ETV Bharat / state

ಕೊರೊನಾ ವಿರುದ್ಧದ ಹೋರಾಟಗಾರರಿಗೆ ಬಾಗಲಕೋಟೆಯಲ್ಲಿ ಪ್ರಶಂಸಾ ಪತ್ರ ನೀಡಿ ಗೌರವ

author img

By

Published : May 2, 2020, 7:30 PM IST

ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸರು ಹಾಗೂ ವೈದ್ಯರು ಸೇರಿದಂತೆ ಇತರ ಎಲ್ಲಾ ಅಧಿಕಾರಿ, ನೌಕರರಿಗೂ ದೇಶದಾದ್ಯಂತ ಗೌರವ ಸಮರ್ಪಿಸಲಾಗುತ್ತಿದೆ. ಇದೇ ರೀತಿ, ಬಾಗಲಕೋಟೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿ ಇತರ ಅಧಿಕಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.

corona warriors get Commemoration letter from mla veeranna charantimatt
ಕೊರೊನಾ ವಿರುದ್ಧ ಹೋರಾಟಕ್ಕಿಳಿದವರಿಗೆ ಬಾಗಲಕೋಟೆಯಲ್ಲಿ ಪ್ರಶಂಸಾ ಪತ್ರ ನೀಡಿ ಗೌರವ

ಬಾಗಲಕೋಟೆ: ಕೊರೊನಾ ವಾರಿಯರ್ಸ್​​ಗಳಾದ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​​ ಜಗಲಸಾರ ಹಾಗೂ ಅಪರ ಜಿಲ್ಲಾಧಿಕಾರಿ ಮುರಗಿ ಅವರಿಗೆ ಶಾಸಕ ವೀರಣ್ಣ ಚರಂತಿಮಠ ಪ್ರಶಂಸಾ ಪತ್ರ‌ ನೀಡಿ ಗೌರವಿಸಿದರು.

ಜಿಲ್ಲೆಯಲ್ಲಿ ಕೊರೊನಾ ವಿರುದ್ಧ ಸರ್ಕಾರಿ ಅಧಿಕಾರಿಗಳು ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸಿದ್ದಾರೆ. ಈ ಹಿನ್ನೆಲೆ ಡಿಸಿ, ಡಿಎಸ್​​ಪಿ ಸೇರಿದಂತೆ ಇತರ ಸರ್ಕಾರಿ ನೌಕರರಿಗೆ ಶಾಸಕ ಚರಂತಿಮಠ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಅವರ ನೇತೃತ್ವದಲ್ಲಿ ಪ್ರಶಂಸಾ ಪತ್ರ ನೀಡಿದರು. ಕೊರೊನಾ ವೈರಸ್ ಭೀತಿ ಸಮಯದಲ್ಲಿ ಎಲ್ಲರೂ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಕೊರೊನಾ ವೈರಸ್ ಸೋಂಕಿತರ ಪ್ರದೇಶದಲ್ಲಿ ಯಾರೂ ಸಂಚಾರ ಮಾಡದಂತೆ ಅಲ್ಲಿ ಇದ್ದವರಿಗೆ ಜಿಲ್ಲಾಡಳಿತ ಎಲ್ಲ ಸೌಲಭ್ಯ ನೀಡುವುದರ ಜೊತೆಗೆ, ಸೋಂಕಿತರ ಟ್ರ್ಯಾವೆಲ್​​ ಹಿಸ್ಟರಿ ಹಾಗೂ ಚಿಕಿತ್ಸೆ ‌ನೀಡುವ ವಿಧಾನದಲ್ಲಿ ಶ್ರಮಿಸಿದೆ. ಈ ಹಿನ್ನೆಲೆ ಅಧಿಕಾರಿಗಳೂ ಸೇರಿ ವೈದ್ಯರು, ಸಿಬ್ಬಂದಿಗೆ ಶಾಸಕರು ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.