ಬಾಗಲಕೋಟೆ: ಜಿಲ್ಲೆಯಲ್ಲಿಂದು 41 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 1,266 ಕೋವಿಡ್ ಪ್ರಕರಣಗಳು ಖಚಿತವಾಗಿವೆ. ಇಲ್ಲಿಯವರೆಗೆ 724 ಜನ ಗುಣಮುಖರಾಗಿದ್ದಾರೆ. 506 ಜನ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ತಿಳಿಸಿದ್ದಾರೆ.
ಹೊಸದಾಗಿ ಕಾಣಿಸಿಕೊಂಡ ಸೋಂಕಿತರ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ 15, ಜಮಖಂಡಿ 3, ಬನಹಟ್ಟಿ 6, ಬೀಳಗಿ 2, ಬಾದಾಮಿ 2, ತೇರದಾಳ 1, ಮುಧೋಳ 3, ಬೇರೆ ಜಿಲ್ಲೆಗಳಲ್ಲಿ 6 ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟವರ ಪೈಕಿ 26 ಕೆಮ್ಮು, ನೆಗಡಿ ಜ್ವರ ಹಾಗೂ ತೀವ್ರ ಉಸಿರಾಟದ ಲಕ್ಷಣದಿಂದ ಕೂಡಿರುತ್ತವೆ.
ಕೋವಿಡ್ ಚಿಕಿತ್ಸೆಯಿಂದ ಒಟ್ಟು 44 ಜನ ಗುಣಮುಖರಾಗಿದ್ದು, ರವಿವಾರ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 686 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 1,264 ಜನ ವೈದ್ಯಕೀಯ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 23,102 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 20910 ನೆಗೆಟಿವ್ ಪ್ರಕರಣ, 1,266 ಪಾಸಿಟಿವ್ ಪ್ರಕರಣ ಹಾಗೂ 39 ಜನ ಮೃತ ಪ್ರಕರಣ ವರದಿಯಾಗಿರುತ್ತವೆ. ಕೋವಿಡ್-19 ದಿಂದ ಒಟ್ಟು 724 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 506 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 160 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. ಕಂಟೈನ್‌ಮೆಂಟ್ ಝೋನ್ 118 ಇದ್ದು, ಇನ್‍ಸ್ಟಿಟ್ಯೂಶನ್ ಕ್ವಾರಂಟೈನ್‍ನಲ್ಲಿದ್ದ 6,296 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇಬ್ಬರು ಸಾವು:
ಕೋವಿಡ್‍ಗೆ ಗುಳೇದಗುಡ್ಡ ಮತ್ತು ಕೆರೂರು ಪಟ್ಟಣದಲ್ಲಿ ತಲಾ ಒಬ್ಬರು ಕೋವಿಡ್-19ಗೆ ಮೃತಪಟ್ಟ ವರದಿಯಾಗಿವೆ. ಗುಳೇದಗುಡ್ಡ ಪಟ್ಟಣದ 55 ವರ್ಷದ ಪುರುಷ ಜುಲೈ 21 ರಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜುಲೈ 26 ರಂದು ಮೃತಪಟ್ಟಿದ್ದಾರೆ.
ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ನಿವಾಸಿ 45 ವರ್ಷದ ಪುರುಷ ಜುಲೈ 21 ರಂದು ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕೋ ಮಾರ್ಬಿಡ್ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜುಲೈ 25 ರಂದು ರಾತ್ರಿ ಮೃತಪಟ್ಟಿರುತ್ತಾರೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.