ETV Bharat / state

ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅಯ್ಯಪ್ಪ ಮಾಲಾಧಾರಿಗಳ ದಂಡು - ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅಯ್ಯಪ್ಪ ಮಾಲಾಧಾರಿಗಳ ದಂಡು

ಮಿನಿ ಶಬರಿಮಲೆ ಎಂದೇ ಕರೆಯಲ್ಪಡುವ ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ವರ್ಷ ನಿತ್ಯ ನೂರಾರು ಭಕ್ತರು ಇರುಮುಡಿ ಇಳಿಸಲು ಬರುತ್ತಿದ್ದಾರೆ. ಶಬರಿಮಲೈ ಶ್ರೀ ಅಯ್ಯಪ್ಪ ದೇವಸ್ಥಾನವು ಡಿಸೆಂಬರ್ 30ರಂದು ತೆರೆದಿದ್ದು, ಜನೇವರಿ 15ರ ಮಕರ ಜ್ಯೋತಿ ದರ್ಶನದವರೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆಸಂಗಿ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ನಿತ್ಯ ನೂರಾರು ಜನರು ಬಂದು ಇರುಮುಡಿ ಇಳಿಸಿ ಹೋಗುತ್ತಿದ್ದಾರೆ.

Devotees visit the Asangi Ayyappa Swamy Temple
ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅಯ್ಯಪ್ಪ ಮಾಲಾಧಾರಿಗಳ ದಂಡು
author img

By

Published : Jan 8, 2021, 11:54 AM IST

ಬಾಗಲಕೋಟೆ : ಅಯ್ಯಪ್ಪ ಸ್ವಾಮಿ ಮಾಲೆ ಹಾಕಿರುವವರು ಪ್ರತಿ ವರ್ಷ ವೃತ ಮುಕ್ತಾಯಗೊಳಿಸಲು ಕೇರಳದ ಶಬರಿಮಲೈನಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗಿ ಇರುಮುಡಿ ಇಳಿಸಿ ಬರುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಹಾವಳಿ ಇವರನ್ನು ಅಲ್ಲಿಗೆ ಹೋಗದಂತೆ ಮಾಡಿದೆ.

ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅಯ್ಯಪ್ಪ ಮಾಲಾಧಾರಿಗಳ ದಂಡು

ರಾಜ್ಯದ ಮಾಲಾಧಾರಿಗಳು ಈ ಬಾರಿ ಕರ್ನಾಟಕದ 8 ಕಡೆಗಳಲ್ಲಿನ ಅಯ್ಯಪ್ಪ ದೇಗುಲಗಳಲ್ಲಿಯೇ ಇರುಮುಡಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪ ಕೃಷ್ಣಾ ನದಿ ಸಮೀಪದಲ್ಲಿ ಇರುವ ಈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇದೀಗ ರಾಜ್ಯ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಅಯ್ಯಪ್ಪ ಮಾಲಾಧಾರಿಗಳು ಬಂದು ಇರುಮುಡಿ ಇಳಿಸಿ ಹೋಗುತ್ತಿದ್ದಾರೆ.

ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿಕೊಂಡು ಇರುಮುಡಿ ಹೊತ್ತುಕೊಂಡು ಬರುತ್ತಿರುವ ಈ ಮಾಲಾಧಾರಿಗಳು, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವೃತಸೇವೆ ಮಾಡಿ ಇರುಮುಡಿ ಇಳಿಸಿ ಹೋಗುತ್ತಿದ್ದಾರೆ.

ಓದಿ :ಹಣ ವರ್ಗಾವಣೆ ಆರೋಪ: ಸಿಸಿಬಿ ವಿಚಾರಣೆಗೆ ನಟಿ ರಾಧಿಕಾ ಹಾಜರು

ಮಿನಿ ಶಬರಿಮಲೆ ಎಂದೇ ಕರೆಯಲ್ಪಡುವ ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ವರ್ಷ ನಿತ್ಯ ನೂರಾರು ಭಕ್ತರು ಇರುಮುಡಿ ಇಳಿಸಲು ಬರುತ್ತಿದ್ದಾರೆ. ಶಬರಿಮಲೈ ಶ್ರೀ ಅಯ್ಯಪ್ಪ ದೇವಸ್ಥಾನವು ಡಿಸೆಂಬರ್ 30ರಂದು ತೆರೆದಿದ್ದು, ಜನೇವರಿ 15ರ ಮಕರ ಜ್ಯೋತಿ ದರ್ಶನದವರೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.