ETV Bharat / state

ತುಂತುರು ಮಳೆಗೆ ಕುಸಿದ ಮನೆ: ಒಂದೇ ಕುಟುಂಬದ ಮೂವರ ದಾರುಣ ಸಾವು

ತುಂತುರು ಮಳೆಗೆ ಮಣ್ಣಿನ ಮನೆ ಕುಸಿದು ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದ ಐವರು ಸದಸ್ಯರು ಮನೆಯಲ್ಲಿ ಮಲಗಿದ್ದಾಗ ತಡರಾತ್ರಿ ಎರಡು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ತುಂತುರು ಮಳೆಗೆ ಕುಸಿದ ಮನೆ
author img

By

Published : Oct 6, 2019, 11:12 AM IST

Updated : Oct 6, 2019, 11:21 AM IST

ಬಾಗಲಕೋಟೆ : ನಿರಂತರ ಮಳೆಯಿಂದಾಗಿ ತಡರಾತ್ರಿ ಮನೆಯ ಮಾಳಿಗೆ ಕುಸಿದು ಬಿದ್ದು ಮೂವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರವ ತುಂತುರು ಮಳೆಗೆ ಮಣ್ಣಿನ ಮನೆ ಕುಸಿದು ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದ ಐವರು ಸದಸ್ಯರು ಮನೆಯಲ್ಲಿ ಮಲಗಿದ್ದಾಗ ತಡರಾತ್ರಿ ಎರಡು ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಐವರ ಪೈಕಿ ಮೂವರು ಸಾವನ್ನಪ್ಪಿದ್ದು ಮೃತಪಟ್ಟವರನ್ನು ಈರಪ್ಪ ಹಡಪದ (60), ಗೌರವ್ವ(53), ನಿಂಗಪ್ಪ(32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅದೃಷ್ಠವಶಾತ್ ನಿಂಗಪ್ಪನ‌ ಪತ್ನಿ ಸವಿತಾ ಹಾಗೂ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊಲೀಸರು ಹಾಗೂ ಸ್ಥಳೀಯರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಸತತ ಆರು ಗಂಟೆಗಳ ಕಾರ್ಯಾಚರಣೆ ನಡೆಸಿ ಮನೆಯ ಅವಶೇಷಗಳ ಅಡಿ ಸಿಲುಕಿದ್ದ ಮೂವರ ಶವಗಳನ್ನ ಹೊರತೆಗೆದಿದ್ದಾರೆ.

ಇನ್ನು ಘಟನೆ ತಿಳಿದ ತಕ್ಷಣ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಾಯಕ್ಕ ಮೇಟಿ ಹಾಗೂ ಎಸ್ಪಿ ಲೋಕೇಶ್ ಜಗಲಾಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇತ್ತ ಕಿರಸೂರು ಗ್ರಾಮದಲ್ಲಿ ಹೆಚ್ಚಿನದಾಗಿ ಮಣ್ಣಿನ ಮನೆಗಳೆ ಇರುವುದರಿಂದ ತುಂತುರು ಮಳೆಗೆ ಮಣ್ಣಿನ ಮನೆಗಳು ಬೀಳುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.

ಸಾವನ್ನಪ್ಪಿರುವ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷದಂತೆ ಒಟ್ಟು ಹದಿನೈದು ಲಕ್ಷ ರೂ. ಪರಿಹಾರ ದೊರಕಿಸುವುದಾಗಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ. ಸದ್ಯ ಮೂವರ ಅಂತಿಮ ಸಂಸ್ಕಾರಕ್ಕೆ 15 ಸಾವಿರ ರೂಪಾಯಿ ನೀಡಲಾಗುವುದು. ಇನ್ನು ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿರುವ ತಾಯಿ-ಮಗುವಿನ ತಾತ್ಕಾಲಿಕ ಆಶ್ರಯ ಒದಗಿಸಲಾಗುವುದು. ಜೊತೆಗೆ ಅವರ ಜೀವನ ನೀರ್ವಹಣೆಗೆ ದವಸ ಧಾನ್ಯದ ವ್ಯವಸ್ಥೆಗೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗುವುದು ಎಂದರು.

