ETV Bharat / state

ನೇಕಾರರ ಸಂಪೂರ್ಣ  ಸಾಲಮನ್ನಾ ಅಗತ್ಯ: ಶಿವಶಂಕರ ಶ್ರೀ ಅಭಿಮತ

ಸಿಎಂ ಯಡಿಯೂರಪ್ಪನವರು ನೇಕಾರರ ಸಾಲಮನ್ನಾ ಘೋಷಿಸಿರವುದು ಸ್ವಾಗತಾರ್ಹ ಎಂದು ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳು ಹೇಳಿದರು.

ನೇಕಾರರ ಸಾಲಮನ್ನಾ ಘೋಷಿಸಿರವುದು ಸ್ವಾಗತಾರ್ಹ ಎಂದು ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳು
author img

By

Published : Jul 28, 2019, 1:59 AM IST

ಬಾಗಲಕೋಟೆ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು ನೇಕಾರರ ಸಾಲಮನ್ನಾ ಯೋಜನೆ ಘೋಷಿಸಿದ್ದು ಸಂತಸ ತಂದಿದೆ ಎಂದು ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳ ಸುದ್ದಿಗೋಷ್ಠಿ

ರಬಕವಿ-ಬನಹಟ್ಟಿ ನಗರದ ಹಿರೇಮಠದಲ್ಲಿ ರಾಜ್ಯ ನೇಕಾರ ಸೇವಾ ಸಂಘದ ಸಭೆಯಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, 100 ಕೋಟಿ ರೂಗಳನ್ನು ಈ ಯೋಜನೆಗೆ ನೀಡಿರುವುದು ಸ್ವಾಗತಾರ್ಹ. ನೇಕಾರರ ಒಟ್ಟು ಸಾಲ 241 ಕೋಟಿ ರೂಗಳಷ್ಟು ಮಾತ್ರ ಇದೆ. ಈಗ ಅರ್ಧದಷ್ಟು ಸಾಲಮನ್ನಾ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಇನ್ನೂ 141 ಕೋಟಿ ರೂಗಳಷ್ಟು ಸಾಲಮನ್ನಾ ಮಾಡಿದಲ್ಲಿ ತುಂಬಾ ಅನುಕೂಲವಾಗುತ್ತದೆ. ಇದರಿಂದ ರಾಜ್ಯದ ಎಲ್ಲ ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಿದಂತಾಗುವುದು ಎಂದರು ಹೇಳಿದರು.

ಸಭೆಯಲ್ಲಿ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವನಿಂಗ ಟಿರಕಿ, ಸದಾಶಿವ ತಟಕೋಟ, ತಮ್ಮಣ್ಣಿ ಸಿದ್ದಪ್ಪನ್ನವರ, ಸಂಗಪ್ಪ ಉದಗಟ್ಟಿ, ಅನಿಲ ಟಿರಕಿ, ಲಕ್ಕಪ್ಪ ಪವಾರ, ಶ್ರೀಶೈಲ ಕೊಪ್ಪದ, ಉದಯ ಕುಲಗೋಡ, ಆನಂದ ಬಾಣಕಾರ, ಸದಾಶಿವ ಸಾರವಾಡ ಹಾಜರಿದ್ದರು.

