ETV Bharat / state

ಚೈತ್ರಾ ಕುಂದಾಪುರಗೆ ಸೇರಿದ ಕಾರು ಮುಧೋಳದಲ್ಲಿ ಪತ್ತೆ.. ಟಿಕೆಟ್ ಡೀಲ್ ಪ್ರಕರಣ ಜಾಲ ಇಡೀ ರಾಷ್ಟ್ರದಲ್ಲಿ ಇರಬಹುದು: ಸಚಿವ ಆರ್​ ಬಿ ತಿಮ್ಮಾಪುರ

ಮುಧೋಳದಲ್ಲಿ ಯುವಕರೊಬ್ಬರು ಚೈತ್ರಾ ಕುಂದಾಪುರಗೆ ಸೇರಿದ ಕಾರು ತಂದು ಇಟ್ಟುಕೊಂಡಿರುವುದು ನೋವಿನ ಸಂಗತಿ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ತನಿಖೆ ಕೈಗೊಳ್ಳುತ್ತಾರೆ. ಈ ಜಾಲ ಕೇವಲ ರಾಜ್ಯದಲ್ಲಿ ಅಷ್ಟೇ ಇಲ್ಲ, ರಾಷ್ಟ್ರದಲ್ಲಿಯೂ ಇರಬಹುದು. ಎಲ್ಲವೂ ಪೊಲೀಸ್​ ತನಿಖೆಯಿಂದ ಹೂರಗೆ ಬರುತ್ತದೆ: ಸಚಿವ ಅರ್ ಬಿ‌ ತಿಮ್ಮಾಪುರ ಪ್ರತಿಕ್ರಿಯೆ

Minister R B Timmapur spoke to the media.
ಸಚಿವ ಅರ್ ಬಿ‌ ತಿಮ್ಮಾಪುರ ಮಾಧ್ಯಮದವರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Sep 17, 2023, 6:01 PM IST

Updated : Sep 17, 2023, 8:02 PM IST

ಸಚಿವ ಅರ್ ಬಿ‌ ತಿಮ್ಮಾಪುರ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಾಗಲಕೋಟೆ: ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣದ ಹಿನ್ನೆಲೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಚೈತ್ರಾ ಕುಂದಾಪುರ ಅವರಿಗೆ ಸೇರಿದ ಕಾರು ಪತ್ತೆಯಾಗಿದೆ. ಈ ಪ್ರಕರಣ ಮುಧೋಳ ಪಟ್ಟಣದವರೆಗೆ ವ್ಯಾಪಿಸಿದ್ದು ನೋವಿನ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರ್ ಬಿ‌ ತಿಮ್ಮಾಪುರ ಹೇಳಿದ್ದಾರೆ.

ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಕೆಟ್​ ಡೀಲ್​ನಲ್ಲಿ​ ದೊಡ್ಡ ಜಾಲವೇ ಇರಬಹುದು ಎಂಬ ಭಾವನೆ ನನ್ನದು. ಕುಂದಾಪುರ ಎಲ್ಲಿ, ಮುಧೋಳ ಎಲ್ಲಿ, ಪೊಲೀಸ್ ಇಲಾಖೆ ಅಧಿಕಾರಿಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದಲ್ಲಿ ‌ಕಾರು ಇದೆ. ಅದನ್ನು ತೆಗೆದುಕೊಂಡು‌ ಬನ್ನಿ ಎಂದು ಅವರ ಪಿ‌ಎಗೆ ಹೇಳಿದ ಮೇರೆಗೆ ಸೊಲ್ಲಾಪುರದಿಂದ ಮುಧೋಳ ನಗರಕ್ಕೆ ಅವರ ಆಪ್ತ ಕಿರಣ್​ ಎಂಬಾತ ತೆಗೆದುಕೊಂಡು ಬಂದಿದ್ದಾನೆ ಎಂದು ಹೇಳಿದರು.

ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣದ ಹಿಂದೆ ಬಹು ದೊಡ್ಡ ಜಾಲ ಇದ್ದು, ಎಲ್ಲಿಲ್ಲಿ‌ ಹರಡಿದೆಯೋ ಗೊತ್ತಿಲ್ಲ, ಬೇರೆ ರಾಜ್ಯದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ಕೆಲಸ ಮಾಡಿಕೊಂಡು, ಆ ಪಕ್ಷದಲ್ಲಿ, ಹಿಂದು ಸಂಘಟನೆ ಇದ್ದುಕೊಂಡು ಪ್ರಜಾಪ್ರಭುತ್ವ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವುದು ದುರದೃಷ್ಟಕರ ಎಂದು ಸಚಿವರು ಹೇಳಿದರು.

