ETV Bharat / state

ಬಾಗಲಕೋಟೆ: ಇಫ್ತಾರ್ ಕೂಟದಲ್ಲಿ ಹಿಂದೂ-ಮುಸ್ಲಿಮರು ಭಾಗಿ - ಈಟಿವಿ ಭಾರತ್ ಕನ್ನಡ ಸುದ್ದಿ

ಬಾಗಲಕೋಟೆಯ ಈದ್ಗಾ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಹಿಂದೂ, ಮುಸ್ಲಿಮರು ಪಾಲ್ಗೊಂಡಿದ್ದರು.

ಬಾಗಲಕೋಟೆಯಲ್ಲಿ ಇಫ್ತಾರ್ ಕೂಟ ಆಯೋಜನೆ
ಬಾಗಲಕೋಟೆಯಲ್ಲಿ ಇಫ್ತಾರ್ ಕೂಟ ಆಯೋಜನೆ
author img

By

Published : Apr 11, 2023, 3:58 PM IST

ಈದ್ಗಾ ಮಸೀದಿಯ ಹುಪ್ತಾಹುಸೇನ್ ಶೇಖ್ ಮಾತನಾಡಿದರು.

ಬಾಗಲಕೋಟೆ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಪ್ರಾರ್ಥನೆ, ಉಪವಾಸ ಹಾಗು ಇಫ್ತಾರ್‌ ಕೂಟದಲ್ಲಿ ಹಿಂದೂ‌ಗಳೂ ಸೇರಿಕೊಂಡು ಭಾವೈಕ್ಯತೆ ಮೆರೆದರು. ಒಂದು ತಿಂಗಳ ಕಾಲ ಉಪವಾಸ ನಡೆಯಲಿದ್ದು ಬಾಗಲಕೋಟೆಯಲ್ಲಿ ಮುಸ್ಲಿಮರಿಗೆ ಇಫ್ತಾರ್​ ಕೂಟ ಆಯೋಜಿಸಲಾಗಿತ್ತು. ನವನಗರದ ಈದ್ಗಾ ಪ್ರಾರ್ಥನಾ ಮಂದಿರದಲ್ಲಿ ನಡೆದ ಕೂಟದಲ್ಲಿ ಉಭಯ ಸಮುದಾಯದ ಜನರು ಸೇರಿದ್ದರು.

ಇದನ್ನೂ ಓದಿ: ಧರ್ಮದ ಹಂಗಿಲ್ಲ, ಸಾಮರಸ್ಯಕ್ಕೆ ಕುಂದಿಲ್ಲ.. ಹಿಂದೂ ಮುಸ್ಲಿಂ ಮುತ್ತೈದೆಯರಿಗೆ ಉಡಿ ತುಂಬಿ ಭಾವೈಕ್ಯತೆ ಮೆರೆದ ಸಿದ್ಧಾಶ್ರಮ

ಇಫ್ತಾರ್​ ಆರಂಭಕ್ಕೂ ಮುನ್ನ ಸ್ಥಳೀಯ ಈದ್ಗಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ರೋಜಾ ನಿಮಿತ್ತ ಉಪವಾಸವಿದ್ದು ಬಂದು ಇಲ್ಲಿ ಪ್ರಾರ್ಥನೆ ಸಲ್ಲಿಸಿ, ಆಹಾರ ಸೇವನೆ ಮಾಡುತ್ತಾರೆ. ನಂತರ ಉಪವಾಸ ಬಿಡುತ್ತಾರೆ. ಈ ರೋಜಾ ಆಚರಣೆ ಹೇಗೆ ನಡೆಯುತ್ತದೆ, ಪ್ರಾರ್ಥನೆ ಸಲ್ಲಿಸುವ ಬಗೆ ಹೇಗೆ ಎಂಬುದನ್ನು‌ ಹಿಂದೂ ಸಮುದಾಯವರಿಗೆ ತಿಳಿಸುವ ದೃಷ್ಟಿಯಿಂದ ಹಾಗೂ ಸಾಮೂಹಿಕ ಪ್ರಾರ್ಥನೆ ಮಾಡುವ ಜೊತೆಗೆ ಉಪವಾಸ ಲಾಭಗಳನ್ನು ಮುಸ್ಲಿಂ ಧಾರ್ಮಿಕ ಗುರುಗಳು ಪ್ರವಚನ ನೀಡುತ್ತಾರೆ.

ಇದನ್ನೂ ಓದಿ : ಹೊಸ ವರ್ಷಕ್ಕೆ ಭಾವೈಕ್ಯತೆ ಸಾರುವ ಕೇಕ್​​ಗಳು.. ಬೆಣ್ಣೆನಗರಿ ಜನರ ಗಮನಸೆಳೆದ ಮಂದಿರ‌ ಮಸೀದಿ ಚರ್ಚ್​

ಹಿಂದೂ ಸಮಾಜದ ಮುಖಂಡರನ್ನು ಕರೆಸಿ ಹಣ್ಣು ಹಂಪಲು, ತಂಪು ಪಾನೀಯದ ಜೊತೆಗೆ ಭೋಜನದ ವ್ಯವಸ್ಥೆ ಮಾಡಿ ಭಾವೈಕ್ಯತೆ ಸಾರಿದರು. ರಾಜಕೀಯ ಲಾಭಕ್ಕಾಗಿ ಧರ್ಮ, ಜಾತಿಗಳ ನಡುವೆ ವಿಷ ಬಿತ್ತಿ ಕೋಮುದ್ವೇಷ ಮೂಡಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಭಾವೈಕ್ಯತೆಯ ಸಂದೇಶ ಸಾರಿದರು. ಪ್ರತಿದಿನ ಒಬ್ಬ ದಾನಿಯಿಂದ ಒಂದು ಕ್ವಿಂಟಲ್ ಅಕ್ಕಿ ಹಾಗೂ ಐವತ್ತು ಕೆಜಿ ಚಿಕನ್ ನೀಡುವ ಮೂಲಕ ರೋಜಾ ಉಪವಾಸ ಮಾಡಿವವರಿಗೆ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಮಸೀದಿ ಮುಂದೆ ಮಾರಮ್ಮನ ಕೊಂಡೋತ್ಸವ; ಚಾಮರಾಜನಗರ ಗಡಿಯಲ್ಲೊಂದು ಭಾವೈಕ್ಯತೆ

ರಂಜಾನ್ ಪ್ರಾರ್ಥನೆ ವೇಳೆ ಇಮಾಮ್​ ಹೆಗಲೇರಿತು ಬೆಕ್ಕು: ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.