Intro:AnchorBody:
ನಿರಂತರ ಮಳೆಯಿಂದಾಗಿ ತಡರಾತ್ರಿ ಮನೆಯ ಮಾಳಿಗೆ ಕುಸಿದು ಬಿದ್ದು ಮೂವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ.
ಜಿಟಿಜಿಟಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯಲ್ಲಿ ಮಲಗಿದ್ದವರ ಮೇಲೆ ಮನೆಯ ಮಾಳಿಗೆ ಕುಸಿದು ಬಿದ್ದಿದೆ. ಇದರಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದಲ್ಲಿನ ಐವರು ಸದಸ್ಯರು ಮನೆಯಲ್ಲಿ ಮಲಗಿದ್ದಾಗ ತಡರಾತ್ರಿ ಎರಡು ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಐವರ ಪೈಕಿ ಮೂವರು ಸಾವನ್ನಪ್ಪಿದ್ದು ಮೃತಪಟ್ಟವರನ್ನ ತಂದೆ ಈರಪ್ಪ ಹಡಪದ (೬೦), ತಾಯಿ ಗೌರವ್ವ(೫೩), ಮಗ ನಿಂಗಪ್ಪ(೩೨)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅದೃಷ್ಠವಶಾತ್ ನಿಂಗಪ್ಪನ‌ ಪತ್ನಿ ಸವಿತಾ ಹಾಗೂ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸರು ಹಾಗೂ ಸ್ಥಳೀಯರ ನೆರವಿನೊಂದಿಗೆ ಅಗ್ನಿ ಶಾಮಕ ಸಿಬ್ಬಂದಿ ಸತತ ಆರು ಗಂಟೆಗಳ ಕಾರ್ಯಾಚರಣೆಯಿಂದ ಮನೆಯ ಅವಶೇಷಗಳ ಅಡಿ ಸಿಲುಕಿದ್ದ ಮೂವರ ಶವಗಳನ್ನ ಹೊರತೆಗೆದಿದ್ದಾರೆ.
ಇನ್ನು ಘಟನೆ ತಿಳಿದ ತಕ್ಷಣ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಾಯಕ್ಕ ಮೇಟಿ ಹಾಗೂ ಎಸ್ಪಿ ಲೋಕೇಶ್ ಜಗಲಾಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು. ಇತ್ತ ಕಿರಸೂರು ಗ್ರಾಮದಲ್ಲಿ ಹೆಚ್ಚಿನದಾಗಿ ಮಣ್ಣಿನ ಮನೆಗಳೆ ಇರುವುದರಿಂದ ಜಿಟಿಜಿಟಿ ಮಳೆ ಆಗುತ್ತಿರುವ ಕಾರಣ ಮಣ್ಣಿನ ಮನೆಗಳು ಬೀಳುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.
ಸಾವನ್ನಪ್ಪಿರುವ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ ಐದು ಲಕ್ಷದಂತೆ ಒಟ್ಟು ಹದಿನೈದು ಲಕ್ಷ ರೂ. ಪರಿಹಾರ ದೊರಕಿಸುವುದಾಗಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ರು. ಸದ್ಯ ಮೂವರ ಅಂತಿಮ ಸಂಸ್ಕಾರಕ್ಕೆ ಹದಿನೈದು ಸಾವಿರ ರೂಪಾಯಿ ನೀಡಲಾಗುವುದು. ಇನ್ನು ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿರುವ ತಾಯಿ-ಮಗುವಿನ ತಾತ್ಕಾಲಿಕ ಆಶ್ರಯ ಒಗಿಸಲಾಗುವುದು. ಜೊತಗೆ ಅವರ ಜೀವನ ನೀರ್ವಹಣೆಗೆ ದವಸ ಧಾನ್ಯದ ವ್ಯವಸ್ಥೆಗೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗುವುದು ಎಂದರು.
ಬೈಟ್-ವೀರಣ್ಣ ಚರಂತಿಮಠ(ಶಾಸಕರು)Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Oct 6, 2019, 11:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.