ETV Bharat / state

ಕ್ವಾರಂಟೈನ್​ಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು - ಬಾಗಲಕೋಟೆ ಸುದ್ದಿ

ಕ್ವಾರಂಟೈನ್​ಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮದಲ್ಲಿ ನಡೆದಿದೆ.

Death of man drank poison to Fear for the Quarantine
ಕ್ವಾರಂಟೈನ್​ಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ,ಚಿಕಿತ್ಸೆ ಫಲಕಾರಿಯಾಗದೆ ಸಾವು
author img

By

Published : May 23, 2020, 8:06 AM IST

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮದಲ್ಲಿ ಕ್ವಾರಂಟೈನ್​ಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ತುಕಾರಾಮ ಪವಾರ್ (40) ಮೃತ ದುರ್ದೈವಿ. ಈತ ಮೇ 15ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಬಾಗಲಕೋಟೆಗೆ ಆಗಮಿಸಿದ್ದ.ಈತ ಮಹಾರಾಷ್ಟ್ರದಿಂದ ಬಂದಿರುವ ವಿಷಯ ತಿಳಿದು ಮೇ 16ರ ಬೆಳಿಗ್ಗೆ ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯಿತಿಯವರು ಕ್ವಾರಂಟೈನ್​ಗೆ ಸೂಚಿಸಿದ್ದರು. ಆದರೆ, ಈತ ಕ್ವಾರಂಟೈನ್​ಗೆ ಒಳಗಾಗಲು ನಿರಾಕರಿಸಿದ್ದ. ಬಳಿಕ ಈತನಿಗೆ 14 ದಿನ ಕ್ವಾರಂಟೈನ್​ನಲ್ಲಿ ಇರಬೇಕು. ಇಲ್ಲವಾದಲ್ಲಿ ಆತನ ಸ್ವಂತ ಊರಾದ ಯಾದಗಿರಿ ಜಿಲ್ಲೆ ಜುಮಲಾಪುರ ತಾಂಡಾಕ್ಕೆ ತೆರಳುವಂತೆ ಸಲಹೆ ನೀಡಿದ್ದರು.

ಬಳಿಕ ತುಕಾರಾಮ ಪವಾರ್ ಕ್ವಾರಂಟೈನ್​ಗೆ ಹೆದರಿ ವಿಷ ಸೇವಿಸಿದ್ದು,ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದ. ಆದರೆ, ಈತ ಚಿಕಿತ್ಸೆ ಫಲಕಾರಿದೆ ಮೃತಪಟ್ಟಿದ್ದು,ಕೋವಿಡ್​-19 ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.