ಬಾಗಲಕೋಟೆ: ನೋಂದಾಣಿ ಮಾಡಿಸದ ಕೀಟನಾಶಕ ಮಳಿಗೆಗಳ ಮೇಲೆ ಜಿಲ್ಲೆಯ ಕೃಷಿ ಇಲಾಖೆಯ ಜಾಗೃತ ಕೋಶ ದಾಳಿ ನಡೆಸಿದೆ. ಹುನಗುಂದ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಮಳಿಗೆ ಮೇಲೆ ದಾಳಿ ಮಾಡಲಾಗಿದ್ದು, 610 ಲೀಟರ್ನಷ್ಟು ನೈಟ್ರೊಬೆಂಜಿನ್ ಎಂಬ ರಾಸಾಯನಿಕವನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮ ಕೃಷಿ ಪರಿಕರ ಮಾರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಆದ್ದರಿಂದ ರೈತರು ಖರೀದಿ ಮಾಡುವ ಮುನ್ನ ಬಾಟಲ್, ಪಾಕೇಟ್ ಮೇಲೆ ಲೇಬಲ್ ಪರಿಶೀಲಿಸಿ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಲು ಹಾಗೂ ಖರೀದಿಸಿದ ಪರಿಕರಕ್ಕೆ ಕಡ್ಡಾಯವಾಗಿ ಬಿಲ್ಗಳನ್ನು ಪಡೆದುಕೊಳ್ಳುಲು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರು ಯಾವುದೇ ಕಾರಣಕ್ಕೂ ನೋಂದಾಯಿತವಲ್ಲದ ಕೀಟನಾಶಕಗಳನ್ನು ದಾಸ್ತಾನು, ಮಾರಾಟ ಮಾಡದಿರಲು ಜಂಟಿ ಕೃಷಿ ನಿರ್ದೇಶಕ ಡಾ.ಚೇತನಾ ಪಾಟೀಲ ತಿಳಿಸಿದರು.