ETV Bharat / state

ತೃತೀಯ ಲಿಂಗಿಗಳಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ : ಸರ್ಕಾರಕ್ಕೆ ನಟ ಚೇತನ್​ ಒತ್ತಾಯ

author img

By ETV Bharat Karnataka Team

Published : Aug 26, 2023, 7:30 PM IST

ಸರ್ಕಾರವು ತೃತೀಯ ಲಿಂಗಿಗಳಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಅನುದಾನ ಒದಗಿಸಬೇಕು ಎಂದು ನಟ ಚೇತನ್ ಒತ್ತಾಯಿಸಿದ್ದಾರೆ.

actor-chetan-urges-the-government-to-separate-board-for-transgenders
ನಟ ಚೇತನ್​
ತೃತೀಯ ಲಿಂಗಿಗಳಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ : ಸರ್ಕಾರಕ್ಕೆ ನಟ ಚೇತನ್​ ಒತ್ತಾಯ

ಬಾಗಲಕೋಟೆ : ನವ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸು ಮಾಡಿದಾಗ ಮಾತ್ರ ಭಾರತ ಸಮಗ್ರ ಅಭಿವೃದ್ಧಿ ಹೊಂದುತ್ತದೆ. ಮುಖ್ಯವಾಗಿ ತೃತೀಯ ಲಿಂಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಈ ಸಂಬಂಧ ಸರ್ಕಾರ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಅನುದಾನ ಒದಗಿಸಬೇಕು ಎಂದು ನಟ ಚೇತನ್ ಒತ್ತಾಯಿಸಿದರು.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15 ಜಿಲ್ಲೆಗಳಲ್ಲಿ ಜೋಗಪ್ಪ ಜನಾಂಗವಿದೆ. ಇವರು ಕಲಾವಿದರು. ಪಾರಂಪರಿಕ ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇವರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಸವದತ್ತಿಯಲ್ಲಿ ಪ್ರತ್ಯೇಕ ಭವನ ನಿರ್ಮಿಸಬೇಕು ಎಂದು ಹೇಳಿದರು. ಜೊತೆಗೆ ಮಂಗಳ ಮುಖಿಯರನ್ನು ಕಲಾವಿದರೆಂದು ಗುರುತಿಸಬೇಕು. ಈ ಸಮುದಾಯಕ್ಕೆ ಆರ್ಥಿಕ ಬಲ ಇಲ್ಲದಂತಾಗಿದ್ದು, ಈ ನಿಟ್ಟಿನಲ್ಲಿ ಅವರಿಗೂ ಶಕ್ತಿ, ಗೃಹಲಕ್ಷ್ಮೀ ಯೋಜನೆಗಳ ಅನುಕೂಲ ಸಿಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪಠ್ಯಕ್ರಮ ಪರಿಷ್ಕರಣೆ ಬಗ್ಗೆ ಮಾತನಾಡಿ, ಪಠ್ಯ ಪರಿಷ್ಕರಣೆ ಪಕ್ಷಕ್ಕೆ ತಕ್ಕಂತೆ ನಡೆಯುತ್ತಿದೆ. ಬಿಜೆಪಿಯವರು ಅವರಿಗೆ ಬೇಕಾದ ರೀತಿಯಲ್ಲಿ ಪಠ್ಯ ಪರಿಷ್ಕರಣೆ ಮಾಡಿದರು. ಕಾಂಗ್ರೆಸ್​ನವರು ತಮಗೆ ಬೇಕಾದ ವ್ಯಕ್ತಿಗಳ ಪಠ್ಯವನ್ನು ಹಾಕುತ್ತಿದ್ದಾರೆ. ಈ ರೀತಿ ಮಾಡುವುದಕ್ಕಿಂತ ಜೋಗಪ್ಪ ಅವರ ಪಠ್ಯವನ್ನು ಅಳವಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.

ನಟ ಪ್ರಕಾಶ್​ ರೈ ಟ್ವೀಟ್​ ಬಗ್ಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಪ್ರತಿಯೊಬ್ಬರಿಗೂ ಅವಕಾಶ ಇದೆ. ಪ್ರಕಾಶ್​ ರೈ ಅವರು ಯಾವ ಅರ್ಥದಲ್ಲಿ ಟ್ವೀಟ್​ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದರು. ಇಸ್ರೋ ವಿಜ್ಞಾನಿಗಳ ಸಾಧನೆ ಮೆಚ್ಚುವಂತದ್ದು. ವಿಜ್ಞಾನಿಗಳು ವೈಜ್ಞಾನಿಕವಾಗಿ ಇರಬೇಕು. ತಮ್ಮ ಕೆಲಸದ ಮೇಲೆ ಅವರಿಗೆ ನಂಬಿಕೆ ಇರಬೇಕು. ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಬಳಿ ತೆರಳಿ ಪೂಜೆ ಸಲ್ಲಿಸಿದರು. ವಿಜ್ಞಾನದಲ್ಲಿ ಅವೈಜ್ಞಾನಿಕತೆ ಇರಬಾರದು ಎಂದು ಚೇತನ್​ ಅಭಿಪ್ರಾಯಪಟ್ಟರು.

ತೃತೀಯ ಲಿಂಗಿ ರವಿ ಎಂಬುವವರು ಮಾತನಾಡಿ, ನಮ್ಮ ಸಮುದಾಯದವರಿಗೆ ಚೌಡಕಿ ಪದ, ಹಾಡುಗಾರಿಕೆಯೇ ಕಲೆಯಾಗಿದೆ. ಎಲ್ಲೋ ಮಲಗಿ, ಎಲ್ಲೋ ಬದುಕುತ್ತಿದ್ದೇವೆ. ಸವದತ್ತಿಯಲ್ಲಿ ನಮ್ಮ ಸಮುದಾಯದವರಿಗೆ ಪ್ರತ್ಯೇಕ ಭವನ ನಿರ್ಮಿಸಬೇಕು. ಮನೆ ನಿರ್ಮಾಣಕ್ಕೆ 5 ಲಕ್ಷ ಸಬ್ಸಿಡಿ ನೀಡಬೇಕು. ನಿಗಮಗಳಿಗೆ ಅನುದಾನ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆಗೆ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.