ಬಾಗಲಕೋಟೆ : ನೆರೆಯ ಕೇರಳ ರಾಜ್ಯದ ಕಾಸರಗೋಡಿನಿಂದ ಕಳೆದೆರಡು ದಿನಗಳಲ್ಲಿ ಜಿಲ್ಲೆಗೆ ಆಗಮಿಸಿದ ಜನರನ್ನು ಹೋಂ ಕ್ವಾರಂಟೈನ್ನಲ್ಲಿಟ್ಟು ತೀವ್ರ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮಕ್ಕೆ ಆಗಮಿಸಿದ 23 ಜನರನ್ನು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಇರಿಸಲಾಗಿದೆ. ಗುಳೇದಗುಡ್ಡ ತಾಲೂಕಿನ ಆಸಂಗಿ ಗ್ರಾಮಕ್ಕೆ ಆಗಮಿಸಿದ 22 ಜನರನ್ನು ಆಶಾದೀಪ ಅಭಿವೃದ್ಧಿ ಸಂಸ್ಥೆಯಲ್ಲಿರಿಸಿ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಹುನಗುಂದಕ್ಕೆ ಆಗಮಿಸಿದ 28 ಜನರನ್ನು ಅಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮತ್ತು 14 ಜನರನ್ನು ಆದರ್ಶ ವಿದ್ಯಾಲಯದ ಪರಿಹಾರ ಕೇಂದ್ರದಲ್ಲಿ ಇರಿಸಲಾಗಿದೆ ಎಂದರು.
ಕಾಸರಗೋಡಿನಿಂದ ಬಾಗಲಕೋಟೆಗೆ ಆಗಮಿಸಿದ 87 ಜನರ ಮೇಲೆ ವಿಶೇಷ ನಿಗಾ - ಕಾಸರಗೋಡಿನಿಂದ ಬಾಗಲಕೋಟೆಗೆ ಆಗಮಿಸಿದ 87 ಜನರ ಮೇಲೆ ತೀವ್ರ ನಿಗಾ
ಕೇರಳದ ಕಾಸರಗೋಡು ಮತ್ತು ಮಂಗಳೂರಿಗೆ ಗುಳೆ ಹೋಗಿದ್ದ ಬಾಗಲಕೋಟೆಯ ಕೂಲಿ ಕಾರ್ಮಿಕರು ಜಿಲ್ಲೆಗೆ ಹಿಂದಿರುಗಿದ್ದು, ಕೊರೊನಾ ಪೀಡಿತ ಪ್ರದೇಶಗಳಿಂದ ಬಂದಿದ್ದರಿಂದ ಎಲ್ಲರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಿ ತೀವ್ರ ನಿಗಾ ಇಡಲಾಗಿದೆ.