ಬಾಗಲಕೋಟೆ: ಕಾರ್ಗಿಲ್ ವಿಜಯ ದಿನದ ಅಂಗವಾಗಿ ಚೊಳಚಗುಡ್ಡ ಗ್ರಾಮದಲ್ಲಿರುವ ವೀರಗಲ್ಲಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಮಾಲಾರ್ಪಣೆ ಮಾಡಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಕಾರ್ಗಿಲ್ ಯುದ್ಧದ ಸಮಯದಲ್ಲಿ ಚೊಳಚಗುಡ್ಡ ಗ್ರಾಮದ ಶಿವಬಸಯ್ಯ ಕುಲಕರ್ಣಿ ಎಂಬುವರು ವೀರ ಮರಣ ಹೊಂದಿದ್ದರು. ಇವರ ಸ್ಮರಣಾರ್ಥವಾಗಿ ವೀರಗಲ್ಲು ನಿರ್ಮಾಣ ಮಾಡಲಾಗಿದೆ.
ವೀರಮರಣ ಹೊಂದಿದ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಲಾಯಿತು. ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್, ಸೈನಿಕರ ಮನೆಯಲ್ಲಿ ಸಾವಿನ ರೋದನೆ ಕೆಳದಿರಲಿ, ವಿಶ್ವದಲ್ಲಿ ಶಾಂತಿ ಸದಾ ನೆಲೆಸಲಿ. ದೇಶ ಪ್ರೇಮ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಚಖಂಡಯ್ಯ ಹಂಗರಗಿ, ಪಿ.ಆರ್. ಗೌಡರ, ಎಂ.ಎಚ್. ಚಲವಾದಿ, ಮಲ್ಲಣ್ಣ ಯಲಿಗಾರ, ರಾಜಮಹ್ಮದ ಬಾಗವಾನ, ಬಾಪುಗೌಡ ಪಾಟೀಲ, ಪ್ರಕಾಶ ದೇಸಾಯಿ, ಆರ್.ಕೆ. ಜೋಶಿ, ಚನ್ನಯ್ಯ ಹಂಪಿಹೊಳಿ, ರಂಗು ಗೌಡರ, ಆನಂದ ದೊಡ್ಡಮನಿ, ಶರಣಪ್ಪ ತಮಿನಾಳ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.