ಬಾಗಲಕೋಟೆ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಅವರ ಮನೆ, ಕಚೇರಿ, ಗ್ಯಾಸ್ ಎಜೆನ್ಸಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಸಿಸ್ಟೆಂಟ್ ಇಂಜಿನಿಯರ್ ಅಶೋಕ ತೋಪಲಕಟ್ಟಿ ಅವರ ವಿದ್ಯಾಗಿರಿಯ 8ನೇ ಕ್ರಾಸ್‌ನಲ್ಲಿರುವ ಮನೆ, ಇದೇ ಪ್ರದೇಶದ 17ನೇ ಕ್ರಾಸ್‌ನಲ್ಲಿ ಅವರಿಗೆ ಸೇರಿದ ಗ್ಯಾಸ್ ಎಜೆನ್ಸಿ ಹಾಗು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಚೇರಿ ಮೇಲೆ ಏಕಕಾಲಕ್ಕೆ ಮೂರು ಕಡೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಎಸಿಬಿ ಡಿವೈಎಸ್‌ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಬಾಗಲಕೋಟೆ ಎಸಿಬಿ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ, ಧಾರವಾಡ ಎಸಿಬಿ ಇನ್ಸ್ಪೆಕ್ಟರ್ ಬಿ.ಎ.ಜಾದವ್ ಹಾಗು ಸಿಬ್ಬಂದಿ ಸೇರಿ ಒಟ್ಟು 20 ಜನರ ತಂಡ ಕಾರ್ಯಾಚರಣೆಯಲ್ಲಿದ್ದಾರೆ.