ಬಾಗಲಕೋಟೆ : ನಗರಾಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತರಾಗಿ ಗಣಪತಿ ಪಾಟೀಲ್ ಅವರು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪಾಟೀಲರು, ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಚೇರಿಯ ಪ್ರಭಾರಿ ಅಧಿಕಾರಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.
ಸಮರ್ಥವಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಸಾರ್ವಜನಿಕ ಅಹವಾಲು ಸ್ವೀಕರಿಸಿ ದಾಖಲೆಗಳನ್ನು ಸಮರ್ಥವಾಗಿ ಒದಗಿಸುತ್ತಿದ್ದರು. ಈ ಕೆಲಸ ವೈಖರಿ ಕಂಡು ಮತ್ತೊಂದು ಪ್ರಭಾರಿ ಹುದ್ದೆ ನೀಡಲಾಗಿದೆ. ಶ್ರೀಮತಿ ರಂಜನಾ ಮನವಳ್ಳಿ ಅವರಿಂದ ಇಂದು ಪಾಟೀಲರು ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಆಯುಕ್ತರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಲಾಯ್ತು.