ETV Bharat / state

ಹಾನಗಲ್ ಕುಮಾರೇಶ್ವರ ಮೆಡಿಕಲ್‌ ಕಾಲೇಜ್​ಗೆ ವೈದ್ಯಕೀಯ ಉಪಕರಣ ದೇಣಿಗೆ - ವೈದ್ಯಕೀಯ ಆಡಳಿತ ಮಂಡಳಿ

ಹಾನಗಲ್ ಕುಮಾರೇಶ್ವರ ಮೆಡಿಕಲ್‌ ಕಾಲೇಜ್​ಗೆ ಕೊಟಕ್ ಮಹೀಂದ್ರಾ ಬ್ಯಾಂಕ್​ನ ಬಾಗಲಕೋಟೆ ಶಾಖೆಯಿಂದ ವೈದ್ಯಕೀಯ ಉಪಕರಣ ದೇಣಿಗೆಯಾಗಿ ನೀಡಲಾಯಿತು.

ಹಾನಗಲ್ ಕುಮಾರೇಶ್ವರ ಮೆಡಿಕಲ್‌ ಕಾಲೇಜ್​ಗೆ ವೈದ್ಯಕೀಯ ಉಪಕರಣ ದೇಣಿಗೆ

author img

By ETV Bharat Karnataka Team

Published : Dec 6, 2023, 11:01 PM IST

ಹಾನಗಲ್ ಕುಮಾರೇಶ್ವರ ಮೆಡಿಕಲ್‌ ಕಾಲೇಜ್​ಗೆ ವೈದ್ಯಕೀಯ ಉಪಕರಣ ದೇಣಿಗೆ

ಬಾಗಲಕೋಟೆ: ನಗರದ ಬಿ.ವಿ.ವಿ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಶ್ರವಣದೋಷವುಳ್ಳ ಮಕ್ಕಳ ಚಿಕಿತ್ಸಾ ಕೇಂದ್ರಕ್ಕೆ ಕೊಟಕ್ ಮಹೀಂದ್ರಾ ಬ್ಯಾಂಕ್‍ನ ಬಾಗಲಕೋಟೆ ಶಾಖೆಯಿಂದ ಸುಮಾರು 50 ಲಕ್ಷ ರೂಪಾಯಿಗಳ ಮೌಲ್ಯದ ‘ಫೆಸಿಯಲ್ ನರ್ವ್ ಮಾನಿಟರ್’ ಮತ್ತು ‘ಬೆನ್-ಎರ್ ಡ್ರಿಲ್ ಮಶಿನ್’ ಎನ್ನುವ ಎರಡು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ದೇಣಿಗೆಯಾಗಿ ನೀಡಲಾಯಿತು.

ಮಕ್ಕಳ ಶ್ರವಣದೋಷ ನಿವಾರಣೆಗಾಗಿ ಕಾಕ್ಲಿಯರ್ ಉಪಕರಣ ಅಳವಡಿಸುವ ಸಂದರ್ಭದ ಶಸ್ತ್ರಚಿಕಿತ್ಸೆ ವೇಳೆ ಮುಖದ ನರಗಳಿಗೆ ತೊಂದರೆಯಾಗದಂತೆ ಫೆಸಿಯಲ್ ನರ್ವ್ ಮಾನಿಟರ್ ಕಾರ್ಯನಿರ್ವಹಿಸುತ್ತದೆ. ಬೆನ್-ಎರ್ ಡ್ರಿಲ್ ಯಂತ್ರವು ಕಾಕ್ಲಿಯರ್ ಉಪಕರಣ ಅಳವಡಿಸಲು ಕಿವಿಯ ಹಿಂದೆ ರಂಧ್ರ ಕೊರೆಯಲು ಬಳಕೆಯಾಗುತ್ತದೆ.

ಮಹೀಂದ್ರಾ ಬ್ಯಾಂಕಿನ ಸಿನಿಯರ್ ವೈಸ್-ಪ್ರೆಸಿಡೆಂಟ್ ಕಾರ್ತಿಕ್ ಸಿ, ವೈಸ್-ಪ್ರೆಸಿಡೆಂಟ್ ಉಮಾಮಹೇಶ್ವರಿ ಸುನೀಲ, ಮಾರ್ಕೇಟಿಂಗ್ ಮ್ಯಾನೇಜರ್ ಹೀತಲ್ ಶಾ ಮತ್ತು ರಘುನಾಥರಾವ್, ಏರಿಯಾ ಮ್ಯಾನೇಜರ್ ಮಂಜುನಾಥ ಕೆಲೂರ, ಬಾಗಲಕೋಟ ಶಾಖಾ ಮ್ಯಾನೇಜರ್ ಮಲ್ಲಪ್ಪ ಬಡಗಾನಿ, ಮತ್ತು ರವೀಂದ್ರ ಪಂಡಿತ ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಈ ಅತ್ಯಾಧುನಿಕ ಯಂತ್ರಗಳನ್ನು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರಿಗೆ ಹಸ್ತಾಂತರಿಸಿದರು.

