ETV Bharat / state

ಗಂಗೂಬಾಯಿ ವರ್ಸಸ್‌ ಗಂಗೂಬಾಯಿ.. ಜಿಲ್ಲಾ ಪಂಚಾಯತ್‌ನಲ್ಲೇನಿದು ಮುಸುಕಿನ ಗುದ್ದಾಟ.. ? - gangubayi meti

ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಸಿಇಒ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಗಂಗೂಬಾಯಿ ( ಬಾಯಕ್ಕ) ಮೇಟಿ ಹಾಗೂ ಗಂಗೂಬಾಯಿ ಮಾನಕರ್
author img

By

Published : Oct 5, 2019, 6:09 PM IST

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸಿಇಒ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಂಗೂಬಾಯಿ(ಬಾಯಕ್ಕ) ಮೇಟಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಗಂಗೂಬಾಯಿ ಮೇಟಿ ಅವರು, ಸಿಇಒ ವರ್ಗಾವಣೆ ಸಂಬಂಧ ಬಿಜೆಪಿ ಪಕ್ಷದವರ ಜೊತೆಗೆ ಕೈ ಜೋಡಿಸಿದ್ದಾರಂತೆ. ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲೆಗೆ ಆಗಮಿಸಿದ ವೇಳೆ ದೂರು ನೀಡಿದ್ದಾರೆ. ಇದರಿಂದ ಕಸಿವಿಸಿಗೊಂಡ ಸಿಇಒ ಮೌನಕ್ಕೆ ಶರಣಾಗಿದ್ದಾರೆ.

ಸಿಇಒ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾವುದೇ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ, ತಮ್ಮ ಸವಾರ್ಧಿಕಾರಿ ಧೋರಣೆಯಿಂದ ಕೆಲಸ ಮಾಡುತ್ತಿದ್ದು, ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು ಆರೋಪಿಸಿ ಸಿಎಂಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಸಿಇಒ ಗಂಗೂಬಾಯಿ ಮಾನಕರ್ ಪ್ರತಿಕ್ರಿಯಿಸಿ, ಈ ಎಲ್ಲಾ ಆರೋಪಗಳು ಸುಳ್ಳು. ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ನಡೆಯುತ್ತಿವೆ. ಮಗಳ ಶಿಕ್ಷಣ ಸಲುವಾಗಿ ಕೆಎಟಿ ಮೂಲಕ ವರ್ಗಾವಣೆ ಆದೇಶವನ್ನು ತಡೆಹಿಡಿಸಲಾಗಿದೆ ಎಂದು ತಿಳಿಸಿದ್ದಾರೆ. ಮಹಿಳೆಯರಿಗೆ ಮಹಿಳೆಯರೇ ಶತ್ರು ಎನ್ನುವ ರೀತಿ ಇಬ್ಬರು ಗಂಗೂಬಾಯಿಗಳ ನಡುವೆ ಉಂಟಾಗಿರುವ ಈ ಶೀತಲ ಸಮರದಲ್ಲಿ ಯಾರಿಗೆ ಗೆಲುವು, ಯಾರಿಗೆ ಸೋಲು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