ಮುಧೋಳದಲ್ಲಿ ಯುವಕನು ಕಾರು ತಂದು ಇಟ್ಟಿಕೊಂಡಿರುವ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ. ಈ ಜಾಲ ಕೇವಲ ರಾಜ್ಯದಲ್ಲಿ ಅಷ್ಟೇ ಇಲ್ಲ, ರಾಷ್ಟ್ರ ಮಟ್ಟದಲ್ಲೂ ಇರಬಹುದು. ಎಲ್ಲೆಲ್ಲಿ ಆಗಿದೆ ಎಂಬುದು ತನಿಖೆಯಿಂದ ಹೂರಗೆ ಬರುತ್ತದೆ. ಬಾಗಲಕೋಟೆ, ಕಾರವಾರ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ‌ಪ್ರದೇಶದಲ್ಲಿ ಇಂತಹ ಜಾಲ ಇರಬಹುದು. ಆದರೆ ಇದರ ಹಿಂದೆ ಬಿಜೆಪಿಯ ಬಹುದೊಡ್ಡ ಮುಖಂಡರ ಕೈವಾಡ ಇರಬಹುದು ಎಂದು ಸಂಶಯ ಇದೆ. ಇದರ ಹಿಂದೆ ಇರುವ ಲಿಂಕ್ ಡಿ‌ ಲಿಂಕ್ ಆಗುತ್ತೆ, ಆ ಲಿಂಕ್​ ಎಲ್ಲವೂ ಹೂರಗೆ ಬರುತ್ತೆ ಎಂದು ಸಚಿವ ತಿಮ್ಮಾಪೂರ ತಿಳಿಸಿದರು.

ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೆ ಸಂಬಂಧವಿಲ್ಲ:ಆರಗ ಜ್ಞಾನೇಂದ್ರ

ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಆಕೆ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಶಿವಮೊಗ್ಗ ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಅವರ ಪ್ರಕರಣವನ್ನು ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಸಿಸಿಬಿ ತನಿಖೆ ನಡೆಯುತ್ತಿದೆ, ತನಿಖೆ ನಂತರ ಎಲ್ಲವೂ ಹೊರಬರುತ್ತದೆ ಎಂದು ಹೇಳಿದರು.

ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೆಟ್​ ಪಡೆಯುವ ಸಂಸ್ಕೃತಿ‌ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಅವರ್ಯಾರೋ ನಾಟಕ ಆಡಿದ್ದಾರೆ, ವಂಚನೆ ಮತ್ತು ಹಣ ಮಾಡೋರೋ ಈ ರೀತಿ ಮಾಡಿದ್ದಾರೆ ಎಂದರೆ ಅದಕ್ಕೂ ಬಿಜೆಪಿಗೂ ಏನು ಸಂಬಂಧ ಇಲ್ಲ. ಯಾರೋ ದುಡ್ಡು ಕೊಟ್ಟ ತಕ್ಷಣ ಟಿಕೆಟ್ ನೀಡಲು ಬಿಜೆಪಿ ಟಿಕೆಟ್​ ಅಷ್ಟೊಂದು ಅಗ್ಗ ಅಲ್ಲ. ಈ ರೀತಿ ಮಾಡಿರಬಹುದು, ಪ್ರಕರಣದ ಸತ್ಯಾಸತ್ಯತೆ ಸಿಸಿಬಿ ತನಿಖೆಯಿಂದ ಹೊರಬರುತ್ತದೆ. ಚೈತ್ರಾ ಕುಂದಾಪುರಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಆರೋಪಿಗಳು ಹೇಳುವುದೆಲ್ಲ ಸತ್ಯ ಅಂತ ತಿಳಿದುಕೊಳ್ಳುವುದು ತಪ್ಪು ಎಂದರು.

ಇದನ್ನೂಓದಿ:ಚೈತ್ರಾ ಕುಂದಾಪುರ ಗ್ಯಾಂಗ್​​ ವಂಚನೆ ಪ್ರಕರಣ: ಆರೋಪಿ ಚನ್ನ ನಾಯ್ಕ್ ಸಹೋದರ ಹೇಳಿದ್ದಿಷ್ಟು

Last Updated : Sep 17, 2023, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.