ಯಂತ್ರಗಳನ್ನು ಸ್ವೀಕರಿಸಿ ಮಾತನಾಡಿದ ಡಾ. ವೀರಣ್ಣ ಚರಂತಿಮಠ, ‘ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಆರು ವರ್ಷದೊಳಗಿನ ಮಕ್ಕಳ ಕಿವುಡುತನದ ಚಿಕಿತ್ಸೆಗಾಗಿ ಕಾಕ್ಲಿಯರ್ ಉಪಕರಣ ಅಳವಡಿಸಲು ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸಾ ಕೇಂದ್ರವಾಗಿ ಅನುಮತಿ ನೀಡಲು ಆರೋಗ್ಯ ಇಲಾಖೆ ನಡೆಸಿದ ಪರಿವೀಕ್ಷಣೆಯಲ್ಲಿ ಕುಮಾರೇಶ್ವರ ಆಸ್ಪತ್ರೆಗೆ ಅನುಮತಿ ದೊರೆತಿದೆ. ಕುಮಾರೇಶ್ವರ ಆಸ್ಪತ್ರೆಯಲ್ಲಿನ ಇ.ಎನ್.ಟಿ ವಿಭಾಗದಲ್ಲಿ ಇನ್ನು ಮುಂದೆ ಆರು ವರ್ಷದೊಳಗಿನ ಮಕ್ಕಳ ಕಿವುಡುತನದ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು.

ಈಗಾಗಲೇ ಅಗತ್ಯದ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದೆ. ಬೆಂಗಳೂರಿನ ಮಾನಸಾ ಕಾಕ್ಲಿಯರ್ ಇಂಪ್ಲ್ಯಾಂಟ್ ಕೇಂದ್ರದ ತಜ್ಞರಾದ ಡಾ. ವಾಸಂತಿ ಆನಂದ ಕುಮಾರೇಶ್ವರ ಆಸ್ಪತ್ರೆಯ ವೈದ್ಯರಿಗೆ ತರಬೇತಿ ನೀಡಲಿರುವರು. ಈ ಚಿಕಿತ್ಸೆಗಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್‍ನ ವ್ಯವಸ್ಥಾಪಕರು ಎರಡು ಅತ್ಯಾಧುನಿಕ ಯಂತ್ರಗಳನ್ನು ದೇಣಿಗೆಯಾಗಿ ಕೊಟ್ಟು ತಮ್ಮ ಸಾಮಾಜಿಕ ಕಾಳಜಿ ಮೆರೆದಿರುವರು. ಅವರ ಈ ಸಮಾಜಮುಖಿ ನಡೆ ಅಭಿನಂದನಾರ್ಹವಾಗಿದೆ. ಅವರ ಸಹಕಾರವನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ’ ಎಂದು ನುಡಿದರು.

ಈ ಸಂದರ್ಭ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್. ಸಜ್ಜನ (ಬೇವೂರ), ವೈದ್ಯಕೀಯ ಆಡಳಿತ ಮಂಡಳಿ ಸದಸ್ಯರು, ಮೆಡಿಕಲ್ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಶಿವಕುಮಾರ ಸೊಲಬಣ್ಣವರ್, ವೈದ್ಯಕೀಯ ಅಧೀಕ್ಷಕಿ ಡಾ. ಭುವನೇಶ್ವರಿ ಯಳಮಲಿ, ಡಾ.ಎಸ್.ಎಸ್ ದೊಡ್ಡಮನಿ, ಡಾ. ಸಿ. ಎಸ್ ಹಿರೇಮಠ, ಡಾ. ಕೋರಾ ಮತ್ತು ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಯಲ್ಲಾಪುರದಲ್ಲಿ ಸಮಾಜ ಸೇವಕನಿಂದ ಮಾದರಿ ಕಾರ್ಯ: ಸರ್ಕಾರಿ ಆಸ್ಪತ್ರೆಗೆ 30 ಲಕ್ಷ ರೂ.ಗಳ ಉಪಕರಣ ದಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.