ಬಾಗಲಕೋಟೆ : ಉಕ್ರೇನ್ ದೇಶಕ್ಕೆ ಜಿಲ್ಲೆಯಿಂದ ಉನ್ನತ ವ್ಯಾಸಂಗಕ್ಕೆ ಸುಮಾರು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಹೀಗಾಗಿ, ಪೋಷಕರಲ್ಲಿ ಆತಂಕ ಎದುರಾಗಿದೆ.
ಕೆಲವರು ಬೆಳಗ್ಗೆಯಿಂದ ಪೋಷಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಎಲ್ಲ ವಿದ್ಯಾರ್ಥಿಗಳ ಮೊಬೈಲ್ಗೆ ಮೆಸೇಜ್ ಕಳುಹಿಸಲಾಗಿದೆ.
ಬಾಗಲಕೋಟೆ ತಾಲೂಕಿನ ಸೀಮೆಕೇರಿ ನಿವಾಸಿ ಸ್ಫೂರ್ತಿ ದೊಡ್ಡಮನಿ ಎಂಬುವರು, ಉಕ್ರೇನ್ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ಕರ್ನಾಟಕದ 9 ಜನರ ತಂಡದ ಜೊತೆಗೆ ಅವರು ಇದ್ದಾರೆ ಎಂಬುದು ತಿಳಿದು ಬಂದಿದೆ.
ಬಾಂಬ್ ಬ್ಲಾಸ್ಟ್ ಆಗುವ ಹಿನ್ನೆಲೆ ಅಂಡರ್ ಗ್ರೌಂಡ್ನಲ್ಲಿ ಕೂತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿಡಿಯೋವನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಸದ್ಯ ನಾವಿರುವ ಜಾಗದಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತಿವೆ. ಸುರಕ್ಷತೆ ಹಿನ್ನೆಲೆ ನಮ್ಮನ್ನು ಅಂಡರ್ ಗ್ರೌಂಡ್ಗೆ ಕಳುಹಿಸಿದ್ದಾರೆ.
ಸೌಂಡ್ ಕಡಿಮೆ ಆದಾಗ ಒಬ್ಬೊಬ್ಬರಾಗಿ ಮೇಲೆ ಬಂದು ಮನೆಯವರ ಜೊತೆ ಮಾತನಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದೇ ಸಮಯದಲ್ಲಿ ಉಕ್ರೇನ್‌ನಲ್ಲಿರುವ ಬಾಗಲಕೋಟೆ ವಿದ್ಯಾರ್ಥಿಗಳೊಂದಿಗೆ ಶಾಸಕ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದ್ದಾರೆ.
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು ವಿದ್ಯಾರ್ಥಿಗಳೊಂದಿಗೆ ಯೋಗಕ್ಷೇಮ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಧೈಯ೯ದಿಂದ ಇರುವಂತೆ ಮಾಹಿತಿ ನೀಡಿ, ವಿದ್ಯಾರ್ಥಿಗಳನ್ನ ಸುರಕ್ಷತೆಯಿಂದ ಕರೆ ತರುವ ಬಗ್ಗೆ ಈಗಾಗಲೇ ಸಿಎಂ ಬೊಮ್ಮಾಯಿ & ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ನಿಮ್ಮನ್ನು ಕರೆ ತರುವ ಪ್ರಯತ್ನ ನಡೆಸಿದ್ದೇವೆ ಎಂದ ಶಾಸಕರು ಭರವಸೆ ನೀಡಿದ್ದಾರೆ.
ಉಕ್ರೇನ್‌ನಲ್ಲಿರುವ ಬಾಗಲಕೋಟೆ ಮೂಲದ ಮನೋಜಕುಮಾರ ಚಿತ್ರಗಾರ ಅವರು ವಿಡಿಯೋ ಕಾಲ್ ಮೂಲಕ ಮಾತುಕತೆ ಮಾಡಿ ಉಕ್ರೇನ್ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಬೀಳಗಿ ಪಟ್ಟಣದ ನಿವಾಸಿಯಾಗಿರುವ ಸಹನಾ ಪಾಟೀಲ್ 4ನೇ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿನಿಯು ಉಕ್ರೇನ್‌ದಲ್ಲಿ ಸಿಲುಕಿರುವುದು ಮಾಹಿತಿ ಬಂದಿದೆ. ನಿನ್ನೆ ಸಂಜೆ ಬಾಂಬ್ ಬ್ಲಾಸ್ಟ್ ಆಗುತ್ತಿದ್ದ ಸ್ಥಳದ ಸಮೀಪ ಇದ್ದ ವಿದ್ಯಾರ್ಥಿನಿಯಿಂದ ಮಾಹಿತಿ ತಿಳಿದು, ವಿದ್ಯಾರ್ಥಿನಿ ಮನೆಯಲ್ಲಿ ಆತಂಕ ಹೆಚ್ಚಿದೆ.
ಸದ್ಯ ಬಾಂಬ್ ಶೆಲ್ಟರ್ನಲ್ಲಿ ರಕ್ಷಣೆ ಪಡೆದು ಮೆಟ್ರೋ ಟ್ರೈನ್ ಮೂಲಕ ಬೇರೆ ಕಡೆ ಸ್ಥಳಾಂತರ ಆಗುತ್ತಿದ್ದಾರೆ. ಮೆಟ್ರೊ ಟ್ರೈನ್ನಲ್ಲಿ ಪ್ರಯಾಣಿಸುವ ವಿಡಿಯೋ ಸಹ ಪಾಲಕರಿಗೆ ಕಳುಹಿಸಿದ್ದಾರೆ. ಟ್ರೈನ್ನಲ್ಲಿ ಬೇರೆ ಸ್ಥಳಕ್ಕೆ ತೆರಳುವ ವಿಡಿಯೋ ವಾಟ್ಸ್ಆ್ಯಪ್ಗೆ ಕಳುಹಿಸಿದ್ದಾರೆ.
ಓದಿ: ಜಾತಿ ಪ್ರಮಾಣ ಪತ್ರಕ್ಕಾಗಿ ಮಕ್ಕಳ ಪರದಾಟ: ಅಧಿಕಾರಿಗಳ ವಿರುದ್ಧ ಪೋಷಕರ ಆಕ್ರೋಶ