ETV Bharat / state

ಬಡತನದ ಮಧ್ಯೆಯೂ ಫಸ್ಟ್​ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ: ಸಹಾಯಕ್ಕಾಗಿ ಸರ್ಕಾರಕ್ಕೆ ಮೊರೆ - ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡ ವಿದ್ಯಾರ್ಥಿನಿ

ಗ್ಯಾರೇಜ್​ನಲ್ಲಿ ಕೆಲಸ ಮಾಡಿ ಮಗಳು ಉನ್ನತ ಶಿಕ್ಷಣ ಪಡೆಯಲಿ ಎಂದು ಆಸೆ ಪಡುತ್ತಿರುವ ತಂದೆ ಹೆಸರು ರಫೀಕ್​ ಲೋಕಾಪೂರ. ವೃತ್ತಿಯಿಂದ ಮೆಕಾನಿಕ್ ಆಗಿರೋ ಇವರು ಬಡತನದ ಮಧ್ಯೆ ಜೀವನ ಕಳೆದ್ರೂ ತನ್ನ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಗಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇದೀಗ ಪ್ರಥಮ ರ‍್ಯಾಂಕ್​ ಪಡೆದಿರುವ ಮಗಳು ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.

ಬಡತನದ ಮಧ್ಯೆಯೂ ಯಶಸ್ಸು ಗಳಿಸಿದ ವಿದ್ಯಾರ್ಥಿನಿ

author img

By

Published : May 1, 2022, 7:28 PM IST

Updated : May 1, 2022, 7:40 PM IST

ಬಾಗಲಕೋಟೆ: ಬಡತನದ ಮಧ್ಯೆಯೂ ಬದುಕು ಸಾಗಿಸುತ್ತ ತನ್ನ ಮೂವರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಪರಿಣಾಮ ಓರ್ವ ಮಗಳು ಈಗ ಎಂಎ ಪದವಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ತಂದೆಯ ಸಂಕಷ್ಟದ ದಿನಗಳಲ್ಲಿಯೇ ಓದಿದ ಮಗಳು ರುಬಿನಾ ಇದೀಗ ಫಸ್ಟ್​ ರ‍್ಯಾಂಕ್​ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ. ಈ ಮೂಲಕ ಮುಂದಿನ ಶಿಕ್ಷಣಕ್ಕಾಗಿ ಸರ್ಕಾರದಿಂದ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾಳೆ.

ಬಡತನದ ಮಧ್ಯೆಯೂ ಫಸ್ಟ್​ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ: ಸಹಾಯಕ್ಕಾಗಿ ಸರ್ಕಾರಕ್ಕೆ ಮೊರೆ

ಗ್ಯಾರೇಜ್​ನಲ್ಲಿ ಕೆಲಸ ಮಾಡಿ ಮಗಳ ಉನ್ನತ ಶಿಕ್ಷಣ ಪಡೆಯಲಿ ಎಂದು ಆಸೆ ಪಡುತ್ತಿರುವ ತಂದೆ ಹೆಸರು ರಫೀಕ್​ ಲೋಕಾಪೂರ. ವೃತ್ತಿಯಿಂದ ಮೆಕಾನಿಕ್ ಆಗಿರೋ ಇವರು ಬಡತನದ ಮಧ್ಯೆ ಜೀವನ ಕಳೆದ್ರೂ ತನ್ನ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಗಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಎರಡನೇ ಮಗಳು ರುಬಿನಾ ರಾಣಿ ಚೆನ್ನಮ್ಮ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರದ ಅರ್ಥಶಾಸ್ತ್ರ ವಿಭಾಗದಲ್ಲಿ ಫಸ್ಟ್​ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಪ್ರಾಧ್ಯಾಪಕನ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ರುಬಿನಾ ಒಳ್ಳೆಯ ನೌಕರಿ ಪಡೆದು ಇತರರಿಗೆ ಸಹಾಯ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದಾರಂತೆ. ಇದೀಗ ಐಎಎಸ್​, ಪಿಹೆಚ್​ಡಿ ಮಾಡಬೇಕೆಂಬ ಹಂಬಲವಿದೆ. ಹೀಗಾಗಿ ಸರ್ಕಾರ ಉಚಿತ ಕೋಚಿಂಗ್ ನೀಡುವುದರ ಜೊತೆಗೆ ಮುಂದಿನ ಶಿಕ್ಷಣಕ್ಕೆ ನೆರವಾಗಬೇಕೆಂದು ರುಬಿನಾ ಈ ಮೂಲಕ ಮನವಿ ಮಾಡಿದ್ದಾರೆ.

Last Updated : May 1, 2022, 7:40 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.