Intro:AnchorBody:ನೇಕಾರರ ವರವಾದ ಸಾಲಮನ್ನಾ
ಬಾಗಲಕೋಟೆ:- ರಾಜ್ಯದ ನೇಕಾರರು ತೀವ್ರ ಸಂಕಷ್ಟ ಎದುರಿಸುತ್ತಿರುವದನ್ನು ಅರಿತಿರುವ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ದಿನದಂದೇ 100 ಕೋಟಿ ರೂ.ಗಳಷ್ಟು ನೇಕಾರರ ಸಾಲಮನ್ನಾ ಯೋಜನೆ ಕೈಗೊಂಡಿರುವದು ಸ್ವಾಗತಾರ್ಹವಾದುದು ಎಂದು ಹಳೇಹುಬ್ಬಳ್ಳಿಯ ವೀರಭಿಕ್ಷಾವ್ರತಿ ಮಠದ, ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳು ಸಂತಸ ವ್ಯಕ್ತಪಡಿಸಿದರು.
         ರಬಕವಿ- ಬನಹಟ್ಟಿ ನಗರದ ಹಿರೇಮಠದಲ್ಲಿ ರಾಜ್ಯ ನೇಕಾರ ಸೇವಾ ಸಂಘದ ಆಶ್ರಯದಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನೇಕಾರರ ಒಟ್ಟು ಸಾಲ 241 ಕೋಟಿ ರೂ.ಗಳಷ್ಟು ಮಾತ್ರ ಇದೆ. ಅರ್ಧದಷ್ಟು ಸಾಲ ಮನ್ನಾ ಮಾಡಿರುವ ರಾಜ್ಯ ಸರ್ಕಾರ ಇನ್ನೂ 141 ಕೋಟಿ ರೂ.ಗಳಷ್ಟು ಸಾಲ ಮನ್ನಾ ಮಾಡಿದ್ದಲ್ಲಿ ರಾಜ್ಯದ ಪ್ರತಿಯೊಬ್ಬರ ನೇಕಾರನ ಸಂಪೂರ್ಣ ಸಾಲ ಮನ್ನಾ ಮಾಡಿದಂತಾಗುವದು ಅಲ್ಲದೆ ನೇಕಾರ ಸಮುದಾಯದ ಶಾಶ್ವತ ಪರಿಹಾರಕ್ಕೆ ಮಾರ್ಗೋಪಾಯ ಕಂಡಂತಾಗುವದು ಎಂದು ಶ್ರೀಗಳು ಹೇಳಿದರು.
         ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ನೇಕಾರ ಸಮುದಾಯಕ್ಕೆ ಸದ್ಯ ನಿರಾಳವಾಗುವಂತಾಗಿದೆ. ಅಲ್ಲದೆ ಶೀಘ್ರವೇ ಈ ಯೋಜನೆಯನ್ನು ಅನುಮೋದನೆ ನೀಡುವ ಮೂಲಕ ನೇಕಾರ ಸಮುದಯ ಋಣಮುಕ್ತ ಕುಟುಂಬವನ್ನಾಗಿ ಮಾಡಬೇಕೆಂದು ಹಿರೇಮಠದ ಶರಣಬಸವ ಶಿವಾಚಾರ್ಯರು ಹೇಳಿದರು.
         ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವನಿಂಗ ಟಿರಕಿ, ಸದಾಶಿವ ತಟಕೋಟ, ತಮ್ಮಣ್ಣಿ ಸಿದ್ದಪ್ಪನ್ನವರ, ಸಂಗಪ್ಪ ಉದಗಟ್ಟಿ, ಅನಿಲ ಟಿರಕಿ, ಲಕ್ಕಪ್ಪ ಪವಾರ, ಶ್ರೀಶೈಲ ಕೊಪ್ಪದ, ಉದಯ ಕುಲಗೋಡ, ಆನಂದ ಬಾಣಕಾರ, ಸದಾಶಿವ ಸಾರವಾಡ, ಸಂಗಪ್ಪ ಕೊಳ್ಳಿ, ರವಿ ಸುಟ್ಟಟ್ಟಿ, ಚಂದ್ರಶೇಖರ ಬಾಗೇವಾಡಿ, ಸಂತೋಷ ಮಾಚಕನೂರ, ರವಿ ಕೊರತೆ, ಬಸವರಾಜ ಮನ್ಮಿ ಅನೇಕರಿದ್ದರು.Conclusion:ಈ ಟಿವಿ,ಭಾರತ,ಬಾಗಲಕೋಟೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.