ETV Bharat / state

ಎಂಇಎಸ್ ಸಂಘಟನೆ ಬ್ಯಾನ್ ಮಾಡಲೇಬೇಕು : ನಟ ಪ್ರೇಮ್​ - ಎಂಇಎಸ್ ಸಂಘಟನೆ ಬಗ್ಗೆ ಮಾತನಾಡಿದ ಚಿತ್ರನಟ ಪ್ರೇಮ್​

ನಾವು ಮನಸ್ಸು ಮಾಡಿದ್ರೆ ನೂರು ಶಿವಾಜಿ ಮಹಾರಾಜರ ಪ್ರತಿಮೆ ಒಡೆಯಬಹುದು. ಎಂಇಎಸ್ ಮಾಡಿದ ಕಚಡಾ ಕೆಲಸ ಕನ್ನಡಿಗರು ಮಾಡಲ್ಲ. ಶಿವಾಜಿ ಮಹಾರಾಜರನ್ನ ಪೂಜ್ಯ ಸ್ಥಾನದಲ್ಲಿಟ್ಟು ನಾವು ಗೌರವಿಸುತ್ತೇವೆ ಎಂದು ನಟ ಪ್ರೇಮ್​ ಹೇಳಿದರು..

Actor Prem spoke about MES organization
ನಟ ಪ್ರೇಮ್​
author img

By

Published : Dec 19, 2021, 7:32 PM IST

ಬಾಗಲಕೋಟೆ : ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಮಾಡಲೇಬೇಕು ಎಂದು ಚಿತ್ರ ನಟ ಪ್ರೇಮ್ ಒತ್ತಾಯಿಸಿದ್ದಾರೆ. ಪ್ರೇಮಂ ಪೂಜ್ಯಂ ಚಿತ್ರ ಪ್ರಮೋಟ್ ಮಾಡಲು ಬಾಗಲಕೋಟೆ ನಗರದ ವಾಸವಿ ಚಿತ್ರಮಂದಿರಕ್ಕೆ ಬಂದಾಗ ಈ ಬಗ್ಗೆ ಅವರು ಮಾತನಾಡಿದರು.

ಎಂಇಎಸ್‌ನಿಂದ ಕನ್ನಡಿಗರಿಗಷ್ಟೇ ಅಲ್ಲ, ಅಲ್ಲಿನ ಮರಾಠಿಗರಿಗೂ ತೊಂದರೆ ಆಗುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿ ಮೇಲೆ ದಾಳಿ,ಕನ್ನಡಿಗರ ಮೇಲೆ ಹಲ್ಲೆ ಸರಿಯಾದುದ್ದಲ್ಲ. ಎಂಇಎಸ್‌ನ ಪುಂಡಾಟಿಕೆ ಯಾರು ಸಹಿಸಲ್ಲ.

ಏನು ಮಾಡಿದ್ರೂ ಕನ್ನಡಿಗರು ಸುಮ್ನೇ ಇರುತ್ತಾರೆ ಅಂತಾ ತಿಳಿಯಬೇಡಿ ಎಂದು ಕಿಡಿಕಾರಿದ ಪ್ರೇಮ್,ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಂತಾ ಹೋರಾಟದ ಹಾದಿ ನಾವು ಹಿಡಿದಿಲ್ಲ. ರಾಯಣ್ಣನ ಪ್ರತಿಮೆ ಒಡೆದು ಹಾಕಿದ್ದು ಸರಿಯಲ್ಲ.

ನಾವು ಮನಸ್ಸು ಮಾಡಿದ್ರೆ ನೂರು ಶಿವಾಜಿ ಮಹಾರಾಜರ ಪ್ರತಿಮೆ ಒಡೆಯಬಹುದು ಎಂದು ಹರಿಹಾಯ್ದರು. ಎಂಇಎಸ್ ಮಾಡಿದ ಕಚಡಾ ಕೆಲಸ ಕನ್ನಡಿಗರು ಮಾಡಲ್ಲ. ಶಿವಾಜಿ ಮಹಾರಾಜರನ್ನ ಪೂಜ್ಯ ಸ್ಥಾನದಲ್ಲಿಟ್ಟು ನಾವು ಗೌರವಿಸುತ್ತೇವೆ ಹಾಗೆ ರಾಯಣ್ಣನನ್ನು ನೀವು ಗೌರವಿಸಬೇಕು ಎಂದು ತಿಳಿಸಿದ ಪ್ರೇಮ್,ಇವರಿಬ್ಬರು ಸ್ವಾತಂತ್ರ್ಯ ಹೋರಾಟ ಮಾಡಿದವರು.

ನಾವೆಲ್ಲ ಒಂದೇ,ನಮ್ಮ ನಮ್ಮಲ್ಲಿ ಇಂತಹ ಕಲಹ ಸರಿಯಲ್ಲ. ಎರಡು ರಾಜ್ಯ ಸರ್ಕಾರಗಳು ಎಂಇಎಸ್ ಸಂಘಟನೆಗೆ ಬೈದು ಬುದ್ದಿ ಹೇಳಿ. ಎಂಇಎಸ್ ಸಂಘಟನೆಯನ್ನು ಸರ್ಕಾರಗಳೇ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ.. ತವರೂರಲ್ಲಿ ಸಿಎಂ ಬೊಮ್ಮಾಯಿ ಭಾವುಕ..

ಬೆಳಗಾವಿ ಭಾಗದ ಶಾಸಕರು ಪುಂಡಾಟಿಕೆ ಬಗ್ಗೆ ಮಾತನಾಡ್ತಿಲ್ಲ. ಇದು ಎರಡು ರಾಜ್ಯಗಳ ಸಿಎಂಗಳು ಕುರಿತು ಮುಕ್ತವಾಗಿ ಚರ್ಚೆ ಮಾಡಿದ್ರೆ ಕ್ರಮ ವಹಿಸಲು ಸಾಧ್ಯ. ಬೆಳಗಾವಿ ಭಾಗದ ಶಾಸಕರು ಬಾಯಿ ಬಿಡುತ್ತಿಲ್ಲ. ಆದರೆ, ಈ ಸಂಬಂಧ ಸಿಎಂ ಕರೆದಾಗ ಬಂದೇ ಬರ್ತಾರೆ ಎಂದು ತಿಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.