ETV Bharat / sports

ಕೊಹ್ಲಿಗೆ 250 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್: ಈ ಸಾಧನೆ ಮಾಡಿದ ಮೊದಲ ಭಾರತೀಯ! - ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಕ್ಯಾಪ್‌ನಲ್ಲಿ ಮತ್ತೊಂದು ಗರಿ ಸೇರ್ಪಡೆಯಾಗಿದೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 250 ಮಿಲಿಯನ್ ಫಾಲೋವರ್ಸ್ ಗಳಿಸಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿಯ ನಂತರ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ಇವರು 3ನೇ ಸ್ಥಾನದಲ್ಲಿದ್ದಾರೆ.

Virat Kohli
ವಿರಾಟ್ ಕೊಹ್ಲಿ
author img

By

Published : May 26, 2023, 12:58 PM IST

ನವದೆಹಲಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಖ್ಯಾತಿ ಪ್ರಪಂಚದ ಮೂಲೆ ಮೂಲೆಗಳನ್ನು ತಲುಪಿದೆ. ಈಗ ಅವರು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 250 ಮಿಲಿಯನ್ ಫಾಲೋವರ್ಸ್ ದಾಟಿದ ಮೊದಲ ಮತ್ತು ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಸಾಧನೆ ಮಾಡಿದ 'ಏಷ್ಯಾದ ಮೊದಲ ವ್ಯಕ್ತಿ' ಎಂಬ ದಾಖಲೆಯನ್ನೂ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಖ್ಯಾತ ಫುಟ್​ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 585 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅರ್ಜೆಂಟೀನಾದ ಶ್ರೇಷ್ಠ ಫುಟ್​ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ 462 ಮಿಲಿಯನ್ ಫಾಲೋವರ್ಸ್​ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ ಸಾಧನೆ ಮಾಡಿದ 3ನೇ ಅಥ್ಲೀಟ್ ವಿರಾಟ್​ ಕೊಹ್ಲಿ.

Virat reaches 250 million Instagram followers
ವಿರಾಟ್ ಕೊಹ್ಲಿಗೆ 250 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್

ಐಪಿಎಲ್​ನಲ್ಲಿ 2 ಶತಕ: ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ (ಐಪಿಎಲ್) ವಿರಾಟ್​ ಕೊಹ್ಲಿ ದಾಖಲೆಗಳ ಸುರಿಮಳೆಗೈದಿದ್ದಾರೆ. ಸತತ ಎರಡು ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಆಡಿರುವ 14 ಪಂದ್ಯಗಳಲ್ಲಿ 639 ರನ್​ ಗಳಿಸಿದರು. 6 ಅರ್ಧಶತಕ, 2 ಶತಕಗಳನ್ನು ಸಿಡಿಸಿದ್ದರು. ಈವರೆಗೆ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ.

ಈ ಶತಕದೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿತ್ತು. ಗೇಲ್ ಐಪಿಎಲ್‌ನಲ್ಲಿ ಒಟ್ಟು 6 ಶತಕ ಬಾರಿಸಿದ್ದಾರೆ. ಒಟ್ಟು ಏಳು ಶತಕದೊಂದಿಗೆ ಕೊಹ್ಲಿ, ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಧಿಕ ಬಾರಿ ಮೂರಂಕಿ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೇ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಶತಕ ಬಾರಿಸಿದ ಆರ್​ಸಿಬಿ ತಂಡದ ಮೊದಲ ಬ್ಯಾಟರ್​ ಕೂಡಾ ಹೌದು.

ವಿರಾಟ್ ಟಿ 20 ಕ್ರಿಕೆಟ್‌ನಲ್ಲಿ 8 ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಭಾರತಕ್ಕಾಗಿ ಒಂದು ಅಂತಾರಾಷ್ಟ್ರೀಯ ಶತಕ ಮತ್ತು ಆರ್‌ಸಿಬಿಗಾಗಿ ಏಳು ಶತಕಗಳು ಸೇರಿವೆ. ಅವರು ತಮ್ಮ ಟಿ 20 ವೃತ್ತಿಜೀವನದಲ್ಲಿ 11,965 ರನ್ ಗಳಿಸಿದ್ದಾರೆ. ಆರ್​ಸಿಬಿಯ ಪ್ರಯಾಣವು ಪಂದ್ಯಾವಳಿಯಲ್ಲಿ ಕೊನೆಗೊಂಡಿದ್ದರಿಂದ ವಿರಾಟ್ ಓವಲ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.

ಭಾರತ ತಂಡದ ಮಾಜಿ ನಾಯಕ ವಿರಾಟ್​ ಭವಿಷ್ಯದಲ್ಲಿ ಇನ್ನೂ ಹಲವು ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ. ಜಾಹೀರಾತು ಪ್ರಚಾರಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳಲ್ಲಿ ಒಬ್ಬರು. 2012ರಲ್ಲಿ ಏಕದಿನ ತಂಡದ ಉಪನಾಯಕನಾಗಿ ನೇಮಕಗೊಂಡರು. ಬಳಿಕ 2014-15ರಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ತಂಡದ ನಾಯಕನಾಗಿ ಪಟ್ಟ ಅಲಂಕರಿಸಿದರು. 2021-22ರಲ್ಲಿ ಟಿ20 ಮತ್ತು ಟೆಸ್ಟ್​ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು.

ಇದನ್ನೂ ಓದಿ: ದಾಖಲೆಯ ಶತಕ ಸಿಡಿಸಿದ ಕೊಹ್ಲಿ; ಫ್ಲೈಯಿಂಗ್ ಕಿಸ್‌ ನೀಡಿ ಸಂಭ್ರಮಿಸಿದ ಪತ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.