ಟೋಕಿಯೋ: ಒಲಿಂಪಿಕ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿರುವ ಭಾರತದ ಪುರುಷರ ಹಾಕಿ ತಂಡ ಜಪಾನ್ ವಿರುದ್ಧದ ಇಂದಿನ ಪಂದ್ಯದಲ್ಲೂ ಗೆಲುವು ದಾಖಲು ಮಾಡಿದೆ.
ಗ್ರೂಪ್ A ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಜಪಾನ್ ವಿರುದ್ಧ 5-3 ಗೋಲುಗಳ ಅಂತರದಿಂದ ಜಯ ಸಾಧಿಸುವ ಮೂಲಕ ನಾಲ್ಕನೇ ತಂಡವಾಗಿ ಕ್ವಾರ್ಟರ್ ಫೈನಲ್ಗೆ ಹಾಕಿದ್ದು, ಸತತವಾಗಿ ಮೂರು ಪಂದ್ಯ ಗೆದ್ದಿರುವ ದಾಖಲೆಗೆ ಪಾತ್ರವಾಗಿದೆ.
-
#TeamIndia finish the pool stage with another thumping win over Japan.
— Hockey India (@TheHockeyIndia) July 30, 2021 " class="align-text-top noRightClick twitterSection" data="
India, how's the josh? 🇮🇳#JPNvIND #HaiTayyar #IndiaKaGame #Tokyo2020 #TokyoTogether #StrongerTogether #HockeyInvites #WeAreTeamIndia #Hockey pic.twitter.com/WWzAYgzwNY
">#TeamIndia finish the pool stage with another thumping win over Japan.
— Hockey India (@TheHockeyIndia) July 30, 2021
India, how's the josh? 🇮🇳#JPNvIND #HaiTayyar #IndiaKaGame #Tokyo2020 #TokyoTogether #StrongerTogether #HockeyInvites #WeAreTeamIndia #Hockey pic.twitter.com/WWzAYgzwNY#TeamIndia finish the pool stage with another thumping win over Japan.
— Hockey India (@TheHockeyIndia) July 30, 2021
India, how's the josh? 🇮🇳#JPNvIND #HaiTayyar #IndiaKaGame #Tokyo2020 #TokyoTogether #StrongerTogether #HockeyInvites #WeAreTeamIndia #Hockey pic.twitter.com/WWzAYgzwNY
ಗ್ರೂಪ್ A ತಂಡಗಳ ಪೈಕಿ ಆಸ್ಟ್ರೇಲಿಯಾ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆದ್ದು ಮೊದಲನೇ ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೈನಾ ವಿರುದ್ಧ 3-1 ಅಂತರದಿಂದ ಗೆದ್ದು ಬೀಗಿತ್ತು.
ನ್ಯೂಜಿಲ್ಯಾಂಡ್ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಿ ಗೆಲುವು ಸಾಧಿಸಿದ್ದ ಭಾರತ ತದನಂತರ ಆಸ್ಟ್ರೇಲಿಯಾ ವಿರುದ್ಧ 7-1 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿತ್ತು. ಇದಾದ ಬಳಿಕ ತಾನು ಆಡಿರುವ ಎಲ್ಲ ಪಂದ್ಯಗಳಲ್ಲೂ ಮನಪ್ರೀತ್ ಸಿಂಗ್ ಬಳಗ ಗೆಲುವು ಸಾಧಿಸಿದೆ.
ಇದನ್ನೂ ಓದಿ: 'ಗೋಲ್ಡನ್ ಸ್ಲ್ಯಾಮ್' ಕನಸು ಭಗ್ನ: ಸೆಮಿಫೈನಲ್ನಲ್ಲಿ ಜೊಕೊವಿಚ್‌ಗೆ ಅಚ್ಚರಿಯ ಸೋಲು
ಹಾಕಿಯಲ್ಲಿ 8 ಬಂಗಾರದ ಪದಕ ಗೆದ್ದಿರುವ ಭಾರತ 1980ರ ಮಾಸ್ಕೋ ಒಲಿಂಪಿಕ್ಸ್ ಬಳಿಕ ಯಾವುದೇ ಪದಕ ಗೆದ್ದಿಲ್ಲ. ಇನ್ನು 2016ರ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದ್ದ ಭಾರತ ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್, ಸ್ಪೇನ್, ಅರ್ಜೆಂಟೈನಾ ಹಾಗೂ ಜಪಾನ್ ವಿರುದ್ಧ ಗೆಲುವು ದಾಖಲು ಮಾಡಿದ್ದು, ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋಲು ಕಂಡಿದೆ.