Intro:AnchorBody:ಬಾಗಲಕೋಟೆ--ಜಿಲ್ಲಾ ಪಂಚಾಯತ್ ದಲ್ಲಿ ಗಂಗೂಬಾಯಿ v/s ಗಂಗೂಬಾಯಿ ಮಧ್ಯೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದ್ದು,ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಂಗೂಬಾಯಿ( ಬಾಯಕ್ಕ) ಮೇಟಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ವರ್ಗಾವಣೆ ಸಂಭಂದ ಪ್ರತಿಷ್ಟೆಯ ರಣಕಣವಾಗಿ ಮಾರ್ಪಟ್ಟಿದೆ.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷೆ ಆಗಿರುವ ಗಂಗೂಬಾಯಿ ಮೇಟಿ,ಸಿಇಓ ವರ್ಗಾವಣೆ ಸಂಭಂದ ಬಿಜೆಪಿ ಪಕ್ಷದವರ ಜೊತೆಗೆ ಕೈಜೋಡಿಸಿರುವುದು ಹುಬ್ವೇರಿಸುವಂತಾಗಿ,ಕಾಂಗ್ರೆಸ್, ಬಿಜೆಪಿ ಪಕ್ಷದ ಸದಸ್ಯರು ಪಕ್ಷಪಾತ ಇಲ್ಲದೇ ಇಬ್ಬರೂ ಸೇರಿಕೊಂಡು ಸಿಒಇ ಗೂ ವರ್ಗಾವಣೆ ಮಾಡಿಸುವುದೇ ಅಜೆಂಡಾ ಹಾಕಿಕೊಂಡಿದ್ದಾರೆ.ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ಜಿಲ್ಲೆಗೆ ಆಗಮಿಸಿದ ಸಮಯದಲ್ಲಿ ಸಿಇಓ ಮುಂದೆ ಸಿಎಂ ಗೆ ದೂರು ನೀಡಿದ್ದಾರೆ.ಇದರಿಂದ ಕಸಿವಿಸಿಗೊಂಡು ಸಿಇಓ ಮೌನಕ್ಕೆ ಶರಣಾಗಿದ್ದಾರೆ.
ಆಲಮಟ್ಟಿ ಯಲ್ಲಿ ಕೃಷ್ಣ ನದಿಗೆ ಬಾಗಿನ ಅರ್ಪಣೆ ಸಮಯದಲ್ಲಿ ಯೂ ಜಿ.ಪಂ ಅಧ್ಯಕ್ಷೆ ಗಂಗೂಬಾಯಿ ಮೇಟಿ ಮತ್ತೆ ಸಿಇಓ ಗಂಗೂಬಾಯಿ ಮಾನಕರ್ ವಿರುದ್ದ ಗಮನಕ್ಕೆ ಏನಾದರೂ ಮಾಡಿ ವರ್ಗಾವಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.ಸಿಇಓ ಸರಿಯಾದ ಕೆಲಸ ಮಾಡಲ್ಲ,ಯಾವುದೇ ಕಾಮಗಾರಿಗೂ ಹಣ ಬಿಡುಗಡೆ ಮಾಡಿಲ್ಲ, ತಮ್ಮ ಸವಾರ್ಧಿಕಾರಿ ಧೋರಣೆ ಯಿಂದ ಕೆಲಸ ಮಾಡುತ್ತಾ,ಭ್ರಷ್ಟಾಚಾರ ಮಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು, ಆರೋಪಿಸಿ ಸಿಎಂ ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಆದರೆ ಈ ಬಗ್ಗೆ ಸಿಇಓ ಆರೋಪ ಎಲ್ಲಾ ಸುಳ್ಳಾಗಿದ್ದು,ಕೆಲಸ ಕಾಮಗಾರಿಗಳು ಸರಿಯಾಗಿ ಪರಿಶೀಲನೆ ನಡೆಸಿದರೆ,ಸದಸ್ಯರ ಆಕ್ರೋಶ ಕ್ಕೆ ಕಾರಣವಾಗಿದೆ.ನಮ್ಮ ಮಗಳ ಶಿಕ್ಷಣ ಸಲುವಾಗಿ ಕೆಎಟಿ ಮೂಲಕ ವರ್ಗಾವಣೆ ಆದೇಶವನ್ನು ತಡೆಹಿಡಿಸಲಾಗಿದೆ ಎಂದು ಸಿಇಓ ತಿಳುತ್ತಾರೆ.
ಸಿಇಓ ಕೆಎಟಿ ಮೂಲಕ ಆದೇಶ ತಡೆಹಿಡಿದ ಮುನ್ನಾ ದಿನವೇ ಜಿಲ್ಲಾಧಿಕಾರಿ ಆಗಿದ್ದ ಆರ್, ರಾಮಚಂದ್ರನ್ ಅವರಿಗೆ ವರ್ಗಾವಣೆ ಆಯಿತು. ಆದರೆ ಕೇವಲ ಆರು ತಿಂಗಳ ಹಿಂದೆ ಬಂದಿರುವ ಜಿಲ್ಲಾಧಿಕಾರಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ನೇರವಾಗಿ ಅಧಿಕಾರ ಹಸ್ತಾಂತರ ಮಾಡಿ ಹೋದರು.ಆದರೆ ಸಿಇಓ ಮಾತ್ರ ಹಟಕ್ಕೆ ಬಿದ್ದಂತೆ ಸಚಿವರಿಗೆ,ಶಾಸಕರಿಗೆ,ಜಿ.ಪಂ ಸದಸ್ಯರ ವಿರುದ್ಧ ತೊಡೆ ತೊಟ್ಟಿದ್ದಾರೆ.ಇದ್ದಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಗಂಗೂಬಾಯಿ ಮೇಟಿ ಹಾಗೂ ಸದಸ್ಯರು ಕೈ ಜೋಡಿಸಿದ್ದಾರೆ.ಇನ್ನೂ ಸಿಇಓ ಗಂಗೂಬಾಯಿ ಇಷ್ಟೇಲ್ಲಾ ವಿರೋಧ ಮಧ್ಯೆಯು ಇಲ್ಲೇ ಉಳಿದರೆ,ಜನಪ್ರತಿನಿಧಿಗಳ ಸಹಾಯ,ಸರಕಾರ ಇಲ್ಲದೆ ಕೆಲಸ ಕಾರ್ಯಗಳು ಹೇಗೆ ನಡೆಯಲಿದೆ ಎಂಬುದೇ ಜನತೆಯಲ್ಲಿ ಚಿಂತೆ ಕಾಡುತ್ತಿದೆ.
ಒಟ್ಟಿನಲ್ಲಿ ಮಹಿಳೆಯರಿಗೆ, ಮಹಿಳೆಯರೇ ಶತ್ರು ಎನ್ನುವ ರೀತಿಯಲ್ಲಿ ಇಬ್ಬರು ಗಂಗೂಬಾಯಿ ವಿರುದ್ದ ಶೀತಲ ಸಮರ ನಡೆದಿದೆ.ಇದು ಯಾರಿಗೆ ಗೆಲವು,ಯಾರಿಗೆ ಸೋಲು ಎಂಬುದು ಚರ್ಚೆಯ ವಿಷಯವಾಗಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.