ್ಲ. ಎರಡು ಕಡೆ ಇರುವ ಎಲ್ಲ ನಾಯಕರು ಕುಳಿತು ಚರ್ಚಿಸುತ್ತಾರೆ‌. ಚುನಾವಣೆ ಮುಗಿಯೋವರೆಗೂ ಇದು ಬೇಡ. ಕಳೆದ ಬಾರಿ ಚುನಾವಣೆ ನಡೆದಾಗ ಅನೇಕ‌ ಗೊಂದಲಗಳನ್ನ ಸೃಷ್ಟಿ ಮಾಡಿದ್ದರು. ಸದ್ಯ ನಾವು ಯಾವ ಗೊಂದಲಕ್ಕೂ ಬೀಳೋಕೆ ಹೋಗಲ್ಲ. ಈ ಬಗ್ಗೆ ನಾನು ಹೇಳಿಕೆ‌ ಕೊಡಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.