ETV Bharat / state

ಸಾರ್ವಜನಿಕರಲ್ಲಿ ಕಡಿಮೆಯಾದ ಕೊರೊನಾತಂಕ: ಐತಿಹಾಸಿಕ ತಾಣದಲ್ಲಿ ಪ್ರವಾಸಿಗರ ದಂಡು

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಇದರಿಂದ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಈಗ ಪ್ರವಾಸಿಗರಿಂದ ತುಂಬಿ‌ ತುಳುಕುತ್ತಿವೆ.

Huge number of tourists Visiting to historical places
ಐತಿಹಾಸಿಕ ತಾಣದಲ್ಲಿ ಪ್ರವಾಸಿಗರ ದಂಡು
author img

By

Published : Dec 28, 2020, 3:40 PM IST

ಬಾಗಲಕೋಟೆ: ಕೊರೊನಾ ಭೀತಿಯಿಂದ ಕಳೆದ ಎಂಟು ತಿಂಗಳಿನಿಂದಲೂ ಜಿಲ್ಲೆಯ ಐತಿಹಾಸಿಕ ತಾಣಗಳು ಪ್ರವಾಸಿಗರು ಇಲ್ಲದೆ ಭಣಗುಡುತ್ತಿದ್ದವು. ಆದರೆ ಈಗ ಸಾರ್ವಜನಿಕರಲ್ಲಿ ಭೀತಿ ಕಡಿಮೆ ಆಗಿದ್ದರಿಂದ ಐತಿಹಾಸಿಕ ತಾಣಗಳಿಗೆ ಮತ್ತೆ ರಂಗು ಬಂದಿದೆ.

ಸಾರ್ವಜನಿಕರಲ್ಲಿ ಕಡಿಮೆಯಾದ ಕೊರೊನಾತಂಕ: ಐತಿಹಾಸಿಕ ತಾಣದಲ್ಲಿ ಪ್ರವಾಸಿಗರ ದಂಡು

ಜಿಲ್ಲೆಯಲ್ಲಿ ಚಾಲುಕ್ಯರ ಕಾಲದ ಸ್ಮಾರಕಗಳ ವೀಕ್ಷಣೆಗೆ ಈಗ ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಈಗ ಪ್ರವಾಸಿಗರಿಂದ ತುಂಬಿ‌ ತುಳುಕುತ್ತಿವೆ.

ವೀಕ್ ​ಎಂಡ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ರಜೆ ಹಾಕಿ ಬೇರೆ ಬೇರೆ ಪ್ರದೇಶಗಳಿಂದ‌ ಜನರು ಬರುತ್ತಿದ್ದಾರೆ. ವಿದೇಶ ಹಾಗೂ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದ ಕೊರೊನಾ ಭೀತಿ ದೂರಾಗಿ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ‌ ಸ್ಥಳೀಯ ಚಿಕ್ಕಪುಟ್ಟ ವ್ಯಾಪಾರ ವಹಿವಾಟು ಸಹ‌ ನಡೆಯುತ್ತಿದೆ. ಇದು‌ ಸ್ಥಳೀಯ ಜನತೆಯ ಉಪ ಜೀವನಕ್ಕೆ ಅನುಕೂಲಕರವಾಗಿದೆ. ಕೊರೊನಾದಿಂದ ತೊಂದರೆಗೆ ಒಳಗಾಗಿದ್ದ ಬೀದಿಬದಿ ವ್ಯಾಪಾರಸ್ಥರಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವುದು ಸಂತಸ ಮೂಡಿಸಿದೆ. ಇದರಿಂದ ಗೈಡ್ ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ಬಲ ಬಂದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.