ETV Bharat / state

ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನಿರಾಕರಿಸಿದ ವೀರಣ್ಣ ಚರಂತಿಮಠ

ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕಸಿರುವ ಡಾ.ವೀರಣ್ಣ ಚರಂತಿಮಠ ಅವರು, ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯಾಧ್ಯಕ್ಷರಾಗಿರುವ ಪರಮಶಿವಯ್ಯ ಅವರಿಗೆ ವಹಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Charanmati Math
ಶಾಸಕ ವೀರಣ್ಣ ಚರಂತಿಮಠ
author img

By

Published : Nov 23, 2020, 2:48 PM IST

ಬಾಗಲಕೋಟೆ: ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ನಿರಾಕರಿಸಿದ್ದಲ್ಲದೇ, ಮತ್ತೊಬ್ಬರ ಹೆಸರನ್ನು ಶಿಫಾರಸು​ ಮಾಡಿದ್ದಾರೆ.

ಬವಿವ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ವೀರಶೈವ - ಲಿಂಗಾಯತ ಸ್ಚಾಮೀಜಿಗಳು, ಪ್ರಮುಖ ಮುಖಂಡರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಸಮಾಜದಲ್ಲೂ ಪ್ರಭಾವ ಹೊಂದಿರುವ ಅವರು, ವೀರಶೈವ - ಲಿಂಗಾಯತ ತತ್ತ್ವ, ಇತಿಹಾಸವನ್ನು ಸಂಪೂರ್ಣ ಬಲ್ಲವರಾಗಿದ್ದಾರೆ.

ವೀರಶೈವ ಮಹಾಸಭಾದಲ್ಲೂ ತಮ್ಮದೇ ಆದ ಪ್ರಭಾವ ಹೊಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚರಂತಿಮಠ ಅವರಿಗೆ ದೂರವಾಣಿ ಮೂಲಕ ಪ್ರಾಧಿಕಾರದ ಸಾರಥ್ಯ ವಹಿಸುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

ಆದರೆ, ಚರಂತಿಮಠ ಅವರು ನಿರಾಕರಿಸಿದ್ದು, ಬೆಂಗಳೂರಿನ ಬಿ.ಎಸ್‌.ಪರಮಶಿವಯ್ಯ ಅವರಿಗೆ ಬಿಟ್ಟುಕೊಡಲು ನಿರ್ಧರಿಸಿದಲ್ಲದೇ ಅವರದೇ ಹೆಸರನ್ನು ಸಿಎಂಗೆ ತಿಳಿಸಿದ್ದಾರೆ. ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯಾಧ್ಯಕ್ಷರಾಗಿರುವ ಪರಮಶಿವಯ್ಯ ಅವರು ಬೆಂಗಳೂರಿನಲ್ಲಿ ಸಮುದಾಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ ಎನ್ನಲಾಗಿದೆ.

ಅವರೇ ಪ್ರಾಧಿಕಾರಕ್ಕೆ ಸೂಕ್ತ. ಸಮಾಜ ಸಂಘಟನೆಯಲ್ಲೂ ಅವರನ್ನು ಇನ್ನಷ್ಟು ಬಳಸಿಕೊಳ್ಳಬಹುದು ಎಂದು ಸಿಎಂ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಹೊಸ ಪ್ರಾಧಿಕಾರಕ್ಕೆ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.