ಬಾಗಲಕೋಟೆ : ಕಾರ್ಮಿಕರ ದಿನಾಚರಣೆ ಅಂಗವಾಗಿ ಮಾಜಿ ಶಾಸಕ ಪಿ ಎಚ್ ಪೂಜಾರ ಪೌರ ಕಾರ್ಮಿಕರಿಗೆ ಆರತಿ ಮಾಡಿ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಗೌರವ ಸಲ್ಲಿಸಿದರು.
ಪೂಜಾರ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಎಲ್ಲರನ್ನು ಕರೆದು ಮಾರ್ಲಾಪಣೆ ಮಾಡಿ, ಎಲ್ಲರಿಗೂ ಆರತಿ ಮಾಡಿ, ಅವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು. ಕೊರೊನಾ ವೈರಸ್ ಭೀತಿಯ ಸಮಯದಲ್ಲಿಯೂ ಕೆಂಪು ವಲಯದ ಪ್ರದೇಶದಲ್ಲಿ ಹೋಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಔಷಧ ಸಿಂಪಡಣೆ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಇಡೀ ನಗರವನ್ನು ಸ್ವಚ್ಛವಾಗಿಡುವುದಕ್ಕೆ ಪೌರ ಕಾರ್ಮಿಕರೇ ಕಾರಣ. ಇವರಿಗೆ ಲಾಕ್ಡೌನ್ ಸಮಯದಲ್ಲಿ ಆಹಾರದ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅವರಿಗೆ ಆರತಿ, ಆಹಾರದ ಕಿಟ್ ವಿತರಿಸಲಾಗಿದೆ.