ETV Bharat / state

ರಾಜಕೀಯ ಸೇಡಿನಿಂದ ಡಿಕೆಶಿ ಬಂಧನ: ಮಾಜಿ ಸಿಎಂ ಸಿದ್ದರಾಮಯ್ಯ - ರಾಜಕೀಯ ದ್ವೇಷ

ಯಾವುದಾದರೂ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ನಾಶ ಮಾಡುತ್ತಿದ್ದರೆ ಬಂಧಿಸಬೇಕು. ಸಮನ್ಸ್​ಗೆ ಗೌರವ ನೀಡಿ ವಿಚಾರಣೆಗೆ ಹಾಜರಾದವರನ್ನು ಬಂಧಿಸಿರುವುದು ರಾಜಕೀಯ ದ್ವೇಷದಿಂದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Sep 6, 2019, 4:27 AM IST

ಬಾಗಲಕೋಟೆ: ಬಸವರಾಜ್ ಬೊಮ್ಮಾಯಿ ಯಾವಾಗ ವಕೀಲರಾಗಿ ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಡಿಕೆಶಿಗೆ ಬೇಲ್​ ಯಾವಾಗ ನೀಡಬೇಕು, ಯಾವಾಗ ನೀಡಬಾರದು ಎಂಬುದನ್ನು ಕೋರ್ಟ್​ ತೀರ್ಮಾನಿಸುತ್ತದೆ. ರಾಜಕೀಯ ದ್ವೇಷದಿಂದ ಡಿಕೆಶಿ ಅವರನ್ನು ಬಂಧಿಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೇರವಾಗಿಯೇ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ
ಜಿಲ್ಲೆಯ ಬಾದಾಮಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ಸಾಕ್ಷಿಗಳನ್ನು ನಾಶ ಪಡಿಸುತ್ತಿದ್ದರೆ ಅಥವಾ ತಪ್ಪಿಸಿಕೊಳ್ಳುತ್ತಾರೆ ಎಂಬುವುದಾದರೆ ಬಂಧಿಸಬೇಕು. ಸಮನ್ಸ್​ಗೆ ಒಪ್ಪಿ ವಿಚಾರಣೆಗೆ ಹಾಜರಾದವರನ್ನು ಬಂಧಿಸಿದ್ದು, ರಾಜಕೀಯ ಹಗೆತನದಿಂದ ಎಂದು ಬಿಜೆಪಿ ಮೇಲೆ ಪರೋಕ್ಷ ದಾಳಿ ನಡೆಸಿದರು.
ಇದೇ ವೇಳೆ ಮಲಪ್ರಭೆ ನದಿ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಬಾದಾಮಿ ತಾಲೂಕಿನ ಗ್ರಾಮಗಳ ನೆರೆ ಸಂತ್ರಸ್ತರಿಗೆ, ಶಿಕ್ಷಕರು ಸಂಗ್ರಹಿಸಿದ ₹ 1 ಲಕ್ಷ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಿದ್ದರಾಮಯ್ಯನವರ ಮೂಲಕ ತಹಶೀಲ್ದಾರಗೆ ಹಸ್ತಾಂತರಿಸಲಾಯಿತು.

ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಮೂರು ವಿದ್ಯಾರ್ಥಿಗಳಿಗೆ ಇದೇ ವೇಳೆ ಲ್ಯಾಪ್​ಟಾಪ್ ವಿತರಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕ-ಶಿಕ್ಷಕಿಯರನ್ನ ಶಾಲು ಹೊದಿಸಿ ಸಿದ್ದರಾಮಯ್ಯ ಸನ್ಮಾನಿಸಿದರು.

Intro:AnchorBody:-ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಶಿಕ್ಷಕರ ದಿನಾಚರಣೆಯನ್ನ ಸರಳವಾಗಿ ಆಚರಿಸಲಾಯಿತು.

ಬಾದಾಮಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಾ.ಸರ್ಪಪಲ್ಲಿ ರಾಧಾ ಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಲಪ್ರಭೆ ನದಿಯಿಂದ ಬಾಧಿತವಾದ ಬಾದಾಮಿ ತಾಲೂಕಿನ ಗ್ರಾಮಗಳ ನೆರೆ ಸಂತ್ರಸ್ತರಿಗೆ ಶಿಕ್ಷಕರು ಸಂಗ್ರಹಿಸಿದ ಒಂದು ಲಕ್ಷರೂಪಾಯಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಿದ್ದರಾಮಯ್ಯನವರ ಮೂಲಕ ತಹಶೀಲ್ದಾರ ಅವರಿಗೆ ಹಸ್ತಾಂತರಿಸಲಾಯಿತು.

ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಸಾಧನೆ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಲ್ಯಾಪಟಾಪ್ ವಿತರಿಸುವುದರ ಮೂಲಕ ಅಭಿನಂಧಿಸಿದರು.

ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕ ಶಿಕ್ಷಕಿಯರನ್ನ ಸಿದ್ದರಾಮಯ್ಯ ಶಾಲು ಹೊದ್ದಿಸಿ ಸನ್ಮಾನಿಸಿ ಗೌರವಿಸಿದರು.
ಈ ಮುಂಚೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ನವರು,ಡಿಕೆ ಶಿವಕುಮಾರ ಕಾನೂನು ಪ್ರಕಾರ ಬಂಧಿಸಲಾಗಿದೆ ಎಂಬ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬಸವರಾಜ ಬೊಮ್ಮಾಯಿ ಯಾವಾಗ ಲಾಯರ್ ಆಗಿ ಕೆಲಸ‌ಮಾಡಿದ್ದರೋ ಗೊತ್ತಿಲ್ಲಾ,ಬೇಲ್ ಯಾವಾಗ ಕೊಡಬೇಕು ಅಥವಾ ಕೊಡಬಾರ್ದು ಅನ್ನೋದು ಕಾನೂನಿನ ನಿರ್ಣಯ.ಆದ್ರೆ ಇಡಿ ಸಮನ್ಸಗೆ ಡಿಕೆಶಿ ಗೌರವ ಕೊಟ್ಟಿದ್ದಾರೆ.ನಾಲ್ಕು ದಿನಗಳ ಕಾಲ ಅವರು ಕರೆದ ಸ್ಥಳಕ್ಕೆ ಹಾಜರಾಗಿ ಸ್ಟೇಟಮೆಂಟ ಕೊಟ್ಟಿದ್ದಾರೆ.ಯಾಕೆ ಬೇಲ‌್ ಕೂಡಲಿಲ್ಲ .?ಬೇಲ್‌ ಕೊಡಬೇಕಾಗಿತ್ತು.

ನಮಗೆ ಕರೆದಾಗ ಸಿಗೋದಿಲ್ಲಾ,ಸಾಕ್ಷಿ ನಾಶ ಮಾಡ್ತಾರೆ ಎನ್ನೊ ಸನ್ನಿವೇದಲ್ಲಿ ಅರೆಸ್ಟ ಮಾಡ್ತಾರೆ.ಡಿಕೆಶಿ ಕರೆದಲ್ಲಿ ಬರುವಾಗ ,ಸಮನ್ಸಗೆ ಎಲ್ಲ ರೀತಿಯ ಉತ್ತರ ಕೊಟ್ಟಿರುವಾಗ ಕಸ್ಟಡಿಗೆ ತೆಗೆದುಕೊಂಡು ಇನ್ವೆಸ್ಟಿಗೇಶನ್ ಮಾಡುವ ಅನಿವಾರ್ಯಕತೆ ಏನಿತ್ತು ?ಇದೆಲ್ಲಾ ಪಾಲಿಟಿಕಲ್ ಮೋಟಿವೇಟೆಡ್ ರಾಜಕೀಯ ಸೇಡಿಗಾಗಿ ಈ ರೀತಿ ಮಾಡಿದ್ದಾರೆ ಎಂದು ಬಿಜೆಪಿಗರ ವಿರುದ್ದ ಹರಿಹಾಯ್ದರು.

ಬೈಟ್-- ಸಿದ್ದರಾಮಯ್ಯ ( ಮಾಜಿ ಮುಖ್ಯಮಂತ್ರಿ)Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.