ಬಾಗಲಕೋಟೆ : ಜಿಲ್ಲೆಯಲ್ಲಿ 80 ಜನ ಕೋವಿಡ್ನಿಂದ ಗುಣಮುಖರಾಗಿದ್ದು, ಹೊಸದಾಗಿ 57 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 11, ಬದಾಮಿ 11, ಹುನಗುಂದ 5, ಬೀಳಗಿ 1, ಮುಧೋಳ 2, ಜಮಖಂಡಿ 21, ಬೇರೆ ಜಿಲ್ಲೆಯ 6 ಜನರಿಗೆ ಕೋವಿಡ್ ತಗುಲಿದೆ. ಹೊಸದಾಗಿ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ 34 ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದ ದೃಢಪಟ್ಟಿವೆ. ಚಿಕಿತ್ಸೆಯಿಂದ ಗುಣಮುಖರಾದ 80 ಜನರನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 471 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 874 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 23,331 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 21,153 ನೆಗಟಿವ್ ಪ್ರಕರಣ, 1,465 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 42 ಜನ ಸಾವನ್ನಪ್ಪಿದ್ದಾರೆ. ಕೋವಿಡ್-19 ದಿಂದ ಒಟ್ಟು 908 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇನ್ನು 515 ಸಕ್ರಿಯ ಪ್ರಕರಣಗಳು ಇವೆ. ಇಲ್ಲಿಯವರೆಗೆ ಒಟ್ಟು 160 ಸ್ಯಾಂಪಲ್ಗಳು ರಿಜೆಕ್ಟ್ ಆಗಿವೆ. 129 ಕಂಟೇನ್ಮೆಂಟ್ ಝೋನ್ಗಳಿವೆ. ಇನ್ಸ್ಟಿಟ್ಯೂಟ್ ಕ್ವಾಂರಂಟೈನ್ನಲ್ಲಿದ್ದ 7,343 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.