ETV Bharat / state

ಕೊಠಡಿಯಲ್ಲಿ ಕೂಡಿಹಾಕಿ ಮಹಿಳೆಯರ ಮತಾಂತರ ಆರೋಪ, ಯುವಕರಿಂದ ಥಳಿತ - Accused of conversion to Christianity

ವಿವಿಧ ರೀತಿಯ ಆಮಿಷ ತೋರಿಸಿ ಮಹಿಳೆಯರನ್ನು ಕೊಠಡಿಯಲ್ಲಿ ಕೂಡಿಹಾಕಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಯುವಕರು ಥಳಿಸಿದ್ದಾರೆ.

ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರ
author img

By

Published : Nov 3, 2019, 7:57 PM IST

ಬಾಗಲಕೋಟೆ: ಮಹಿಳೆಯರನ್ನು ಕೊಠಡಿಯಲ್ಲಿ ಕೂಡಿಹಾಕಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಯುವಕರು ಥಳಿಸಿರುವ ಘಟನೆ ನಡೆದಿದೆ.

ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 31ರಲ್ಲಿ ಈ ಘಟನೆ ನಡೆದಿದೆ.

ಡಿಆರ್ ಪೊಲೀಸ್ ಪೇದೆ ತುಕಾರಾಂ ರಾಠೋಡ ಎಂಬಾತ ಅಮಾಯಕ ಮಹಿಳೆಯರಿಗೆ ಪ್ರಾರ್ಥನೆ ಮಾಡುವಂತೆ ತಿಳಿಸುವ ಜೊತೆಗೆ ಏಸುವಿನ ಬಗ್ಗೆ ಮಾಹಿತಿ ನೀಡುತ್ತಾ ಮತಾಂತರಗೊಳಿಸಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಮತಾಂತರ ಆರೋಪ, ವ್ಯಕ್ತಿಗೆ ಥಳಿತ

ಸುದ್ದಿ ತಿಳಿದ ಬಂಜಾರಾ ಸಮಾಜದ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಹೂವಪ್ಪ ರಾಠೋಡ ಹಾಗೂ ಹಿಂದೂಪರ ಸಂಘಟನೆ ಮುಖಂಡರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಥಳಿಸಿ ಆಕ್ರೋಶ ವ್ಯಕ್ತಪಡಿಸಿದ್ರು.

ನವನಗರ ಪೊಲೀಸರು ಸುರಕ್ಷತೆ ದೃಷ್ಟಿಯಿಂದ ಮತಾಂತರ ಮಾಡ್ತಿದ್ದವರನ್ನು ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ, ಮತಾಂತರಗೊಳಿಸಲು ಮುಂದಾದ ಜನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪರಿಶೀಲನೆ‌ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ಕೊಟ್ಟರು.

Intro:AnchorBody:ವಿವಿಧ ರೀತಿಯಿಂದ ಆಸೆ, ಆಮೀಷ ತೋರಿಸಿ ಮಹಿಳೆಯರನ್ನು ರೂಮ್ ನಲ್ಲಿ ಕೂಡಿ ಹಾಕಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಬಂಜಾರಾ ಹಾಗೂ ಹಿಂದೂ ಸಂಘಟನೆ ಯುವಕರು ಥಳಿಸಿರುವ ಘಟನೆ ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ ೩೧ ರಲ್ಲಿ ನಡೆದಿದೆ. ಸೆಕ್ಟರ್ ನಂಬರ್ ೩೧ ರಲ್ಲಿ ಡಿಆರ್ ಪೊಲೀಸ್ ಪೇದೆ ಆಗಿರುವ ತುಕಾರಾಮ್ ರಾಠೋಡ ಎಂಬಾತ ಅಮಾಯಕ ಮಹಿಳೆಯರಿಗೆ ಪ್ರಾರ್ಥನೆ ಮಾಡುವಂತೆ ತಿಳಿಸುವ ಜೊತೆಗೆ ಏಸು ವಿನ ಬಗ್ಗೆ ಮಾಹಿತಿ ನೀಡುತ್ತಾ, ಮತಾಂತರ ಮಾಡಲು ಮುಂದಾಗಿದ್ದನು ಎಂದು ಅರೋಪಿಸಿ,ಧರ್ಮದೇಟು ನೀಡಿದ್ದಾರೆ. ಸುದ್ದಿ ತಿಳಿದ ಬಂಜಾರಾ ಸಮಾಜದ ಮುಖಂಡ ಹಾಗೂ ಜಿ.ಪಂ ಸದಸ್ಯರಾದ ಹೂವಪ್ಪ ರಾಥೋಡ ಹಾಗೂ ಹಿಂದೂಪರ ಸಂಘಟನೆ ಮುಖಂಡರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸುದ್ದಿ ತಿಳಿದ ನವನಗರ ಪೊಲೀಸರು ಸುರಕ್ಷತೆ ದೃಷ್ಟಿಯಿಂದ ಮತಾಂತರ ಮಾಡ್ತಿದ್ದ ಆರೋಪಿಗಳನ್ನು ಕಳುಹಿಸಿಕೊಟ್ರು. ಅಲ್ದೇ ಮತಾಂತರ ಮಾಡಲು ಮುಂದಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಸ್ಥಳದಲ್ಲಿದ್ದ ಪೊಲೀಸರಿಗೆ ಒತ್ತಾಯ ಮಾಡಿದರು.ಈ ಬಗ್ಗೆ ಪರಿಶೀಲನೆ‌ ನಡೆಸಿ ಸೂಕ್ತ ಕ್ರಮ ತೆಗೆದುಕೊಳುವುದಾಗಿ ಪೋಲಿಸರು ಭರವಸೆ ನೀಡಿದ್ದಾರೆ.Conclusion:ಈ ಟಿ‌ವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.